ಪಹಲ್ಗಾಂ ನರಮೇಧ, ಆಪರೇಷನ್ ಸಿಂದೂರದ ಬಳಿಕ ದೇಶದ ಗಡಿಗಳಲ್ಲಿ ಅಪಾಯ ಹೆಚ್ಚುತ್ತಿರುವ ನಡುವೆಯೇ, ಭಾರತೀಯ ಸೇನೆ ಮಧ್ಯಪ್ರದೇಶದ ತೇಕನ್‌ಪುರದಲ್ಲಿರುವ ತನ್ನ ತರಬೇತಿ ಅಕಾಡೆಮಿಯಲ್ಲಿ ಭಾರತದ ಮೊದಲ ಡ್ರೋನ್ ಯುದ್ಧ ಶಾಲೆ ಆರಂಭಿಸಿದೆ.
ತೇಕನ್‌ಪುರ: ಪಹಲ್ಗಾಂ ನರಮೇಧ, ಆಪರೇಷನ್ ಸಿಂದೂರದ ಬಳಿಕ ದೇಶದ ಗಡಿಗಳಲ್ಲಿ ಅಪಾಯ ಹೆಚ್ಚುತ್ತಿರುವ ನಡುವೆಯೇ, ಭಾರತೀಯ ಸೇನೆ ಮಧ್ಯಪ್ರದೇಶದ ತೇಕನ್‌ಪುರದಲ್ಲಿರುವ ತನ್ನ ತರಬೇತಿ ಅಕಾಡೆಮಿಯಲ್ಲಿ ಭಾರತದ ಮೊದಲ ಡ್ರೋನ್ ಯುದ್ಧ ಶಾಲೆ ಆರಂಭಿಸಿದೆ.
ಈ ಡ್ರೋನ್ ಯುದ್ಧ ಶಾಲೆಯಲ್ಲಿ ಆಕ್ರಮಣಕಾರಿ, ರಕ್ಷಣಾತ್ಮಕ ಮಾನವ ರಹಿತ ವೈಮಾನಿಕ ಸಾಮರ್ಥ್ಯಗಳನ್ನು ನಿರ್ಮಿಸುವುದು ಹೇಗೆ , ಡ್ರೋನ್ ಪೈಲಟಿಂಗ್, ಡೋನ್ ನಿರ್ವಹಣೆ ತಂತ್ರ, ಸಂಶೋಧನೆ ಸೇರಿದಂತೆ ವಿವಿಧ ವಿಚಾರಗಳನ್ನು ಕಲಿಸಿಕೊಡಲಾಗುತ್ತದೆ.
40 ಅಧಿಕಾರಿಗಳನ್ನೊಳಗೊಂಡ ಮೊದಲ ಬ್ಯಾಚ್ ಈಗಾಗಲೇ ಒಂದು ವಾರದ ತರಬೇತಿ ಪೂರ್ಣಗೊಳಿಸಿದೆ . ಇದರಲ್ಲಿ ಬಿಎಸ್‌ಎಫ್ ಮತ್ತು ಎಸ್‌ಟಿಸಿಯ ಕಮಾಂಡೆಂಟ್ ಮತ್ತು ಸೆಕೆಂಡ್ ಇನ್ ಕಮಾಂಡ್ ಮಟ್ಟದ ಅಧಿಕಾರಿಗಳಿದ್ದರು. ಪ್ರಸ್ತುತ 47 ಅಧಿಕಾರಿಗಳ 2ನೇ ಗುಂಪು ಆರು 6 ವಾರಗಳ ತರಬೇತಿಗೆ ದಾಖಲಾಗಿದ್ದು, ಇಲ್ಲಿಯೂ ವಿವಿಧ ಶ್ರೇಣಿಯ ಸಿಬ್ಬಂದಿಯಿದ್ದಾರೆ.
ಭಾರತದ ಕ್ಷಿಪಣಿ ದಾಳಿಗೆ ಉಗ್ರ ಮಸೂದ್ ಅಜರ್ ಪರಿವಾರವೇ ನಾಶ
ನವದೆಹಲಿ: ಭಾರತ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಮ್ಮ ಸಂಘಟನೆಯ ಸ್ಥಾಪಕ ಹಾಗೂ ಮುಖ್ಯಸ್ಥ ಮಸೂದ್ ಅಜರ್ ಪರಿವಾರವೇ ಪೀಸ್ ಪೀಸ್ ಆಗಿದೆ ಎಂದು ಜೈಷ್-ಎ-ಮೊಹಮ್ಮದ್ ಸಂಘಟನೆಯ ನಾಯಕನೊಬ್ಬ ಹೇಳಿಕೆ ನೀಡಿದ್ದಾನೆ. ಇದು ಆಪರೇಷನ್ ಸಿಂದೂರದ ವೇಳೆ ಉಗ್ರ ಅಜರ್ ಕುಟುಂಬದ ಸರ್ವನಾಶ ಕುರಿತು ಮೊದಲ ಬಾರಿ ಉಗ್ರ ಸಂಘಟನೆಯಿಂದ ಹೊರಬಿದ್ದ ಹೇಳಿಕೆಯಾಗಿದೆ.
ಮೊದಲ ಬಾರಿ ಬಾಯ್ಬಿಟ್ಟ ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕ
ಜೈಷ್ ಸಂಘಟನೆಯ ಹಿರಿಯ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ಸೆ.6ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ನಾವು ನಮ್ಮ ಸಿದ್ದಾಂತ ಮತ್ತು ಭೌಗೋಳಿಕೆ ಗಡಿ ಕಾಪಾಡುವ ನಿಟ್ಟಿನಲ್ಲಿ ದೆಹಲಿ ಸೇರಿ ಹಲವು ಕಡೆ ದಾಳಿ ನಡೆಸಿದ್ದೆವು. ಈ ಎಲ್ಲಾ ಬಲಿದಾನದ ಹೊರತಾಗಿಯೂ ಮೇ 7ರಂದು ಬಹಾವಲ್ಪುರದಲ್ಲಿನ ಅಜರ್ ಮಸೂದ್ ಕುಟುಂಬ ಪೀಸ್ ಪೀಸ್ (ಭಾರತದ ದಾಳಿ) ಆಯಿತು ಎಂದು ಹೇಳಿದ್ದಾನೆ. ಈ ಕುರಿತ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಪಹಲ್ಗಾಂ ದಾಳಿಗೆ ಪ್ರತಿಯಾಗಿ ನಡೆದಿದ್ದ ಆಪರೇಷನ್ ಸಿಂದೂರ್
ಏ.22ರ ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ನಡೆಸಿದ್ದು, ಬಹಾವಲ್ಪುರ ಸೇರಿದಂತೆ 9 ಉಗ್ರನೆಲೆಗಳನ್ನು ಗುರಿಯಾಗಿಸಿ ಭಾರೀ ದಾಳಿ ನಡೆಸಿತ್ತು. ಈ ವೇಳೆ ಅಜರ್‌ನ ಸಹೋದರಿ, ಭಾವ ಸೇರಿದಂತೆ ಪರಿವಾರದ 10 ಮಂದಿ ಹತರಾಗಿದ್ದರು. ಬಳಿಕ ಸರ್ಕಾರಿ ಗೌರವಗಳೊಂದಿಗೆ ಅವರೆಲ್ಲರ ಅಂತ್ಯಸಂಸ್ಕಾರ ನಡೆದಿದ್ದು, ಅದರಲ್ಲಿ ಅಜರ್ ಭಾಗವಹಿಸಿದ್ದ. ಜತೆಗೆ ಪಾಕ್ ಸೇನೆಯ ಕೆಲ ಅಧಿಕಾರಿಗಳೂ ಉಪಸ್ಥಿತರಿದ್ದು, ಉಗ್ರರು ಹಾಗೂ ಸೇನೆಗೂ ಇರುವ ನಂಟನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದರು.
