Asianet Suvarna News Asianet Suvarna News

ಮೊದಲ ಬಾರಿಗೆ ಒಂದೇ ದಿನ 1000+ ಕೇಸ್ ಪತ್ತೆ: 8 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೇಂದ್ರ ಸರ್ಕಾರ ಅದೆಷ್ಟೇ ಕಠಿಣ ಕ್ರಮ ಕೈಗೊಂಡ್ರು, ಜನರನ್ನು ಮನೆಯಲ್ಲೇ ಕೂಡಿ ಹಾಕಿದ್ರೂ ಕೊರೋನಾ ಪೀಡಿತರ ಸಂಖ್ಯೆ ಮಾತ್ರ ದೇಶದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಅಚ್ಚರಿ ಅಂದ್ರೆ ದೇಶದಲ್ಲಿ ಮೊದಲ ಬಾರಿಗೆ 1000ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿರುವುದು ಬೆಚ್ಚಿಬೀಳಿಸಿದೆ.

COVID-19 cases in India cross 8000-mark State-wise tally
Author
Bengaluru, First Published Apr 11, 2020, 8:09 PM IST

ನವದೆಹಲಿ, (ಏ.11): ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೋನಾ ವೈರಸ್ ವಿಶ್ವಾದ್ಯಂತ 1 ಲಕ್ಷ ಕ್ಕೂ ಹೆಚ್ಚು ಮಂದಿಯನ್ನು  ಬಲಿಪಡೆದಿದ್ರೆ, ಭಾರತದಲ್ಲಿ 8000ಕ್ಕೂ ಹೆಚ್ಚು ಮಂದಿಗೆ ಕೊರೋನಾ ಇರುವುದು ದೃಢಪಟ್ಟಿದೆ. 

ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಅಂಟಿಕೊಂಡಿದೆ. 24 ತಾಸುಗಳಲ್ಲಿ 1032 ಜನರಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 8000ರ ಗಡಿ ದಾಟಿದ್ರೆ, ಕಳೆದ 24 ಗಂಟೆಗಳಲ್ಲಿ 40 ಜನ ಮೃತಪಟ್ಟಿದ್ದಾರೆ.  

ಎಲ್ಲಾ ರಾಜ್ಯದ ಸಿಎಂಗಳ ಜೊತೆ ಮೋದಿ ನಡೆಸಿದ ಸಭೆಯ ಪ್ರಮುಖಾಂಶಗಳು

ಇನ್ನು 253 ಜನ ಕೊರೊನಾಗೆ ಬಲಿಯಾಗಿದ್ದಾರೆ. 815 ಜನ ಗುಣಮುಖರಾಗಿದ್ದು, 586 ಪ್ರತ್ಯೇಕ ಆಸ್ಪತ್ರೆಗಳು ಮೀಸಲು ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಬಗ್ಗೆ  ಇಂದು (ಶನಿವಾರ) ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ ಅಗರವಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಒಂದು ವೇಳೆ ದೇಶದಲ್ಲಿ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಹೋಗಿದಿದ್ದರೆ ಏಪ್ರಿಲ್ 15ರ ಹೊತ್ತಿಗೆ ಕೊರೋನಾ ಸೋಂಕಿತರ ಸಂಖ್ಯೆ 8.2 ಲಕ್ಷಕ್ಕೆ ಏರಿಕೆಯಾಗಿರುತ್ತಿತ್ತು. ಲಾಕ್ ಡೌನ್ ನಂತಹ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡು  ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರಿಂದಲೇ ಇಂದು ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಸಾವಿರಗಳಲ್ಲಿದೆ. ಒಂದು ವೇಳೆ ಸರ್ಕಾರ ಈ ಕಠಿಣ ನಿರ್ಧಾರವನ್ನು ಕೈಗೊಳ್ಳದೇ ಹೋಗಿದಿದ್ದರೆ ಈ ಸಂಖ್ಯೆ ಲಕ್ಷಗಳಲ್ಲಿರುತ್ತಿತ್ತು ಎಂದು ತಿಳಿಸಿದರು.

ಮೊದಲ ಬಾರಿ ಒಂದೇ ದಿನ ಸಾವಿರಕ್ಕಿಂತ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಬೆಚ್ಚಿಬೀಳಿಸಿದೆ. 

ಭಾರತದಲ್ಲಿರೋ ಸೋಂಕಿತರತ್ತ ಕಣ್ಣು ಹಾಯಿಸೋದಾದ್ರೆ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1666 ರೋಗಿಗಳಿದ್ದರೆ,  ತಮಿಳುನಾಡಲ್ಲಿ 911, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 903, ರಾಜಸ್ತಾನದಲ್ಲಿ 678, ತೆಲಂಗಾಣದಲ್ಲಿ  487, ಮಧ್ಯಪ್ರದೇಶದಲ್ಲಿ 451, ಉತ್ತರ ಪ್ರದೇಶದಲ್ಲಿ 433, ಗುಜರಾತ್ನಲ್ಲಿ 432, ಆಂಧ್ರಪ್ರದೇಶದಲ್ಲಿ 381, ಕೇರಳದಲ್ಲಿ 364, ಇನ್ನು ಕರ್ನಾಟಕ 11ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 215, ಹರಿಯಾಣದಲ್ಲಿ 177, ಪಶ್ಚಿಮ ಬಂಗಾಳದಲ್ಲಿ 116, ಒಡಿಶಾದಲ್ಲಿ 50, ಜಾರ್ಖಂಡ್ ನಲ್ಲಿ 17 ರೋಗಿಗಳಿದ್ದಾರೆ.

ಅದರಲ್ಲೂ ಮಹಾರಾಷ್ಟ್ರದಲ್ಲಿ ಗಣನೀಯವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ 110 ಜನ ಬಲಿಯಾಗಿದ್ದಾರೆ.

Follow Us:
Download App:
  • android
  • ios