Asianet Suvarna News Asianet Suvarna News

Courts Switching To Virtual Mode : ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆ, ಇವೆರಡು ಪೀಠಕ್ಕೆ ವಿನಾಯಿತಿ!

* ದೇಶದಲ್ಲಿ ಮೂರನೇ ಅಲೆ ಆತಂಕ
* ನ್ಯಾಯಾಲಯದ  ಕಲಾಪಗಳು ವರ್ಚುವಲ್ ಮಾದರಿ
*  ಕರ್ನಾಟಕ ಹೈ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪ
*  ಬಾಂಬೆ ಕೋರ್ಟ್ ಸಂಕೀರ್ಣಕ್ಕೂ ಪ್ರವೇಶ ಇಲ್ಲ

COVID 19 Karnataka High Court switches to virtual hearing mah
Author
Bengaluru, First Published Jan 4, 2022, 8:02 PM IST

ಮುಂಬೈ/ ಬೆಂಗಳೂರು(ಜ. 04)  ರಾಷ್ಟ್ರದಲ್ಲಿ ಕೊರೋನಾ (Coronavirus) ಮೂರನೇ ಅಲೆ ಆತಂಕ ಕಾಣಿಸಿಕೊಳ್ಳುತ್ತಿದ್ದು ನ್ಯಾಯಾಲಯಗಳು  ವಿಡಿಯೋ ಕಾನ್ಫರೆನ್ಸ್ (Virtual Mode) ವಿಚಾರಣೆಗೆ ಮತ್ತೆ  ಮರಳಿವೆ.  ಮುಂಬೈ ಮತ್ತು ಬೆಂಗಳೂರು ನ್ಯಾಯಾಲಯ (Karnataka Highcourt) ಸಂಕೀರ್ಣಗಳು  ವರ್ಚುವಲ್ ವಿಚಾರಣೆ ಆರಂಭಿಸಲಾಗುವುದು ಎಂದು ತಿಳಿಸಿವೆ.

ಮುಂಬೈ  ನ್ಯಾಯಾಲಯಗಳು ಜನವರಿ 4 ರಿಂದ  ತಿಂಗಳ ಅಂತ್ಯದವರೆಗೆ ಅಥವಾ ಮುಂದಿನ ಆದೇಶದವರೆಗೆ ವರ್ಚುವಲ್ ವಿಚಾರಣೆ  ನಡೆಸಲಿದೆ.  ಬೆಂಗಳೂರಿನ ನ್ಯಾಯಾಲಯಗಳು ಜ.14 ರವರೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ  ಕಲಾಪ ನಡೆಸಲಿವೆ. 

ತುರ್ತು ಪ್ರಕರಣಗಳ ವಿಚಾರಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಕಲಬುರಗಿ ಮತ್ತು ಧಾರವಾಡ ಪೀಠಗಳು ಎಂದಿನಂತೆ ವಿಚಾರಣೆ ನಡೆಸುತ್ತವೆ ಎಂದು  ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ನೀಡಿದ್ದಾರೆ.

ಕೋವಿಡ್-19  (Covid 19)ಪ್ರಕರಣಗಳಲ್ಲಿ ಏರಿಕೆ ಹಾಗೂ ರೂಪಾಂತರ ವೈರಸ್ ಒಮಿಕ್ರಾನ್ ನ (Omicron )ಪ್ರಕರಣಗಳಿಂದಾಗಿ  ದೇಶಾದ್ಯಂತ ಮೂರನೇ ಅಲೆಯ (Third Wave) ಆತಂಕ ಹೆಚ್ಚಾಗಿದ್ದು, ಬಹುತೇಕ ಹೈಕೋರ್ಟ್ ಗಳು (High Courts) ಕಲಾಪಗಳನ್ನು ವರ್ಚುವಲ್ ಮೋಡ್   ಬದಲಾಯಿಸಿದೆ. ಮದ್ರಾಸ್, ಬಾಂಬೆ ಹಾಗೂ ಪಟನಾ ಹೈಕೋರ್ಟ್ ಗಳು ಈ ಕುರಿತಾಗಿ ಪ್ರಕಟಣೆಯನ್ನು ಹೊರಡಿಸಿದ್ದು, ಆಯಾ ರಾಜ್ಯದಲ್ಲಿನ ಕೋರ್ಟ್ ಗಳು ಹಾಗೂ ಜಿಲ್ಲಾ ಅಧೀನ ನ್ಯಾಯಾಲಯಗಳ ಕಲಾಪಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.

ತಮಿಳುನಾಡಿನಲ್ಲಿ ಕೋವಿಡ್-19 ಕೇಸ್ ಗಳು ಹಾಗೂ ಒಮಿಕ್ರಾನ್ ಪ್ರಕರಣಗಳ ಏರಿಕೆಯಿಂದಾಗಿ ಮದ್ರಾಸ್ ಹೈಕೋರ್ಟ್ (Madras High Court ) ಜನವರಿ 3 ರಿಂದಲೇ ಜಾರಿಗೆ ಬರುವಂತೆ ಎಲ್ಲಾ ಭೌತಿಕ ಹಾಗೂ ಹೈಬ್ರಿಡ್ ಕಲಾಪಗಳನ್ನು ಅಮಾನತು ಮಾಡಿರುವ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೂ ಕೋರ್ಟ್ ನ ಎಲ್ಲಾ ಕಾರ್ಯ-ಕಲಾಪಗಳು ವರ್ಚುವಲ್ ಮೋಡ್ ನಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಕೇವಲ ಮದ್ರಾಸ್ ಹೈ ಕೋರ್ಟ್ ನಲ್ಲಿ ಮಾತ್ರವಲ್ಲದೆ ಎಲ್ಲಾ ಅಧೀನ ನ್ಯಾಯಾಲಯ ವಿಚಾರಣೆಗಳನ್‌ನೂ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 24ಗಂಟೆಗಳಲ್ಲಿ ದ್ವಿಗುಣ

ಕಳೆದ ವರ್ಷ ಡಿಸೆಂಬರ್ 27ರಂದು ನೀಡಿದ್ದ ಪ್ರಕಟಣೆಯಲ್ಲಿ ಕೋರ್ಟ್ ನ ಕಾರ್ಯಕಲಾಪಗಳು ಕೋವಿಡ್ ಪೂರ್ವದಲ್ಲಿ ಇದ್ದಂತೆಯೇ ನಡೆಯಲಿದೆ. ಜನವರಿ 3 ರಿಂದ ಸಂಪೂರ್ಣ ಭೌತಿಕವಾಗಿ ಕಾರ್ಯಕಲಾಪ ನಡೆಯಲಿದೆ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿತ್ತು. ಅದಕ್ಕೂ ಮುನ್ನ ನವೆಂಬರ್ 9 ರಂದು ನೀಡಿದ್ದ ಪ್ರಕಟಣೆಯಲ್ಲಿ ಹೈಕೋರ್ಟ್ ವಕೀಲರು ಹಾಗೂ ಗುಮಾಸ್ತರು ನ್ಯಾಯಾಲಯದ ಆವರಣ ಪ್ರವೇಶಿಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಆದರೆ, ತಮಿಳುನಾಡು ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದನ್ನು ಗಮನಿಸಿರುವ ಕೋರ್ಟ್ ಮತ್ತೆ ವರ್ಚುವಲ್ ಮೋಡ್ ಗೆ ಬದಲಾಗಿದೆ.

ಓಮಿಕ್ರಾನ್ ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ ಸುಪ್ರೀಂ ಕೋರ್ಟ್ (Supreem Court) ಮತ್ತು ವಿವಿಧ ಹೈಕೋರ್ಟ್‌ಗಳು ಈಗಾಗಲೇ ವರ್ಚುವಲ್ ಅಥವಾ ಹೈಬ್ರಿಡ್ ವಿಚಾರಣೆಯ ವಿಧಾನಗಳಿಗೆ ಬದಲಾಯಿಸಿವೆ. ಮುಂಬೈನಲ್ಲಿ ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ, ಬಾಂಬೆ ಹೈಕೋರ್ಟ್ (Bombay High Court) ಜನವರಿ 4, 2022 ರಿಂದ ಮುಂದಿನ ಆದೇಶದವರೆಗೆ ಹೈಬ್ರಿಡ್ ಮೋಡ್ ಮೂಲಕ ಕಲಾಪಗಳನ್ನು ಆಲಿಸಲು ನಿರ್ಧಾರ ಮಾಡಿದೆ. ಇನ್ನು ಕಲ್ಕತ್ತಾ ಹೈಕೋರ್ಟ್ (Calcutta High Court) ಕೂಡ ಜನವರಿ 3 ರಿಂದ ಅನ್ವಯವಾಗುವಂತೆ ಎಲ್ಲಾ ಪ್ರಕರಣಗಳ ಕಲಾಪಗಳನ್ನು ವರ್ಚುವಲ್ ಮೋಡ್ ಮೂಲಕವೇ ಆಲಿಸಲಾಗುವುದು. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆ ಹಾಗೂ ಒಮಿಕ್ರಾನ್ ಕಾರಣದಿಂದಾಗಿ ಸರ್ಕಾರವು "ಯೆಲ್ಲೋ ಅಲರ್ಟ್" ಘೋಷಣೆ ಮಾಡಿದೆ. ಇದರ ಬೆನ್ನಲ್ಲಿಯೇ ಡಿಸೆಂಬರ್ 30 ರಂದು ಅದೇಶ ಹೊರಡಿಸಿದ್ದ ದೆಹಲಿ ಹೈಕೋರ್ಟ್(Delhi High Court) ಜನವರಿ 3 ರಿಂದ ಜನವರಿ 15ರವರಗೆ ಸಂಪೂರ್ಣ ವಿಚಾರಣೆಯನ್ನು ವರ್ಚುವಲ್ ಮೂಲಕ ಮಾಡುವುದಾಗಿ ತಿಳಿಸಿತ್ತು. ಇನ್ನೊಂದೆಡೆ ದೇಶದ ಪ್ರಮುಖ ಹೈಕೋರ್ಟ್ ಗಳಲ್ಲಿ ಒಂದಾದ ಅಲಹಾಬಾದ್ ಹೈಕೋರ್ಟ್ ಕೂಡ ಇದೇ ರೀತಿಯ ಕ್ರಮಗಳನ್ನು ಕೈಗೊಂಡಿದೆ.

Follow Us:
Download App:
  • android
  • ios