ಕೊರೋನಾ ಮಹಾಮಾರಿ ಈಗ ಹೆಚ್ಚಾಗುತ್ತಲೇ ಇದೆ. ಮತ್ತೊಮ್ಮೆ ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಎಲ್ಲೆಡೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮ ಪಾಲಿಸದ ನಾಲ್ವರನ್ನು ವಿಮಾನದಿಂದ ಹೊರಹಾಕಲಾಗಿದೆ.

ನವದೆಹಲಿ (ಮಾ.19): ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ನಿಯಮಾವಳಿ ಬಿಗಿಗೊಳಿಸಿವೆ. ಕೋರೋನಾ ನಿಯಮಾವಳಿ ಪಾಲಿಸದೇ ಇರುವ ಕಾರಣ ಗೋವಾದಿಂದ ಮುಂಬೈಗೆ ತೆರಳುತ್ತಿದ್ದ ಏರ್‌ ಏಷ್ಯಾ ವಿಮಾನದಿಂದ ಇಬ್ಬರು ಪ್ರಯಾಣಿಕರನ್ನು ಮಧ್ಯದ ಸೀಟಿನಿಂದ ಕೆಳಗೆ ಇಳಿಸಲಾಗಿದೆ. 

ಅದೇ ರೀತಿ ಮಾಸ್ಕ್‌ ಧರಿಸಲು ನಿರಾಕರಿಸಿದ ಕಾರಣಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ ಕಳೆದ ಮೂರು ದಿನಗಳಲ್ಲಿ ಇಬ್ಬರು ಪ್ರಯಾಣಿಕರನ್ನು ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಿದೆ. ಕೊರೋನಾ ನಿಯಮ ಪಾಲಿಸದ ಪ್ರಯಾಣಿಕರನ್ನು ವಿಮಾನದಿಂದ ಇಳಿಸುವಂತೆ ಡಿಜಿಸಿಎ ಶನಿವಾರ ನಿರ್ದೇಶನ ನೀಡಿತ್ತು. 

ಬೆಂಗ್ಳೂರಲ್ಲಿ ಹೆಚ್ಚುತ್ತಿದೆ ಕೊರೋನಾ: ಒಂದೇ ದಿನ 7 ಮಂದಿ ಬಲಿ,ಆತಂಕದಲ್ಲಿ ಜನತೆ..! ..

ಹೀಗಾಗಿ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ.