ತಿರುವನಂತಪುರಂ (ಅ. 15): ವಾಟ್ಸಪ್, ಫೇಸ್‌ಬುಕ್, ಟೆಲಿಗ್ರಾಂ ಸಾಮಾಜಿಕ ಮಾಧ್ಯಮಗಳಲ್ಲಿಗ್ರೂಪ್‌ಗಳನ್ನು ಸೃಷ್ಟಿ ಮಾಡಿಕೊಂಡು, ಅವುಗಳಲ್ಲಿ ಚಿಕ್ಕಮಕ್ಕಳ ಅಶ್ಲೀಲ ವಿಡಿಯೋಗಳನ್ನು (ಚೈಲ್ಡ್ ಪೋರ್ನೋಗ್ರಫಿ) ಹರಿಬಿಡುತ್ತಿದ್ದ ಜಾಲವನ್ನು ಕೇರಳ ಪೊಲೀಸರು ಭೇದಿಸಿದ್ದು, 12 ಮಂದಿಯನ್ನು ಬಂಧಿಸಿ, 20 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಶಾಪ್ ಡಿಸ್ಪೇಯಲ್ಲಿ ಗಂಟೆಗಟ್ಟಲೇ ಪ್ಲೇ ಆದ ನೀಲಿ ಚಿತ್ರ.. ಯಾರೇನು ಮಾಡಕಾಗಿಲ್ಲ!

ಅಲ್ಲದೆ, ಈ ಸಮೂಹದ ಸದಸ್ಯರಾಗಿದ್ದ 7 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಚೈಲ್ಡ್ ಪೋರ್ನೋಗ್ರಫಿ ಜಾಲವು ಅಂತಾರಾಷ್ಟ್ರೀಯ ಜಾಲವಾಗಿದ್ದು, ಜಾಲದಲ್ಲಿ ಕೇರಳಿಗರು ಕೂಡ ಇದ್ದರು. 29  ಸೋಷಿಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ಈ ವಿಡಿಯೋಗಳು ಹರಿದಾಡುತ್ತಿವೆ ಎಂಬ ಮಾಹಿತಿಯು ಜರ್ಮನಿಯಲ್ಲಿ ಬಂಧಿತನಾಗಿ 5 ವರ್ಷ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯೊಬ್ಬನಿಂದ ಲಭಿಸಿತ್ತು. ಇದರ ಆಧಾರದಲ್ಲಿ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆ ‘ಇಂಟರ್‌ಪೋಲ್’ ಸಹಕಾರದೊಂ ದಿಗೆ ಕೇರಳದ 21 ಸ್ಥಳಗಳಲ್ಲಿ ಪೊಲೀಸರು ದಾಳಿ ಮಾಡಿದ್ದು, ಜಾಲವನ್ನು ಭೇದಿಸಿದ್ದಾರೆ.

ಚೈಲ್ಡ್ ಪೋರ್ನೋಗ್ರಫಿವಾಟ್ಸಪ್ ಸಮೂಹದಲ್ಲಿ ಕೇರಳದವರು ಸೇರಿ ಸುಮಾರು 50 ಸಾವಿರ ಮಂದಿ ಸದಸ್ಯರಿದ್ದಾರೆ. ದಾಳಿ ಆರಂಭವಾದ ಕೂಡಲೇ ಹೆದರಿದ ಈ ಗ್ರೂಪ್‌ಗಳಲ್ಲಿನ ಸುಮಾರು ೨೫ ಸಾವಿರ ಸದಸ್ಯರು ಗ್ರೂಪ್‌ನಿಂದ ‘ಎಕ್ಸಿಟ್’ ಆಗಿದ್ದಾರೆ ಜಾಲದಲ್ಲಿ ಇನ್ನೂ ಹಲವರು ಇರುವ ಬಗ್ಗೆ ಮಾಹಿತಿ ಇದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಶಿಕ್ಷೆ ಏನು?: ಈ ರೀತಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹರಿಬಿಡುವ ಅಪರಾಧಿಗಳಿಗೆ 5 ವರ್ಷದವವರೆಗೆ ಜೈಲು ಹಾಗೂ 10 ಲಕ್ಷ ರು.ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.