ಪಟನಾ(ಜು.08): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದ ಅವರ ಬಂಧುವೊಬ್ಬರಿಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ನಿತೀಶ್‌ ಅವರಿಗೆ ಸೋಂಕಿನ ಭೀತಿ ಕಾಡಲಾರಂಭಿಸಿದ್ದು, ಮುಖ್ಯಮಂತ್ರಿಗಳ ಮನೆಯಲ್ಲೇ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳ ಮನೆಯಲ್ಲಿ ಬಿಹಾರ ಆರೋಗ್ಯ ಇಲಾಖೆ ವೆಂಟಿಲೇಟರ್‌ ಸೌಲಭ್ಯ ಹೊಂದಿದ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದೆ. ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರನ್ನೂ ನಿಯೋಜನೆ ಮಾಡಿದೆ.

ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌!

ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿರುವಾಗ, ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರಿಗೆಂದು ಆಸ್ಪತ್ರೆ ತೆರೆದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

#NewsIN100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"