Asianet Suvarna News Asianet Suvarna News

Corona Cases ಸುಪ್ರೀಂ ಕೋರ್ಟ್ ನಾಲ್ವರು ಜಡ್ಜ್‌ಗೆ ಕೊರೋನಾ ದೃಢ!

  • ನಾಲ್ವರ ಜಡ್ಜ್ ಪೈಕಿ ಓರ್ವ ನ್ಯಾಯಧೀಶರು ಆಸ್ಪತ್ರೆ ದಾಖಲು
  • ಕೊರೋನಾ ಹೆಚ್ಚಳ ಕಾರಣ ವರ್ಚವಲ್ ಮೊಡ್‌ನಲ್ಲಿ ಕೋರ್ಟ್
  • ಜನವರಿ 10 ರಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ
Covid 19 3rd wave scare Four Judges of Supreme Court of India test Coronavirus Postive ckm
Author
Bengaluru, First Published Jan 8, 2022, 5:59 PM IST

ನವದೆಹಲಿ(ಜ.08): ದೇಶದಲ್ಲಿ ಕೊರೋನಾ ವೈರಸ್(Coronavirus) ಹೆಚ್ಚಳವಾಗಿದೆ. ಒಂದೊಂದೆ ರಾಜ್ಯಗಳು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಕೊರೋನಾ ಆರ್ಭಟ ಕಡಿಮೆಯಾಗಿಲ್ಲ. ಇದರ ನಡುವೆ ಸುಪ್ರೀಂ ಕೋರ್ಟ್(Supreme Court) ನಾಲ್ವರು ನ್ಯಾಯಾಧೀಶರಿಗೆ(Judge) ಕೊರೋನಾ ವೈರಸ್ ಅಂಟಿಕೊಂಡಿದೆ. ಇದರಲ್ಲಿ ಓರ್ವ ನ್ಯಾಯಾಧೀಶರು ಚಿಕಿತ್ಸೆಗಾಗಿ ಆಸ್ಪತ್ರೆ(Hospitalization) ದಾಖಲಾಗಿದ್ದರೆ, ಇನ್ನುಳಿದ ಮೂವರು ಹೋಮ್ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ನ್ಯಾಯಾಧೀಶರಿಗೆ ಕರೋನಾ ಕಾಣಿಸಿಕೊಂಡಿರುವುದು ಇದೀಗ ಆತಂಕ ಮತ್ತಷ್ಟು ಹೆಚ್ಚಿಸಿದೆ. ಕೊರೋನಾ ಕಾಣಿಸಿಕೊಂಡ ನಾಲ್ವರು ನ್ಯಾಯಾಧೀಶರು ಆರೋಗ್ಯವಾಗಿದ್ದಾರೆ. ಒರ್ವ ನ್ಯಾಯಾಧೀಶರು ಆಸ್ಪತ್ರೆ ದಾಖಲಾಗಿದ್ದಾರೆ. ಆದರೆ ಹೆಚ್ಚಿನ ಮುತುವರ್ಜಿ ವಹಿಸಿದರೂ ಕೊರೋನಾ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Courts Switching To Virtual Mode : ಮೂರನೇ ಅಲೆಯ ಆತಂಕ, ವರ್ಚುವಲ್ ಮೋಡ್ ಗೆ ಬದಲಾದ ಕೋರ್ಟ್!

ಕೊರೋನಾ ಹೆಚ್ಚಳವಾಗಿರುವ ಕಾರಣ ಜನವರಿ 6 ರಂದು ಸುಪ್ರೀಂ ಕೋರ್ಟ್ ವರ್ಚುವಲ್ ಮೊಡ್‌ನಲ್ಲಿ(virtual mode) ಕಾರ್ಯನಿರ್ವವಹಸಲಿದೆ ಎಂದು ಘೋಷಿಸಿದೆ. ಜನವರಿ 10 ರಿಂದ ಸುಪ್ರೀಂ ಕೋರ್ಟ್ ಎಲ್ಲಾ ವಿಚಾರಣೆಗಳು ವಿಡಿಯೋ ಕಾನ್ಫೆರನ್ಸ್ (video conference)ಮೂಲಕ ನಡೆಯಲಿದೆ. ಇದರ ಜೊತೆಗೆ ನಾಲ್ವರು ನ್ಯಾಯಾಧೀಶರಿಗೂ ವೈರಸ್ ಕಾಣಿಸಿಕೊಂಡಿರುವ ಕಾರಣ ವಿಚಾರಣೆಗಳು ಮತ್ತಷ್ಟು ವಿಳಂಭವಾಗಲಿದೆ.

ಅತೀ ಅಗತ್ಯ ಹಾಗೂ ತುರ್ತು ವಿಚಾರಣೆಗಳು ಮಾತ್ರ ಕೋರ್ಟ್‌ನಲ್ಲಿ ನಡೆಯಲಿದೆ. ಜಾಮೀನು ಅರ್ಜಿ ವಿಚಾರಣೆ, ತಡೆ ನೀಡುವಿಕೆ, ಬಂಧನ ಸೇರಿದಂತೆ ಕೆಲ ತುರ್ತು ವಿಚಾರಣೆಗಳು ಮಾತ್ರ ಕೋರ್ಟ್‌ನಲ್ಲಿ ನಡೆಯಲಿದೆ. ಇನ್ನುಳಿದ ಎಲ್ಲಾ ವಿಚಾರಣೆಗಳು ವಿಡಿಯೋ ಕಾನ್ಪೆರೆನ್ಸ್ ಮೂಲಕ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇವಲ ಸುಪ್ರೀಂ ಕೋರ್ಟ್ ಮಾತ್ರವಲ್ಲ ದೇಶದ ಬಹುತೇಕ ಹೈಕೋರ್ಟ್ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವುದಾಗಿ ಘೋಷಿಸಿದೆ.ಇದರ ನಡುವೆ ಕೋರ್ಟ್ ಜಡ್ಜ್‌ ಹಾಗೂ ಸಿಬ್ಬಂದಿಗಳಿಗೆ ಕೊರೋನಾ ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.

ಭಾರತದಲ್ಲಿ ಕೊರೋನಾ ಪ್ರಕರಣ
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಇಂದು(ಜ.08) ಭಾರತದಲ್ಲಿ 1,41,986 ಕೊರೋನಾ ಪ್ರಕರಣ ದಾಖಲಾಗಿದೆ. ಇದು ನಿನ್ನೆಗೆ ಹೋಲಿಸಿದರೆ ಶೇಕಡಾ 21ರಷ್ಟು ಹೆಚ್ಚಳವಾಗಿದೆ. ಸಾವಿರ ಸಂಖ್ಯೆಯಲ್ಲಿದ್ದ ಕೊರೋನಾ ಕೇಸ್ ಇದೀಗ ದಿಢೀರ್ 1.41 ಲಕ್ಷಕ್ಕೆ ಏರಿಕೆಯಾಗಿದೆ. ತಜ್ಞರ ಪ್ರಕಾರ ದೇಶದಲ್ಲಿ ಮೂರನೇ ಅಲೆ ಫೆಬ್ರವರಿ ವೇಳೆಗೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಅನ್ನೋ ಆತಂಕ ಹೆಚ್ಚಾಗುತ್ತಿದೆ.

PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!

ಕಳೆದ ವಾರ ಪ್ರತಿ ದಿನ ಸರಾಸರಿ 10,000 ಕೊರೋನಾ ಕೇಸ್ ದಾಖಲಾಗಿತ್ತು. ಇದೀಗ ಒಂದೇ ವಾರಕ್ಕೆ ದೇಶದಲ್ಲಿ ಕೊರೋನ ಸಂಖ್ಯೆ 1 ಲಕ್ಷ ದಾಟಿದೆ. ದೇಶದ ಕೊರೋನಾ ಪಾಸಿಟಿವಿಟಿ ರೇಟ್ ಶೇಕಡಾ 9ಕ್ಕೇರಿಕೆಯಾಗಿದೆ. ಇನ್ನು ಒಮಿಕ್ರಾನ್ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಒಂದೇ ದಿನ ಭಾರತದಲ್ಲಿ 64 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿನ ಓಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 3,007ಕ್ಕೆ ಏರಿಕೆಯಾಗಿದೆ. ದೇಶದ 27 ರಾಜ್ಯಗಳಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. 

ಮಹಾರಾಷ್ಟ್ರ ಈ ಬಾರಿಯೂ ಕೊರೋನಾಗೆ ಸಿಲುಕಿ ಹೈರಾಣಾಗಿದೆ. ಒಂದೇ ದಿನ ಮಹಾರಾಷ್ಟ್ರದಲ್ಲಿ 40,000 ಕೇಸ್ ಪತ್ತೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 40,925  ಕೊರೋನಾ ಕೇಸ್ ಪತ್ತೆಯಾಗಿದೆ. ಇದರಲ್ಲಿ 20,971 ಕೇಸ್‌ಗಳು ಮುಂಬೈ ನಗರದಲ್ಲಿ ಪತ್ತೆಯಾಗಿದೆ. ಇನ್ನು ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿ ಕೊರೋನಾ ಏರಿಕೆಯಾಗಿದೆ. ಬರೋಬ್ಬರಿ ಶೇಕಡಾ 64 ರಷ್ಟು ಕೊರೋನಾ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 8,449 ಕೊರೋನ ಕೇಸ್ ಪತ್ತೆಯಾಗಿದೆ. ಇದರಲ್ಲಿ 6,812  ಕೇಸ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಪಾಸಿಟಿವಿಟಿ ರೇಟ್ ಶೇಕಡಾ 4.15ಕ್ಕೆ ಏರಿಕೆಯಾಗಿದೆ.
 

Follow Us:
Download App:
  • android
  • ios