Asianet Suvarna News Asianet Suvarna News

ಕೊರೋನಾ 2ನೇ ಅಲೆ ಸೂಪರ್‌ಫಾಸ್ಟ್‌!

ಕೊರೋನಾ 2ನೇ ಅಲೆ ಸೂಪರ್‌ಫಾಸ್ಟ್‌| 18ರಿಂದ 50 ಸಾವಿರಕ್ಕೆ 17 ದಿನದಲ್ಲೇ ಸೋಂಕು ಏರಿಕೆ| ಮೊದಲ ಅಲೆ ವೇಳೆ 32 ದಿನ ಹಿಡಿದಿತ್ತು| ಮಹಾರಾಷ್ಟ್ರದಲ್ಲಿ 9 ದಿನಕ್ಕೇ 11ರಿಂದ 22 ಸಾವಿರ ತಲುಪಲು ಕಳೆದ ವರ್ಷ 31 ದಿನ ಆಗಿತ್ತು

Covid 2nd Wave Spreadinf Faster Than First Wave In india pod
Author
Bangalore, First Published Mar 31, 2021, 7:26 AM IST

ನವದೆಹಲಿ(ಮಾ.31): ದೇಶಾದ್ಯಂತ ಕೊರೋನಾ ವೈರಸ್‌ನ 2ನೇ ಅಲೆಯ ತೀವ್ರತೆಯು ಮೊದಲ ಅಲೆಗಿಂತಲೂ ಹೆಚ್ಚು ತೀಕ್ಷ$್ಣವಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮತ್ತಷ್ಟುವೇಗವಾಗಿ ಹಬ್ಬುವ ಆತಂಕ ಸೃಷ್ಟಿಯಾಗಿದೆ. ಕೊರೋನಾ 2ನೇ ಅಲೆಯ ಪ್ರಕರಣಗಳ ಸಂಖ್ಯೆ ಹೆಚ್ಚಳವು ಮೊದಲನೆಯ ಅಲೆಯ ಪ್ರಕರಣಗಳಿಗಿಂತ ವೇಗವಾಗಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ.

ಮೊದಲ ಅಲೆಯ ವೇಳೆ ದೈನಂದಿನ ಕೇಸ್‌ಗಳ ಸಂಖ್ಯೆ 18 ಸಾವಿರದಿಂದ 50 ಸಾವಿರಕ್ಕೆ ತಲುಪಲು 32 ದಿನ ತೆಗೆದುಕೊಂಡಿತ್ತು. ಆದರೆ ಈಗ ಕೇವಲ 17 ದಿನಗಳಲ್ಲಿ 50 ಸಾವಿರದ ಸಂಖ್ಯೆ ತಲುಪುತ್ತಿದೆ. ಅಂದರೆ, ‘ವೈರಸ್‌ನ ಶಕ್ತಿ ಜಾಸ್ತಿ ಆಗಿದ್ದು ಹರಡುವಿಕೆಯ ವೇಗವೂ ತೀವ್ರವಾಗಿದೆ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನು ರಾಜ್ಯವಾರು ನೋಡುವುದಾದರೆ ಮಹಾರಾಷ್ಟ್ರದಲ್ಲಿ ಈಗ ಕೇವಲ 9 ದಿನಗಳಲ್ಲಿ ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ 11 ಸಾವಿರದಿಂದ 21,900ಕ್ಕೆ ತಲುಪಿದೆ. ಮೊದಲ ಹಂತದಲ್ಲಿ ಈ ಸಂಖ್ಯೆ ತಲುಪಲು 31 ದಿನ ತೆಗೆದುಕೊಂಡಿತ್ತು.

ಅದೇ ರೀತಿ ಛತ್ತೀಸ್‌ಗಢದಲ್ಲಿ 24 ದಿನಗಳಲ್ಲಿ ದೈನಂದಿನ ಕೇಸ್‌ಗಳ ಸಂಖ್ಯೆ 200ರಿಂದ 1400ಕ್ಕೆ ಮುಟ್ಟಿದೆ. ಮೊದಲ ಅಲೆಯ ವೇಳೆ ಈ ಸಂಖ್ಯೆ ತಲುಪಲು 40 ದಿನ ಆಗಿತ್ತು ಎಂದು ಅಂಕಿ- ಸಂಖ್ಯೆಗಳಿಂದ ತಿಳಿದುಬಂದಿದೆ.

ಕೇರಳ, ಪಂಜಾಬ್‌, ಗುಜರಾತ್‌ ಮತ್ತು ಛತ್ತೀಸ್‌ಗಢದಲ್ಲೂ ದೈನಂದಿನ ಕೇಸ್‌ಗಳ ಸಂಖ್ಯೆ ಮೊದಲ ಅಲೆಯ ವೇಳೆ ಕಂಡುಬಂದಿದ್ದಕ್ಕಿಂತಲೂ ವೇಗವಾಗಿ ಹೆಚ್ಚುತ್ತಿದೆ. ಒಟ್ಟಾರೆ ಸೋಂಕಿನ ಪೈಕಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್‌ ಹಾಗೂ ಛತ್ತೀಸ್‌ಗಢದಲ್ಲೇ ಶೇ.80.17ರಷ್ಟುಪ್ರಮಾಣವಿದೆ.

ದೇಶ/ರಾಜ್ಯ/ನಗರ 1ನೇ ಅಲೆ (ನಿತ್ಯ ಕೇಸ್‌) ವೇಗ 2ನೇ ಅಲೆ (ನಿತ್ಯ ಕೇಸ್‌) ವೇಗ

ಭಾರತ 18000-50000 32 ದಿನ 18000-50000 17 ದಿನ

ಮಹಾರಾಷ್ಟ್ರ 11000-22000 31 ದಿನ 11000-22000 9 ದಿನ

ಮುಂಬೈ 850-2000 31 ದಿನ 850-2000 24 ದಿನ

ಗುಜರಾತ್‌ 900-1500 30 ದಿನ 900-1500 6 ದಿನ

ಪಂಜಾಬ್‌ 1500-2600 13 ದಿನ 1500-2600 10 ದಿನ

ಛತ್ತೀಸ್‌ಗಢ 250-1800 40 ದಿನ 250-1800 24 ದಿನ

Follow Us:
Download App:
  • android
  • ios