* ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದ್ದ ಕೇಂದ್ರ* ಪ್ಲಾಸ್ಮಾ ಆಯ್ತು, ರೆಮ್‌ಡೆಸಿವಿರ್‌ಗೂ ತಿಲಾಂಜಲಿ ಸಾಧ್ಯತೆ* ದಿಲ್ಲಿಯ ಪ್ರತಿಷ್ಠಿತ ಗಂಗಾರಾಂ ಆಸ್ಪತ್ರೆ ಮುಖ್ಯಸ್ಥ ಡಾ| ಡಿ.ಎಸ್. ರಾಣಾ ಸುಳಿವು
ನವದೆಹಲಿ(ಮೇ.20): ಇತ್ತೀಚೆಗೆ ಕೊರೋನಾ ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದ್ದ ಕೇಂದ್ರ ಸರ್ಕಾರ, ಇನ್ನು ರೆಮ್‌ಡೆಸಿವಿರ್ ಚುಚ್ಚುಮದ್ದನ್ನೂ ಕೈಬಿಡುವ ಸಾಧ್ಯತೆ ಇದೆ.
ಈ ಬಗ್ಗೆ ದಿಲ್ಲಿಯ ಪ್ರತಿಷ್ಠಿತ ಗಂಗಾರಾಂ ಆಸ್ಪತ್ರೆ ಮುಖ್ಯಸ್ಥ ಡಾ| ಡಿ.ಎಸ್. ರಾಣಾ ಸುಳಿವು ನೀಡಿದ್ದಾರೆ. ‘ಕೊರೋನಾ ಸೋಂಕಿತರ ಮೇಲೆ ಕೆಲವು ಸಾಬೀತುಪಡಿಸಲು ಆಗದ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಅವುಗಳಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದು ಕೂಡ ಒಂದು. ಪರಿಣಾಮಕಾರಿ ಎಂದು ಸಾಬೀತಾಗದ ಇಂಥ ಚಿಕಿತ್ಸೆಗಳನ್ನು ಕೈಬಿಡಬೇಕು’ ಎಂದು ಅವರು ಹೇಳಿದ್ದಾರೆ.
‘ಪ್ಲಾಸ್ಮಾ ಥೆರಪಿಯನ್ನು ಈ ಹಿಂದೆ ವೈಜ್ಞಾನಿಕ ಆಧಾರದಲ್ಲಿ ಪ್ರಯೋಗಿಸಲಾಗುತ್ತಿತ್ತು. ಆದರೆ ಅದು ಪರಿಣಾಮಕಾರಿ ಎಂದು ಸಾಬೀತಾಗಲಿಲ್ಲ. ಹಾಗಾಗಿಯೇ ಕೈಬಿಡಲಾಗಿದೆ’ ಎಂದಿದ್ದಾರೆ.
ಎರಡನೇ ಕೊರೋನಾಅಲೆಯಲ್ಲಿ ಗಂಭೀರ ಸೋಂಕಿತರು ಹೆಚ್ಚಾದ ಕಾರಣ ಅವರಿಗೆ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ವ್ಯಾಪಕವಾಗಿ ಪ್ರಯೋಗಿಸಲಾಗುತ್ತಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಉತ್ಪಾದನೆ ಆಗದೇ ದೇಶಾದ್ಯಂತ ಈ ಚುಚ್ಚುಮದ್ದಿಗೆ ಹಾಹಾಕಾರ ಸೃಷ್ಟಿಯಾಗಿದೆ. ಕಾಳಸಂತೆಯಲ್ಲಿ ಕೂಡ ಇದು ಬಿಕರಿ ಆಗುತ್ತಿದೆ. ಶ್ವಾಸಕೋಶದಲ್ಲಿನ ಸೋಂಕನ್ನು ಗುಣಪಡಿಸುವ ಸಾಮರ್ಥ್ಯ ರೆಮ್‌ಡೆಸಿವಿರ್‌ಗೆ ಇದೆ ಎಂದು ಹೇಳಲಾಗುತ್ತದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
