ವಿಶ್ವದ 70 ಪ್ರತಿಶತ ಜಾಗಗಳಲ್ಲಿ ಲಾಕ್‌ಡೌನ್‌ ಇರುವುದರಿಂದ ಜಾಗತಿಕ ಆಹಾರ ಸಮಸ್ಯೆ ಎದುರಾಗಬಹುದೆಂಬ ಆತಂಕ ಎಲ್ಲ ದೇಶಗಳಲ್ಲಿಯೂ ಇದೆ. ಆದರೆ ಕೇಂದ್ರ ಸಚಿವರ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಚರ್ಚೆಗೆ ಬಂದಿರುವ ಪ್ರಕಾರ, ಮುಂದಿನ ಸೆಪ್ಟೆಂಬರ್‌ ವರೆಗೆ ಬೇಕಾಗುವಷ್ಟುಆಹಾರಧಾನ್ಯಗಳ ಸಂಗ್ರಹ ದೇಶದಲ್ಲಿದೆ.

ಒಂದು ಅಂದಾಜಿನ ಪ್ರಕಾರ, ದೇಶದ ಸರ್ಕಾರಿ ಗೋದಾಮುಗಳಲ್ಲಿ 6 ಕೋಟಿ ಟನ್‌ನಷ್ಟುಧಾನ್ಯಗಳ ಸಂಗ್ರಹ ಇದೆಯಂತೆ. ಆದರೆ ಸಮಸ್ಯೆ ಇದ್ದದ್ದು ಸಾಗಾಣಿಕೆಯದ್ದು. ಇದಕ್ಕೆಂದೇ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳನ್ನು ಗೂಡ್ಸ್‌ ಸಂಚಾರಕ್ಕೆ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ವೈರಸ್ಸಿನಿಂದ ಸತ್ತರೆ ಜನ ಅರ್ಥ ಮಾಡಿಕೊಂಡಾರು. ಆದರೆ ಧಾನ್ಯ ಇದ್ದೂ ಹಸಿವಿನಿಂದ ಸತ್ತರೆ ಸರ್ಕಾರವನ್ನು ಯಾರು ಕ್ಷಮಿಸಿ ಯಾರು ಹೇಳಿ?

ಅಮಿತ್‌ ಶಾ ಫುಲ್‌ ಆ್ಯಕ್ಟಿವ್‌, ಆದರೂ ಮೌನ!

ಟ್ರಕ್‌ ಚಾಲಕರ ಚಿಂತೆ

90ರ ದಶಕದಲ್ಲಿ ಆಫ್ರಿಕಾದಿಂದ ಬಂದ ಹೆಚ್‌ಐವಿ ವೈರಸ್‌ ಅನ್ನು ಮೂಲೆ ಮೂಲೆಗಳಿಗೆ ತೆಗೆದುಕೊಂಡು ಹೋಗಿದ್ದು ಟ್ರಕ್‌ ಡ್ರೈವರ್‌ಗಳು. ಆದರೆ ಈಗ ಕೊರೋನಾ ವೈರಸ್ಸನ್ನೂ ಎಲ್ಲಾ ಕಡೆ ತೆಗೆದುಕೊಂಡು ಹೋದಾರು ಎಂಬ ಚಿಂತೆ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ ಹೌದು.

ಆದರೆ ಆಹಾರ ಧಾನ್ಯಗಳ ಹಾಹಾಕಾರ ಆಗಬಾರದಾದರೆ ಟ್ರಕ್‌ಗಳು ಹೈವೆಗಳಲ್ಲಿ ಓಡಾಡಲೇಬೇಕು ಎಂಬ ಕಾರಣದಿಂದ 8 ಲಕ್ಷ ಟ್ರಕ್‌ಗಳಿಗೆ ಪಾಸ್‌ ನೀಡಲು ಮುಂದಾಗಿದೆ. 20 ಕಿಲೋಮೀಟರ್‌ ಒಂದರಂತೆ ಡಾಬಾ ಮತ್ತು ರಿಪೇರಿ ಗ್ಯಾರೇಜ್‌ ತೆರೆಯಲು ಅವಕಾಶ ನೀಡುತ್ತಿದೆ. ಆದರೆ ಪ್ರತಿ ಜಿಲ್ಲೆಗಳಲ್ಲೂ ಟ್ರಕ್‌ ಡ್ರೈವರ್‌ ಮತ್ತು ಕ್ಲಿನರ್‌ಗಳ ಆರೋಗ್ಯ ತಪಾಸಣೆ ಕೂಡ ನಡೆಯಲಿದೆಯಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ,