ನವದೆಹಲಿ(ಏ.04): ಕೊರೋನಾ 2 ಡೋಸ್‌ ಲಸಿಕೆ ಪಡೆದವರಿಗೂ ಸೋಂಕು ಹಬ್ಬುವುದು ಏಕೆ ಎಂಬ ಪ್ರಶ್ನೆ ಮತ್ತು ಅನುಮಾನಗಳಿಗೆ ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್‌) ಮುಖ್ಯಸ್ಥ ಬಲರಾಂ ಭಾರ್ಗವ ಸ್ಪಷ್ಟಉತ್ತರ ನೀಡಿದ್ದಾರೆ.

‘ಈಗ ಲಭ್ಯವಿರುವ ಎಲ್ಲಾ ಲಸಿಕೆಗಳು ವ್ಯಕ್ತಿಗಳಲ್ಲಿ ಗಂಭೀರ ಪ್ರಮಾಣದ ಸೋಂಕು ತಗುಲುವುದನ್ನು ಮತ್ತು ಅದರಿಂದ ಸಾವು ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಕಾಯಿಲೆಯನ್ನು ಸೌಮ್ಯಗೊಳಿಸುವ ಲಸಿಕೆ. ಎರಡೂ ಡೋಸ್‌ ಪಡೆದ ನಂತರ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ’ ಎಂದಿದ್ದಾರೆ.

ರಮ್ಜಾನ್‌ ವೇಳೆ ಲಸಿಕೆ ಸ್ವೀಕಾರ ಅನೂರ್ಜಿತ ಅಲ್ಲ: ಮುಸ್ಲಿಂ ಧರ್ಮಗುರುಗಳು

 

ರಂಜಾನ್‌ ಉಪವಾಸದ ವೇಳೆ ಕೊರೋನಾ ಲಸಿಕೆ ಪಡೆಯಬಹುದು, ಅದು ಅನೂರ್ಜಿತ ಅಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಉಪವಾಸ ಅವಧಿಯಲ್ಲಿ ಲಸಿಕೆ ಪಡೆಯುವುದನ್ನು ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ.

‘ಲಸಿಕೆಯು ರಕ್ತನಾಳಗಳನ್ನು ಸೇರುತ್ತದೆಯೇ ಹೊರತು, ಹೊಟ್ಟೆಸೇರುವುದಿಲ್ಲ. ಅದೂ ಅಲ್ಲದೆ ಲಸಿಕೆಯನ್ನು ಆಹಾರ ಅಥವಾ ನೀರು ಎಂದು ಪರಿಗಣಿಸಲ್ಲ. ಹಾಗಾಗಿ ಲಸಿಕೆ ಪಡೆದರೆ ಅದು ರೋಜಾ (ಉಪವಾಸ)ದ ಉಲ್ಲಂಘನೆಯಾಗುವುದಿಲ್ಲ’ ಎಂದು ಮಧ್ಯಪ್ರದೇಶದ ಲಖನೌನಲ್ಲಿರುವ ಪ್ರಖ್ಯಾತ ದಾರುಲ್‌ ಇಫ್ತಾ ಫರಂಗಿ ಮಹಲ್‌ ಫತ್ವಾ ಹೊರಡಿಸಿದೆ.