ಕೂಲರ್‌ಗಾಗಿ ವೆಂಟಿಲೇಟರ್ ಆಫ್ ಮಾಡಿದ್ರು, ಕುಟುಂಬದ ತಪ್ಪಿಗೆ ಕೊರೋನಾ ಸೋಂಕಿತ ಸಾವು!

ಬಿಸಿಲ ಬೇಗೆಗೆ  ಕೂಲರ್ ಹಾಕಲು, ವೆಂಟಿಲೇಟರ್ ಪ್ಲಗ್ ತೆಗೆದು ಅವಾಂತರ ಮಾಡಿದ್ದಾರೆ. ಇಷ್ಟೇ ನೋಡಿ ಕೊರೋನಾ ಸೋಂಕಿತ ಸಾವನ್ನಪ್ಪಿದ ಘಟನೆ  ನಡೆದಿದೆ. ಕುಟುಂಬದ ತಪ್ಪಿಗೆ ದುರಂತವೇ ನಡೆದು ಹೋಗಿದೆ.

COVID 19 patient died after  family disconnected ventilator to plug air cooler

ರಾಜಸ್ಥಾನ(ಜೂ.19): ಕೊರೋನಾ ವೈರಸ್‌ ಪ್ರಕರಣ ಹೆಚ್ಚಾಗುತ್ತಿದೆ. ಸೋಂಕಿತರ ಚಿಕಿತ್ಸೆ ಸಾಕಷ್ಟು ಎಚ್ಚರ ವಹಿಸಬೇಕು. ಹೀಗೆ ನಿರ್ಲಕ್ಷ್ಯ ವಹಿಸಿದ ಕುಟುಂಬವೊಂದು ಸದಸ್ಯರನ್ನು ಕಳೆದುಕೊಂಡಿದೆ. ಕೂಲರ್ ಪ್ಲಗ್ ಹಾಕಲು ಕೊರೋನಾ ಸೋಂಕಿತನಿಗೆ ಹಾಕಿದ್ದ ವೆಂಟಿಲೇಟರ್ ಪ್ಲಗ್ ತೆಗೆದು ಅವಾಂತರ ಮಾಡಿದ್ದಾರೆ. ಸೋಂಕಿತನಿಗೆ ಹಾಕಲಾಗಿದ್ದ ವೆಂಟಿಲೇಟರ್ ಪ್ಲಗ್ ತೆಗೆದು ಕೂಲರ್ ಹಾಕಿದ್ದಾರೆ. ಇಷ್ಟೇ ಅಲ್ಲ ಮರುಕ್ಷಣದಲ್ಲೇ ಸೋಂಕಿತ ಸಾವನ್ನಪ್ಪಿದ್ದಾನೆ.

ಕೊರೋನಾ ಬಂದ್ರೆ ಬಡ ರೋಗಿಗಳ ಗತಿ ಅಧೋಗತಿ: ಆರೋಗ್ಯ ಇಲಾಖೆ ಅಧಿಕಾರಿಗಳ ಮಹಾ ನಾಟಕ

ರಾಜಸ್ಥಾನ ಕೋಟಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಾರಾವ್ ಭೀಮ್‌ಸಿಂಗ್ ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಕುರಿತು ಇದೀಗ ತನಿಖೆ ನಡೆಯುತ್ತಿದೆ. ಕೊರೋನಾ ವೈರಸ್ ಸೋಂಕಿತನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಸೋಂಕು ಹೆಚ್ಚಾದ ಕಾರಣ ವೈದ್ಯರು ವೆಂಟಿಲೇಟರ್ ಉಸಿರಾಟ ನೀಡಲಾಗಿತ್ತು. ಸೋಂಕಿತನ ಜೊತೆ ಬಂದಿದ್ದ ಕುಟುಂಬ ಸದಸ್ಯರು ಬಿಸಿಲ ಬೇಗೆ ತಣಿಸಲು ಕೂಲರ್ ಹಾಕಲು ಮುಂದಾಗಿದ್ದಾರೆ.

ಆದರೆ ಕೂಲರ್ ಹಾಕಲು ಯಾವುದೇ ಪ್ಲಗ್ ಇರಲಿಲ್ಲ. ಇರುವ ಪ್ಲಗ್‌ನಲ್ಲಿ ವೆಂಟಿಲೇಟರ್ ಹಾಕಲಾಗಿತ್ತು.   ಹಿಂದೂ ಮುಂದೂ ನೋಡದ ಕುಟುಂಬ ಸದಸ್ಯರು ವೆಂಟಿಲೇಟರ್ ಪ್ಲಗ್ ತೆಗೆದು ಕೂಲರ್ ಪ್ಲಗ್ ಹಾಕಿ ಬಿಸಿ ತಣಿಸಿದ್ದಾರೆ. ಆದರೆ ಇತ್ತ ಸೋಂಕಿತ ಸಾವನ್ನಪ್ಪಿದ್ದಾನೆ.  

Latest Videos
Follow Us:
Download App:
  • android
  • ios