Asianet Suvarna News Asianet Suvarna News

ರಾಜನಾಥ್‌ ಸಿಂಗ್‌ಗೆ ಕೈ ತುಂಬಾ ಕೆಲಸ; 'ಪಂಚವಟಿ' ಯಲ್ಲಿ ಮೋದಿ

ರಾಮಾಯಣ ವೀಕ್ಷಿಸುವ ಪ್ರಕಾಶ ಜಾವದೇಕರ್ ತರಕಾರಿ ಹೆಚ್ಚಲು ಕುಳಿತಿದ್ದ ಹರ್ಷವರ್ಧನ್, ತೋಟ ಅಗೆಯುತ್ತಿದ್ದ ಸಂಜೀವ್ ಬಲಿಯಾನ್ ಚಿತ್ರಗಳು ಟೀಕೆಗೆ ಒಳಗಾದ ನಂತರ ಪ್ರಧಾನಿ ಮೋದಿ ಅನಾವಶ್ಯಕ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕದಂತೆ ಸಚಿವರಿಗೆ ತಾಕೀತು ಮಾಡಿದ್ದಾರೆ.

Covid 19 Rajnath Singh Discusses Lockdown Situation With Group Of Ministers
Author
Bengaluru, First Published Apr 11, 2020, 3:48 PM IST

ರಾಮಾಯಣ ವೀಕ್ಷಿಸುವ ಪ್ರಕಾಶ ಜಾವದೇಕರ್ ತರಕಾರಿ ಹೆಚ್ಚಲು ಕುಳಿತಿದ್ದ ಹರ್ಷವರ್ಧನ್, ತೋಟ ಅಗೆಯುತ್ತಿದ್ದ ಸಂಜೀವ್ ಬಲಿಯಾನ್ ಚಿತ್ರಗಳು ಟೀಕೆಗೆ ಒಳಗಾದ ನಂತರ ಪ್ರಧಾನಿ ಮೋದಿ ಅನಾವಶ್ಯಕ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕದಂತೆ ಸಚಿವರಿಗೆ ತಾಕೀತು ಮಾಡಿದ್ದಾರೆ.

ಕಡ್ಡಾಯವಾಗಿ ಫೋಟೋಗಳಲ್ಲಿ ಮಂತ್ರಿಗಳು ಸಾಮಾಜಿಕ ಅಂತರ ಪಾಲಿಸುತ್ತಿರುವುದು ಗೊತ್ತಾಗಬೇಕು, ಎಂದು ಮೋದಿ ಸೂಚಿಸಿದ್ದು ಯಾವ ಸಚಿವರು ದಿನವೂ ಎಷ್ಟು ಸಭೆ ನಡೆಸುತ್ತಿದ್ದಾರೆ, ಎಂಬೆಲ್ಲ ಮಾಹಿತಿ ಪ್ರಧಾನಿ ಕಾರ್ಯಾಲಯ ಪಡೆಯುತ್ತಿದೆ. ಮೇ ಅಥವಾ ಜೂನ್‌‌ನಲ್ಲಿ ಸಂಪುಟಕ್ಕೆ ಸರ್ಜರಿ ಆಗಲಿದೆ ಎಂಬ ಸುದ್ದಿ ಇದ್ದು ಮಂತ್ರಿಗಳ ಸಕ್ರಿಯತೆಗೆ ಇದು ಒಂದು ಭಯ ಕೂಡ ಕಾರಣ ಇರಬಹುದು.

ಲಾಕ್‌ಡೌನ್ ಮಾಡದೇ ವಿಧಿಯಿಲ್ಲ; ಮೋದಿ ಸಾಹೇಬರಿಗೆ ಈಗ ಖಜಾನೆಯದ್ದೇ ಚಿಂತೆ

ಕೊರೋನಾ ಭೀತಿಯಿಂದ ಸಂಸದರು, ರಾಷ್ಟ್ರಪತಿ ಭಯ ಮುಕ್ತ 

ವಸುಂಧರಾ ಪುತ್ರ ದುಷ್ಯಂತ ಸಿಂಗ್ ಕೋರೋನಾ ರಿಪೋರ್ಟ್ ನೆಗೆಟಿವ್ ಬಂದಿದ್ದರಿಂದ ಸಂಸದರಾದ ಶಿವಕುಮಾರ ಉದಾಸಿ, ಸಂಜಯ ಸಿಂಗ್ ಡೇರಿಕ್ ಒಬ್ಬರಿಯೊನ್ ಸೇರಿದಂತೆ 28 ಎಂಪಿಗಳು ಭಯ ಮುಕ್ತರಾಗಿದ್ದು, ಸೆಲ್ಫ್ ಕ್ವಾರಂಟಿನ್‌ನಿಂದ ಹೊರಗೆ ಬಂದಿದ್ದಾರೆ. ದುಷ್ಯಂತರಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯಿಡು ಜೊತೆಗೆ ಅನೇಕ ಹಿರಿಯ ಪತ್ರಕರ್ತರೂ ಕೊರೋನಾ ಭಯದಲ್ಲಿದ್ದರು. ಅವರೀಗ ಕ್ವಾರೆಂಟಿನ್‌ನಿಂದ ಹೊರಗೆ ಬಂದಿದ್ದರೂ ಲಾಕ್‌ಡೌನ್‌ನಿಂದ ದಿಲ್ಲಿಯಲ್ಲೇ ಬಂಧಿಯಾಗಿದ್ದಾರೆ.

ಕರೋನಾ ಶುರು ಆಗಿದ್ದೇ ಆಗಿದ್ದು ಬಹಳಷ್ಟು ಜನ ಒಂದೇ ಬಾರಿಗೆ ಕುಳಿತು ಒನ್ ಲೈನ್ ಸಭೆ ನಡೆಸಬಲ್ಲ ಝೋಮ್ ಆಪ್ ಗೆ ಭಾರೀ ಬೇಡಿಕೆ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಈ ಆಪ್ ಅನ್ನು 5 ಕೋಟಿ ಭಾರತೀಯರು ಡೌನ್‌ಲೋಡ್ ಮಾಡಿ ಕೊಂಡಿದ್ದಾರೆ. ಆದರೆ ರಕ್ಷಣಾ ಪರಿಣಿತ ಬ್ರಹ್ಮ ಚೇಲಾನಿ ಚೈನೀಸ್ ಝೋಮ್ ಆಪ್ ಅನ್ನು ಯಾವುದೇ ಕಾರಣಕ್ಕೂ ಸರ್ಕಾರದ ಸಭೆ ನಡೆಸಬಾರದು ಎಂದು ಪ್ರಧಾನಿಗೆ ಸಲಹೆ ನೀಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತಾರಾ ಆರ್‌ಬಿಐ ಗೌರ್ನರ್?

ಸರ್ಕಾರದ ಮಾಹಿತಿ ಅನಾಯಾಸವಾಗಿ ಚೈನೀಸ್ ಸರ್ವರ್‌ಗೆ ಹೊರಟು ಹೋಗುತ್ತದೆ ಎಂಬುದು ಭೀತಿಗೆ ಕಾರಣ. ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಸಚಿವ ರವಿ ಶಂಕರ ಪ್ರಸಾದ್‌ರಿಂದ ಈ ಬಗ್ಗೆ ವಿವರಣೆ ಕೇಳಿದೆ. ಸಂಕಷ್ಟದ ಸೃಷ್ಟಿ ಕರ್ತರಿಗೆ ಸಂಕಷ್ಟದ ಲಾಭ ಸಿಗುವುದು ಪರಿಸ್ಥಿತಿಯ ವಿಪರ್ಯಾಸ ಅಷ್ಟೇ. 

Follow Us:
Download App:
  • android
  • ios