ದೇಶಾದ್ಯಂತ ಡಿ ಮಾರ್ಟ್ ಮಳಿಗೆಗಳ ಸ್ಥಾಪನೆ ಮುಖಾಂತರ ಸಂಚಲನ ಸೃಷ್ಟಿಸಿರುವ ಉದ್ಯಮಿ ರಾಧಾಕೃಷ್ಣನ್ ದಮಾನಿ ಇದೀಗ ವಿಶ್ವದ 100 ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನವದೆಹಲಿ (ಆ.20): ದೇಶಾದ್ಯಂತ ಡಿ ಮಾರ್ಟ್ ಮಳಿಗೆಗಳ ಸ್ಥಾಪನೆ ಮುಖಾಂತರ ಸಂಚಲನ ಸೃಷ್ಟಿಸಿರುವ ಉದ್ಯಮಿ ರಾಧಾಕೃಷ್ಣನ್ ದಮಾನಿ ಅವರು ಇದೀಗ ವಿಶ್ವದ 100 ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
19.2 ಬಿಲಿಯನ್ ಡಾಲರ್ (1.42 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿಯೊಂದಿಗೆ ರಾಧಾಕೃಷ್ಣನ್ ದಮಾನಿ ಅವರು ಬ್ಲೂಮ್‌ಬರ್ಗ್ ಕೋಟ್ಯಾಧಿಪತಿಗಳ ಸೂಚ್ಯಂಕದ ಪಟ್ಟಿಯಲ್ಲಿ 98ನೇ ರಾರಯಂಕ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಡಿ-ಮಾರ್ಟ್ ಒಡೆಯ ದಮಾನಿ ಸಂಪತ್ತು ಈಗಲೂ ಏರಿಕೆ!
ಬ್ಲೂಮ್‌ಬರ್ಗ್ ಪ್ರತಿನಿತ್ಯ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸುತ್ತಿದೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಅದಾನಿ ಗ್ರೂಪ್‌ನ ಗೌತಂ ಅದಾನಿ, ಅಜೀಂ ಪ್ರೇಮ್ ಜೀ, ಪಲ್ಲೋನ್‌ಜಿ ಮಿಸ್ತ್ರಿ , ಶಿವ ನಾಡಾರ್, ಲಕ್ಷ್ಮಿ ಮಿತ್ತಲ್ ಅವರು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಭಾರತೀಯರಾಗಿದ್ದಾರೆ.
