ಪಾರಂಪರಿಗ ರೈಲು ಹಳಿ ಮೇಲೆ ಜೋಡಿಯ ಫೋಟೋಶೂಟ್. ಇದ್ದಕ್ಕಿದ್ದಂತೆ ರೈಲು ಆಗಮಿಸಿದೆ. ಬೇರೆ ದಾರಿ ಕಾಣದ ಜೋಡಿ ಜೀವ ಉಳಿಸಲು 90 ಅಡಿ ಎತ್ತರದಿಂದ ಹಾರಿದ ಘಟನೆ ವಿಡಿಯೋ ಸೆರೆಯಾಗಿದೆ. 

ಜೈಪುರ(ಜು.15) ರೀಲ್ಸ್, ಫೋಟೋಶೂಟ್, ವಿಡಿಯೋಗಾಗಿ ಜನ ಯಾವುದೇ ಅಪಾಯಕ್ಕೂ ಹಿಂಜರಿಯುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಲು, ಲೈಕ್ಸ್, ಕಮೆಂಟ್ಸ್ ಪಡೆಯುವ ಮೂಲಕ ವೈರಲ್ ಆಗಲು ಹಲವರು ಪ್ರಾಣವನ್ನೂ ಲೆಕ್ಕಿಸದೆ ಸ್ಟಂಟ್ ಮಾಡಿದ್ದಾರೆ. ಈ ಹುಚ್ಚಿಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಜೋಡಿಯೊಂದು ಪಾರಂಪರಿಕ ರೈಲು ಹಳಿಯಲ್ಲಿ ಫೋಟೋಶೂಟ್ ನಡೆಸುತ್ತಿದ್ದ ವೇಳೆ ದಿಢೀರ್ ರೈಲು ಆಗಮಿಸಿದೆ. ಪ್ರಾಣ ಉಳಿಸಿಕೊಳ್ಳಲು ಈ ಜೋಡಿ 90 ಅಡಿ ಕೆಳಕ್ಕೆ ಹಾರಿ ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ ಪಾಲಿ ಬಳಿ ನಡೆದಿದೆ. ಈ ಭಯಾನಕ ವಿಡಿಯೋ ಸೆರೆಯಾಗಿದೆ.

22 ವರ್ಷಗ ರಾಹುಲ್ ಮೆವಾಡ ಹಾಗೂ 20 ವರ್ಷದ ಜಾಹ್ನವಿ ಇತ್ತೀಚೆಗಷ್ಟೆ ಮದುವೆಯಾಗಿದ್ದಾರೆ. ಕುಟುಂಬ ಇನ್ನಿಬ್ಬರು ಸದಸ್ಯರ ಜೊತೆ ಪಾಲಿ ಬಳಿಯ ಗೊರ್ಮಘಾಟ್‌ನಲ್ಲಿರುವ ರೈಲು ಹಳಿಯಲ್ಲಿ ಫೋಟೋಶೂಟ್ ನಡೆಸಲು ಪ್ಲಾನ್ ಮಾಡಿ ತೆರಳಿದ್ದಾರೆ. ಬೆಟ್ಟದ ಮೇಲೆ ಅತ್ಯಂತ ಹಳೆಯ ರೈಲು ಸೇತುವೆ ನೋಡಲು ಹಲವರು ಆಗಮಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಸ್ಥಳವೂ ಹೌದು.

ರೈನ್ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು, ಕೊದಲೆಳೆ ಅಂತರದಲ್ಲಿ ಯವತಿ ಪಾರು!

ಈ ಜೋಡಿ ತಮ್ಮ ಆಪ್ತ ಕುಟುಂಬಸ್ಥರ ಜೊತೆ ಬೈಕ್ ಮೂಲಕ ತೆರಳಿ ಬಳಿಕ ಅಲ್ಲಿಂದ ಕಾಲ್ನಡಿ ಮೂಲಗ ರೈಲು ಹಳಿ ಬಳಿ ತಲುಪಿದೆ. ರೈಲು ಹಳಿಯಿಂದ ನಡೆದುಕೊಂಡು ರೈಲು ಸೇತುವೆ ತೆರಳಿದ್ದಾರೆ. ಒಂದು ರೈಲು ಹೋಗಲು ಮಾತ್ರ ಇಲ್ಲಿ ಜಾಗವಿದೆ. ಕಾರಣ ಕೇವಲ ಹಳಿಗಳನ್ನು ಬಿಟ್ಟರೆ ಬೇರೆ ಸ್ಥಳವಿಲ್ಲ. ಈ ಸೇತುವೆ ಮಧ್ಯದಲ್ಲಿ ನಿಂತು ಇವರಿಬ್ಬರ ಫೋಟೋಶೂಟ್ ನಡೆಯುತ್ತಿತ್ತು.

Scroll to load tweet…

ಇತರ ಕುಟುಂಬ್ಥರು ರೈಲು ಸೇತುವೆ ಆರಂಭಿಕ ಭಾಗದಲ್ಲಿ ನಿಂತಿದ್ದಾರೆ. ಫೋಟೋಶೂಟ್ ನಡೆಯುತ್ತಿದ್ದಂತೆ ಏಕಾಏಕಿ ರೈಲು ಆಗಮಿಸಿದೆ. ಕಿರುಚಾಡುತ್ತಾ ಕುಟುಂಬಸ್ಥರು ದಡ ಸೇರಿದ್ದಾರೆ. ಆದರೆ ಈ ಜೋಡಿಗೆ ದಾರಿ ಇಲ್ಲದಾಗಿದೆ. ರೈಲು ಡಿಕ್ಕಿಯಾಗಿ ದೇಹ ಛಿದ್ರಛಿದ್ರವಾಗುವುದನ್ನು ತಪ್ಪಿಸಲು ಕೆಳಕ್ಕೆ ಹಾರುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಆದರೆ ಈ ಸೇತುವೆ ಎತ್ತರ ಬರೋಬ್ಬರಿ 90 ಅಡಿ.

ಕೆಳಕ್ಕೆ ಹಾರಿದರೆ ಜೀವ ಉಳಿಯುವ ಲಕ್ಷಗಳೂ ಇರಲಿಲ್ಲ. ಆದರೂ ಬೇರೆ ದಾರಿ ಕಾಣದ ಈ ಜೋಡಿ 90 ಅಡಿಯಿಂದ ಕೆಳಕ್ಕೆ ಹಾರಿದೆ. ಇತ್ತ ಸೇತುವೆಯಿಂದ ರೈಲು ಸಾಗುತ್ತಿದ್ದಂತೆ ಲೋಕೋಪೈಲೆಟ್ ಇಬ್ಬರು ಸೇತುವೆ ಮೇಲೆ ನಿಂತಿರುವುದು ಪತ್ತೆಯಾಗಿದೆ. ತಕ್ಷಣವೇ ಎಮರ್ಜೆನ್ಸಿ ಬ್ರೇಕ್ ರೈಲು ನಿಲ್ಲಿಸಲಾಗಿದೆ. ಆದರೆ ರೈಲು ಡಿಕ್ಕಿಯಾಗವ ಭಯದಿಂದ ಜೋಡಿಗಳು ಕೆಳಕ್ಕೆ ಹಾರಿದ್ದಾರೆ.

ಗೂಳಿ ಮುಂದೆ ಶಕ್ತಿ ಪ್ರದರ್ಶನಕ್ಕೆ ಹೋದ ಯುವಕ, ಕರ್ಮ ಬಿಡುವುದೇ?

ಈ ಪೈಕಿ ರಾಹುಲ್ ಮೆವಾಡ ಬೆನ್ನು ಮೂಳೆ, ಕೈ, ಕಾಲು ಸೇರಿದಂತೆ ಹಲವು ಮೂಳೆಗಳು ಮುರಿದಿದೆ. ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ಜಾಹ್ನವಿ ಕಾಲು ಮುರಿದಿದೆ. ಜೊತೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇಬ್ಬರನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ.