Asianet Suvarna News Asianet Suvarna News

ಅಮಿತ್‌ ಶಾಗೆ, ಸೋನಿಯಾಗೆ ಮಹಿಳಾ ಕಮಾಂಡೋ ರಕ್ಷಣೆ

* ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರಿಗೆ ಹೆಚ್ಚಿದ ಭದ್ರತೆ

* ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಮಹಿಳಾ ಕಮಾಂಡೋಗಳ ರಕ್ಷಣೆ

* ಗಣ್ಯರ ಭದ್ರತಾ ವ್ಯವಸ್ಥೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಪರಿಚಯಿಸಿದ್ದು ಇದೇ ಮೊದಲ ಬಾರಿ

CRPF Women Commandos To Provide Security To Home Minister Amit Shah Sonia Gandhi Others san
Author
Bangalore, First Published Dec 23, 2021, 1:00 AM IST
  • Facebook
  • Twitter
  • Whatsapp

ನವದೆಹಲಿ(ಡಿ.23): ಕೇಂದ್ರ ಗೃಹ ಸಚಿವ ಅಮಿತ್‌ ಶಾ (Home Minister Amit Shah), ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi), ಪ್ರಿಯಾಂಕಾ ಗಾಂಧಿ ವಾದ್ರಾಗೆ (Priyanka Gandhi Vadra )ಇನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಮಹಿಳಾ ಕಮಾಂಡೋಗಳು ರಕ್ಷಣೆ ಒದಗಿಸಲಿದ್ದಾರೆ. ಗಣ್ಯರ ಭದ್ರತಾ ವ್ಯವಸ್ಥೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಪರಿಚಯಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಈ ಮಹಿಳಾ ಕಮಾಂಡೋಗಳು ವಿಐಪಿ ಭದ್ರತಾ ಕರ್ತವ್ಯಗಳು, ನಿರಾಯುಧ ಯುದ್ಧ, ದೇಹ ಪರೀಕ್ಷೆ ಹಾಗೂ ವಿಶೇಷ ಶಸ್ತ್ರಾಸ್ತ್ರಗಳ ಬಳಕೆ ಒಳಗೊಂಡ 10 ವಾರಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. 2022ರ ಜನವರಿ ಎರಡನೇ ವಾರದಿಂದ 32 ಮಹಿಳಾ ಸಿಬ್ಬಂದಿಯನ್ನು ವಿಐಪಿ ಭದ್ರತಾ ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರೊಂದಿಗೆ ಹೆಚ್ಚಿನ ಭದ್ರತಾ ಅಪಾಯವನ್ನು ಹೊಂದಿರುವ ವ್ಯಕ್ತಿಗಳ ಭದ್ರತೆಗೂ ಮಹಿಳಾ ಕಮಾಂಡೋಗಳ (women commandos)ನಿಯೋಜನೆಯಾಗಲಿದೆ.

ಮುಂಬರುವ ಪಂಚ ರಾಜ್ಯಗಳ ಚುನಾವಣೆಯ ವೇಳೆ ಈ ನಾಯಕರುಗಳ ರಕ್ಷಣೆಗೆ ಮಹಿಳಾ ಸಿಆರ್ ಪಿಎಫ್ (Central Reserve Police Force)ಕಮಾಂಡೋಗಳು ಇರಲಿದ್ದಾರೆ. 
ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ (CRPF) ತನ್ನ ವಿಐಪಿ ಭದ್ರತಾ ವಿಭಾಗದಲ್ಲಿ 32 ಮಹಿಳಾ ಕಮಾಂಡೋಗಳ ಮೊದಲ ತುಕಡಿಯನ್ನು ಸಿದ್ಧ ಮಾಡಿದ್ದು, ದೆಹಲಿ ಮೂಲದ ವಿವಿಐಪಿಗಳು ಹಾಗೂ ಝಡ್ ಪ್ಲಸ್ ಭದ್ರತೆ ಹೊಂದಿರುವ ವ್ಯಕ್ತಿಗಳ ಭದ್ರತೆಗೆ ನಿಯೋಜನೆಯಾಗಲಿದ್ದಾರೆ. ಅಮಿತ್ ಷಾ, ಸೋನಿಯಾ ಗಾಂಧಿ ಕುಟುಂಬವಲ್ಲದೆ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ (Manmohan Singh ) ಹಾಗೂ ಅವರ ಪತ್ನಿ ಗುರುಶರಣ್ ಕೌರ್ ( Gursharan Kaur)ಅವರಿಗೂ ಈ ವಿಭಾಗ ಭದ್ರತೆ ನೀಡಲಿದೆ.

ವಿಐಪಿಗಳ ಗೃಹ ರಕ್ಷಣಾ ತಂಡದ ಭಾಗವಾಗಿ ಮಹಿಳಾ ಕಮಾಂಡೋಗಳನ್ನು ನಿಯೋಜನೆ ಮಾಡಲಾಗಿದೆ. ಹಾಗೇನಾದರೂ ಈ ರಾಜಕೀಯ ವ್ಯಕ್ತಿಗಳು ಮುಂಬರುವ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab), ಉತ್ತರಾಖಂಡ್ (Uttarakhand), ಮಣಿಪುರ (Manipur)ಹಾಗೂ ಗೋವಾ (Goa) ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ತೆರಳುವ ವೇಳೆ ಅವರಿಗೆ ಅಗತ್ಯವಿದ್ದಲ್ಲಿ ವೈಯಕ್ತಿಕ ಭದ್ರತೆಯನ್ನೂ ನೀಡಲಿದ್ದಾರೆ. ಈ ಕಮಾಂಡೋಗಳು ಗೃಹ ರಕ್ಷಣೆಗಾಗಿ (house protection) ನಿಯೋಜಿಸಲ್ಪಟ್ಟಿದ್ದ ವೇಳೆ ಮಹಿಳಾ ಸಂದರ್ಶಕರನ್ನು ಪರಿಶೀಲನೆ ಮಾಡುವುದರೊಂದಿಗೆ, ಪ್ರವಾಸದ ಸಂದರ್ಭದಲ್ಲಿ ವಿಐಪಿಗಳ ಮನೆಯ ಒಟ್ಟಾರೆ ಭದ್ರತೆಯ ಭಾಗವಾಗಿರಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿಚಾರದಲ್ಲಿ ಅವರು ಹೆಚ್ಚಿನ ಭದ್ರತೆಯನ್ನು ಒದಗಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Shivaji statue Vandalism ಕನ್ನಡಿಗರ ಮೇಲೆ ಗೂಬೆ ಕೂರಿಸಿದ ಶಿವಸೇನೆ,ದೇಶದ್ರೋಹ ಕೇಸ್ ಹಾಕಲು ಶಾಗೆ ದೂರು!
ಮಹಿಳಾ ಕಮಾಂಡೋಗಳು ಕೂಡ ಪುರುಷ ಕಮಾಂಡೋಗಳಂತೆ ಕೆಲಸದ ಸಮಯದಲ್ಲಿ ಅಗತ್ಯವಿರುವ ಶಸ್ತ್ರಾಸ್ತ್ರಗಳು (arms), ಬ್ಯಾಲಿಸ್ಟಿಕ್ ರಕ್ಷಣೆ (ballistic protection )ಮತ್ತು ಇತರ ಗ್ಯಾಜೆಟ್ ಗಳನ್ನು (gadgets) ಬಳಕೆ ಮಾಡುತ್ತಾರೆ. ಮುಂದಿನ ವರ್ಷ ಫೆಬ್ರವರಿ (February) ಹಾಗೂ ಮಾರ್ಚ್ ನಲ್ಲಿ (March) ಪಂಚ ರಾಜ್ಯಗಳ ಚುನಾವಣೆ (five states Election)ನಡೆಯಲಿದ್ದು, ಚುನಾವಣೆಗೂ ಮುನ್ನ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ಸಚಿವರು ಬಿರುಸಿನ ಪ್ರವಾಸ ಕೈಗೊಳ್ಳುವ ನಿರೀಕ್ಷೆ ಇದೆ. ಆ ನಿಟ್ಟಿನಲ್ಲಿ ಅವರಿಗೆ ನೀಡಲಿರುವ ಭದ್ರತೆ ಮಹತ್ವ ಪಡೆದಿದೆ.  ಕಳೆದ ಸೆಪ್ಟೆಂಬರ್ ನಲ್ಲಿಯೇ ವಿವಿಐಪಿ ಭದ್ರತೆಗೆ ಮಹಿಳಾ ಸಿಆರ್ ಪಿಎಫ್ ಕಮಾಂಡೋಗಳನ್ನು ಬಳಕೆ ಮಾಡುವ ಕುರಿತಾಗಿ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿತ್ತು ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow Us:
Download App:
  • android
  • ios