ಸಿಟಿ ಸ್ಕ್ಯಾನ್ ಅಪಾಯಕಾರಿ ಅಲ್ಲ: ಐಆರ್‌ಐಎ ಸ್ಪಷ್ಟನೆ, ಏಮ್ಸ್ ವೈದ್ಯನಿಗೆ ತಿರುಗೇಟು!
ಸಿಟಿ ಸ್ಕ್ಯಾನ್ ಅಪಾಯಕಾರಿ ಅಲ್ಲ: ಐಆರ್‌ಐಎ ಸ್ಪಷ್ಟನೆ| ಅಪಾಯಕಾರಿ ಎಂದಿದ್ದ ಗುಲೇರಿಯಾಗೆ ತಿರುಗೇಟು
ನವದೆಹಲಿ(ಮೇ.08): ಕೊರೋನಾದ ಸೌಮ್ಯ ರೋಗ ಲಕ್ಷಣ ಇರುವವರು ಸಿಟಿ ಸ್ಕಾ್ಯನ್ ಮಾಡಿಸಿಕೊಳ್ಳುವುದನ್ನು ಆದಷ್ಟುಕಡಿಮೆ ಮಾಡಬೇಕು. ಒಂದು ಬಾರಿ ಸ್ಕಾ್ಯನ್‌ಗೆ ಒಳಗಾಗುವುದು 300ರಿಂದ 400 ಎಕ್ಸ್ ರೇಗೆ ಸಮ ಎಂದು ಹೇಳಿದ್ದ ಏಮ್ಸ್ ನಿರ್ದೇಶಕ ಡಾ| ರಣದೀಪ್ ಗುಲೇರಿಯಾ ಅವರ ವಾದವನ್ನು ರೇಡಿಯಾಲಜಿಕಲ್ ಆ್ಯಂಡ್ ಇಮೇಜಿಂಗ್ ಅಸೋಸಿಯೇಶನ್ (ಐಆರ್‌ಐಎ) ಬುಧವಾರ ನಿರಾಕರಿಸಿದೆ.
ಕೊರೋನಾ ರೋಗ ಪತ್ತೆಯಲ್ಲಿ ಸಿಟಿ ಸ್ಕಾ್ಯನ್ ಮಹತ್ವದ್ದಾಗಿದೆ ಮತ್ತು ರೋಗದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಆದರೆ, ಸಿಟಿ ಸ್ಕಾ್ಯನ್ ಅಪಾಯಕಾರಿ ಎನ್ನುವುದು ಅವೈಜ್ಞಾನಿಕ ಹಾಗೂ ನಿರಾಧಾರ. 30-40 ವರ್ಷಗಳ ಹಿಂದೆ ಸಿಟಿ ಸ್ಕಾ್ಯನ್‌ನಿಂದ ವಿಕಿರಣಗಳು ಹೊರಸೂಸುವ ಪ್ರಮಾಣ ಅಧಿಕವಾಗಿತ್ತು.
ಆದರೆ, ಅಧುನಿಕ ಸಿಟಿ ಸ್ಸ್ಕ್ಯಾನ್‌ಗಳು ಅತೀ ಕಡಿಮೆ ವಿಕಿರಣವನ್ನು ಹೊರಸೂಸುತ್ತವೆ. ಒಂದು ಸಿಟಿ ಸ್ಕ್ಯಾನ್ ಕೇವಲ 5ರಿಂದ 10 ಎಕ್ಸ್‌ರೇ ಗಳಿಗೆ ಸಮನಾಗಿದೆ. ಹೀಗಾಗಿ ರೋಗಿಗಳು ಭಯ ಪಡುವ ಅಗತ್ಯವಿಲ್ಲ ಎಂದು ಐಆರ್‌ಎಐ ತಿಳಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona