ನವದೆಹಲಿಜೂ.15): ದಿನಕ್ಕೆ ಕನಿಷ್ಠ 1 ಕೋಟಿ ರು. ದುಡಿಯುವ ಸುಪ್ರೀಂಕೋರ್ಟ್‌ನ ಡಜನ್‌ಗೂ ಹೆಚ್ಚು ಸುಪ್ರಸಿದ್ಧ ವಕೀಲರು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಧನಸಹಾಯ ನೀಡಲೆಂದು ಸ್ಥಾಪಿಸಿದ ನಿಧಿಗೆ 1 ರು. ಕೂಡ ದೇಣಿಗೆ ನೀಡದೆ ತೀವ್ರ ಟೀಕೆಗೆ ಒಳಗಾಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದೆ ಪರಿತಪಿಸುತ್ತಿರುವ ಸುಪ್ರೀಂಕೋರ್ಟ್‌ನ ವಕೀಲರಿಗೆ 20 ಸಾವಿರ ರು. ಧನಸಹಾಯ ನೀಡಬೇಕೆಂದು ಸುಪ್ರೀಂಕೋರ್ಟ್‌ನ ಬಾರ್‌ ಅಸೋಸಿಯೇಷನ್‌ ನಿರ್ಧರಿಸಿ ಒಂದು ನಿಧಿ ಸ್ಥಾಪಿಸಿದೆ. ಅದಕ್ಕೆ ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗದ ಸಾಕಷ್ಟುವಕೀಲರು ದೇಣಿಗೆ ನೀಡಿ ಒಟ್ಟು 96 ಲಕ್ಷ ರು. ಸಂಗ್ರಹವಾಗಿದೆ. ಆದರೆ, ಲಾಕ್‌ಡೌನ್‌ಗಿಂತ ಮುಂಚೆ ದಿನಕ್ಕೆ ಸರಾಸರಿ 1 ಕೋಟಿ ರು.ಗಿಂತ ಹೆಚ್ಚು ದುಡಿಯುತ್ತಿದ್ದ ಡಜನ್‌ಗೂ ಹೆಚ್ಚು ವಕೀಲರು ನಯಾಪೈಸೆ ನೆರವು ನೀಡಿಲ್ಲ.

ಕೊರೋನಾ ಆತಂಕ: ಜೂ.1 ರಿಂದ ಹೈಕೋರ್ಟ್ ಕಲಾಪ ಆರಂಭ ಆದ್ರೆ ಷರತ್ತು ಅನ್ವಯ..!

ಇನ್ನು, ತಿಂಗಳಿಗೆ 1 ಕೋಟಿ ರು.ಗಿಂತ ಹೆಚ್ಚು ದುಡಿಯುವ 100ಕ್ಕೂ ಹೆಚ್ಚು ವಕೀಲರು ಸುಪ್ರೀಂಕೋರ್ಟ್‌ನಲ್ಲಿದ್ದಾರೆ. ಅವರಲ್ಲೂ ಹೆಚ್ಚಿನವರು ನೆರವು ನೀಡಿಲ್ಲ. ಹಾಗೆಯೇ, ವಲಸೆ ಕಾರ್ಮಿಕರ ಸಂಕಷ್ಟಪರಿಹರಿಸಲು ಸುಪ್ರೀಂಕೋರ್ಟ್‌ ಮಧ್ಯಪ್ರವೇಶ ಮಾಡಬೇಕೆಂದು ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆÜದಿದ್ದ 22 ಹಿರಿಯ ರಾಜಕಾರಣಿ-ವಕೀಲರು ಕೂಡ ಯಾವುದೇ ದೇಣಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.