ಮುಂಬೈ(ಡಿ. 24)ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ನೀಡಿರುವ  ನೋಟಿಸ್ ಗೆ ರಿಲೀಫ್ ಕೇಳಿ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಅನಧಿಕೃತವಾಗಿ ಕಂಗನಾ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದಡಿ ಬಿಎಂಸಿ ನೋಟಿಸ್ ನೀಡಿತ್ತು.  ಕಂಗನಾ ಕಾರ್ಪೋರೇಶನ್ ಅನುಮತಿ ಪಡೆಯದೆ ಕಟ್ಟಡ ಮುಂದುವರಿಸಿದ್ದರು ಎಂಬುದು ಆರೋಪ.

ಮನಸಿಗೆ ಕಂಡಿದ್ದನ್ನೆಲ್ಲ ಬರೆಯುವ ಕಂಗನಾಗೆ ಮೂಗುದಾರ ಹಾಕಿ

2019 ರ ಜನವರಿಯಲ್ಲಿ ಕಂಗನಾ ಇದೇ ವಿಚಾರಕ್ಕೆ  ಸಿವಿಲ್ ನ್ಯಾಯಾಲಯದ ಮುಂದೆ ಹೋಗಿದ್ದರು. ಕಟ್ಟಡ ತೆರವು ಮಾಡದಂತೆ ಕೇಳಿಕೊಂಡಿದ್ದರು.
 
ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳಲು ತಿಳಿಸಿದ್ದು ಮುಂದಿನ ವಿಚಾರಣೆಯನ್ನು  2021 ರ ಫೆಬ್ರವರಿಗೆ ನಿಗದಿ ಮಾಡಿದೆ. ಹೈಕೋರ್ಟ್‌ ಗೆ ತೆರಳುವುದಾದರೆ ಆರು ವಾರಗಳ ಕಾಲಾವಕಾಶ  ನೀಡಿದೆ.