ಪ್ರಧಾನಿ ಮೋದಿ ಕಟ್ಟಾ ಅಭಿಮಾನಿಯಿಂದ 815 ಕಿಲೋಮೀಟರ್ ಕಾಲ್ನಡಿಗೆ ಮೋದಿ ಭೇಟಿಯಾಗಿ ಮಾತುಕತೆ ನಡೆಸಲು ಈ ಸಾಹಸಕ್ಕಿಳಿದ ಅಭಿಮಾನಿ ನಜೀರ್ ಜಮ್ಮು ಕಾಶ್ಮೀರದ ಮೋದಿ ಅಭಿಮಾನಿ ಫಾಹಿಮ್ ನಜೀರ್ ಶಾನಿಂದ ಅತೀದೊಡ್ಡ ನಡಿಗೆ

ನವದೆಹಲಿ(ಆ.23): ಒಂದಲ್ಲ, ಎರಡಲ್ಲ, ಬರೋಬ್ಬರಿ 815 ಕಿಲೋಮೀಟರ್. ಕಾರು ಪ್ರಯಾಣವಾದರೆ 10 ರಿಂದ 12 ಗಂಟೆ, ಬಸ್ ಪ್ರಯಾಣವಾದರೆ 13 ರಿಂದ 15 ಗಂಟೆ ಬೇಕು. ಆದರೆ ಈ ದೂರವನ್ನು ಇಲ್ಲೋರ್ವ ಕಾಲ್ನಡಿಗೆಯಿಂದ ಪ್ರಯಾಣಿಸುವ ಸಾಹಸಕ್ಕೆ ಇಳಿದಿದ್ದಾನೆ. ಆತ ಪ್ರಧಾನಿ ನರೇಂದ್ರ ಮೋದಿ ಕಟ್ಟಾ ಅಭಿಮಾನಿ ಫಾಹಿಮ್ ನಜೀರ್ ಶಾ.

ಭಾರತಕ್ಕೆ ಬಂದಿಳಿದ ಅಪ್ಘಾನ್ ಸಚಿವರು: ಪಿಎಂ ಮೋದಿ, ವಾಯುಪಡೆಗೆ ಧನ್ಯವಾದ!

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನಿವಾಸಿಯಾಗಿರುವ 28 ವರ್ಷದ ಫಾಹಿಮ್ ನಜೀರ್ ಶಾ ಪ್ರಧಾನಿ ಮೋದಿ ಅಭಿಮಾನಿ. ಕಳೆದೆರಡು ವರ್ಷದಿಂದ ಮೋದಿ ಭೇಟಿಯಾಗಲು ಹಲವು ಪ್ರಯತ್ನ ಮಾಡಿ ನಿರಾಸೆ ಅನುಭವಿಸಿರುವ ಫಾಹಿಮ್ ಇದೀಗ ಕಾಲ್ನಡಿಗೆ ಜಾಥಾ ಮೂಲಕ ಮೋದಿ ಭೇಟಿಯಾಗುವ ಸಾಹಸಕ್ಕೆ ಇಳಿದಿದ್ದಾನೆ.

ಫಾಹಿಮ್ ಕಾಲ್ನಡಿ ಶ್ರೀಗರದಿಂದ ಆರಂಭಗೊಂಡಿದೆ. ಶ್ರೀನಗರದಿಂದ ಹೊರಟ ಫಾಹಿಮ್ ಇದೀಗ ಜಮ್ಮು ಮತ್ತು ಕಾಶ್ಮೀರದ ಉಧಮಪುರ ಜಿಲ್ಲೆ ತಲುಪಿದ್ದಾನೆ. ಈಗಾಲೇ 200 ಕಿ.ಮೀ ದೂರ ಕಾಲ್ನಡಿ ಮುಗಿಸಿರುವ ಫಾಹಿಮ್, ಅದೆಷ್ಟೆ ಕಷ್ಟವಾದರೂ ದೆಹಲಿಗೆ ಕಾಲ್ನಡಿಗೆಯಲ್ಲೇ ತಲುಪುದಾಗಿ ಹೇಳಿದ್ದಾನೆ.

ಇನ್ನು ಇದೆ ಮೋದಿ ಅಲೆ, ಉತ್ತರದಲ್ಲಿ ಭದ್ರವಾಯ್ತಾ ಯೋಗಿ ನೆಲೆ?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ!

ದೇಶದ ಬಗ್ಗೆ ಪ್ರಧಾನಿ ಮೋದಿಗಿರುವು ಕಾಳಜಿ, ಯೋಜನೆಗಳು, ಅದನ್ನು ಅನುಷ್ಠಾನಕ್ಕೆ ತರುವ ರೀತಿಗಳ ನನ್ನನ್ನು ಪ್ರಭಾವಿತನಾಗಿ ಮಾಡಿದೆ. ಮೋದಿಯ ಕಟ್ಟಾ ಅಭಿಮಾನಿಯಾಗಿದ್ದೇನೆ. ನನ್ನ ಉದ್ದೇಶ ಇಷ್ಟೆ. ನಾನು ಮೋದಿ ಭೇಟಿಯಾಗಿ ಮಾತನಾಡಬೇಕು ಎಂದು ಫಹೀಮ್ ಹೇಳಿದ್ದಾನೆ.

ಕಳೆದ ಎರಡೂವರೆ ವರ್ಷದಲ್ಲಿ ಮೋದಿ ಭೇಟಿಯಾಗಲು ಫಾಹಿಮ್ ಹಲವು ಪ್ರಯತ್ನಗಳನ್ನು ಮಾಡಿದ್ದಾನೆ. ಕಳೆದ ಬಾರಿ ಶ್ರೀನಗರಕ್ಕೆ ಮೋದಿ ಭೇಟಿ ನೀಡಿದಾಗ ಫಾಹಿಮ್ ಪ್ರಧಾನಿ ಮಾತನಾಡಿರುವ ಪ್ರಯತ್ನ ಮಾಡಿದ್ದಾನೆ. ಆದರೆ ಪ್ರಧಾನಿ ಭದ್ರತಾ ಸಿಬ್ಬಂಧಿಗಳು ಅವಕಾಶ ನೀಡಿರಲಿಲ್ಲ. ಹೀಗಾಗಿ ಫಾಹಿಮ್ ನಿರಾಸೆಗೊಂಡಿದ್ದ.

ಈ ಬಾರಿ ಕಾಲ್ನಾಡಿಗೆ ಮೂಲಕ ಪ್ರಧಾನಿ ಗಮನಸೆಳೆಯುವ ಯತ್ನಕ್ಕೆ ಫಾಹಿಮ್ ಮುಂದಾಗಿದ್ದಾನೆ. ಈ ಮೂಲಕ ತನ್ನ ನಿಸ್ವಾರ್ಥ ಶ್ರಮವನ್ನು ಮೋದಿ ಗುರುತಿಸುತ್ತಾರೆ. ಜೊತೆಗೆ ಮಾತನಾಡುವ ಅವಕಾಶ ಸಿಗಲಿದೆ ಅನ್ನೋ ವಿಶ್ವಾಸದಲ್ಲಿ ಕಾಲ್ನಡಿಗೆ ಮುಂದುವರಿಸಿದ್ದಾನೆ.

Scroll to load tweet…

ಶ್ರೀಗನರದಲ್ಲಿ ಎಲೆಕ್ಟ್ರೀಶಿಯನ್ ಆಗಿ ಕೆಲಸ ಮಾಡುತ್ತಿರುವ ಫಾಹಿಮ್, ಮೋದಿ ಆಡಳಿತಕ್ಕೆ ಮನಸೋತಿದ್ದಾನೆ. 2019ರಲ್ಲಿ ಆರ್ಟಿಕಲ 370ರ ರದ್ದತಿಯಿಂದ ಜಮ್ಮು ಕಾಶ್ಮೀರ ಸಂಪೂರ್ಣ ಬದಲಾಗಿದೆ. ಈ ಹಿಂದಿನ ಆತಂಕದ ವಾತಾವರಣ ಈಗಿಲ್ಲ. ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದೆ ಎಂದು ಫಾಹಿಮ್ ನಜೀರ್ ಹೇಳಿದ್ದಾನೆ.