Asianet Suvarna News Asianet Suvarna News

Breaking: ಭಾನುವಾರ ಬರೋದಿಲ್ಲ ಮಿಜೋರಾಂ ಚುನಾವಣೆ ಫಲಿತಾಂಶ, ಕಾರಣವೇನು?


ಪಂಚರಾಜ್ಯ ಚುನಾವಣೆಗಳ ಪೈಕಿ ಈಶಾನ್ಯದ ಪುಟ್ಟ ರಾಜ್ಯ ಮಿಜೋರಾಂನ ಚುನಾವಣೆ ಕೂಡ ನಡೆದಿತ್ತು. ಎಲ್ಲಾ ರಾಜ್ಯಗಳ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದ್ದರೂ, ಕೊನೇ ಹಂತದಲ್ಲಿ ಕೊಂಚ ಬದಲಾವಣೆಯಾಗಿದೆ.

Counting of votes for Mizoram Assembly polls deferred by a day to Monday san
Author
First Published Dec 1, 2023, 8:47 PM IST

ನವದೆಹಲಿ (ಡಿ.1): ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯದ ಚುನಾವಣೆಗಳು ಯಶಸ್ವಿಯಾಗಿ ನಡೆದಿದ್ದು, ಭಾನುವಾರ ಫಲಿತಾಂಶ ಘೋಷಣೆ ಮಾಡಲು ಕೇಂದ್ರ ಚುನಾವಣಾ ಆಯೋಗ ಉತ್ಸುಕವಾಗಿತ್ತು. ಆದರೆ, ಕೊನೇ ಹಂತದಲ್ಲಿ ಇದರಲ್ಲಿ ಕೊಂಚ ಬದಲಾವಣೆ ಮಾಡಿರುವ ಕೇಂದ್ರ ಚುನಾವಣಾ ಅಯೋಗ, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಭಾನವಾರ ಘೋಷಣೆಯಾಗಲಿದ್ದರೆ, ಮೀಜೋರಾಂ ರಾಜ್ಯದ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಎಂದು ತಿಳಿಸಿದೆ.' ಭಾರತೀಯ ಚುನಾವಣಾ ಆಯೋಗವು 2023ರ 3ನೇ ಡಿಸೆಂಬರ್ (ಭಾನುವಾರ) ರಿಂದ 2023ರ ಡಿಸೆಂಬರ್ 4 (ಸೋಮವಾರ) ವರೆಗೆ ಮಿಜೋರಾಂನ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಎಣಿಕೆಯ ದಿನಾಂಕವನ್ನು ಪರಿಷ್ಕರಣೆ ಮಾಡಿದೆ. ಮಿಜೋರಾಂ ಜನರಿಗೆ ಭಾನುವಾರದಂದು ವಿಶೇಷ ಪ್ರಾಮುಖ್ಯತೆ ಇರುವ ಹಿನ್ನೆಲೆಯಲ್ಲಿ, ಡಿಸೆಂಬರ್‌ 3ರ ಬದಲು ಇತರ ಕೆಲವು ವಾರದ ದಿನಕ್ಕೆ ಎಣಿಕೆಯ ದಿನಾಂಕವನ್ನು ಬದಲಾಯಿಸಲು ಅಲ್ಲಿ ಸರ್ವಪಕ್ಷಗಳು ಮನವಿ ಮಾಡಿದ್ದವು. ಇದನ್ನು ಇಸಿಐ ಸ್ವೀಕರಿಸಿದೆ' ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶಗಳ ದಿನಾಂಕವನ್ನು ಡಿಸೆಂಬರ್ 4 ಕ್ಕೆ ಮುಂದೂಡಲಾಗಿದೆ. ರಾಜ್ಯದಲ್ಲಿ ಮಿಜೋರಾಂ ಎನ್‌ಜಿಒ ಸಮನ್ವಯ ಸಮಿತಿ (ಎನ್‌ಜಿಒಸಿಸಿ) ಆಯೋಜಿಸಿದ ಪ್ರತಿಭಟನೆಗಳ ಮಧ್ಯೆ ಎಣಿಕೆ ದಿನಾಂಕವನ್ನು ಪರಿಷ್ಕರಿಸುವ ನಿರ್ಧಾರ ಮಾಡಲಾಗಿದೆ.  ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಕ್ರಿಶ್ಚಿಯನ್ನರಿಗೆ ಪವಿತ್ರ ದಿನವಾದ ಭಾನುವಾರದಂದೇ ಚುನಾವಣಾ ಫಲಿತಾಂಶ ಪ್ರಕಟವಾಗುವ ಬಗ್ಗೆ ಈ ಗ್ರೂಪ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣ ಸೇರಿದಂತೆ ಇತರ ರಾಜ್ಯಗಳೊಂದಿಗೆ ಮಿಜೋರಾಂನಲ್ಲಿ ಕೂಡ ಮತ ಎಣಿಕೆಯನ್ನು ಡಿಸೆಂಬರ್‌ 3 ರಂದು ಮಾಡುವುದಾಗಿ ಆಯೋಗ ಈ ಹಿಂದೆ ಘೋಷಣೆ ಮಾಡಿತ್ತು. ಪ್ರಮುಖ ರಾಜಕೀಯ ಪಕ್ಷಗಳು, ನಾಗರಿಕ ಸಮಾಜಗಳ ಸಂಘಟನೆ ಮತ್ತು ಇತರರು, ಮಿಜೋರಾಂ ಕ್ರಿಶ್ಚಿಯನ್‌ ಪ್ರಾಬಲ್ಯವಿರುವ ರಾಜ್ಯ ಭಾನುವಾರ ಚರ್ಚ್‌ ಕಾರ್ಯಕ್ರಗಳು ಇರುವ ಕಾರಣ ಈ ದಿನಾಂಕವನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿತ್ತು.

ಮಿಜೋರಾಂನ ಮುಖ್ಯ ಚುನಾವಣಾ ಅಧಿಕಾರಿ ಮಧುಪ್ ವ್ಯಾಸ್ ಅವರು ಪಿಟಿಐಗೆ ಮಾಡತನಾಡಿದ್ದು,  ಮತ ಎಣಿಕೆಯು ಸಾಮಾನ್ಯ ಜನರನ್ನು ಒಳಗೊಳ್ಳುವುದಿಲ್ಲ ಮತ್ತು ಅವರು ಡಿಸೆಂಬರ್ 3 ರಂದು ಅವರು ಇಷ್ಟಪಡುವದನ್ನು ಮಾಡಲು ಮುಕ್ತರಾಗಿದ್ದಾರೆ, ಏಕೆಂದರೆ ನೇರವಾಗಿ ಚುನಾವಣಾ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಗೊತ್ತುಪಡಿಸಿದ ಸಿಬ್ಬಂದಿ ಮಾತ್ರ ಮತ ಎಣಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದಿದ್ದರು.

News Hour: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ; ತೆಲಂಗಾಣ-ಛತ್ತೀಸ್‌ಗಢ ಕಾಂಗ್ರೆಸ್‌, ವಿಜೋರಾಂ ಅತಂತ್ರ?

40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ನಡೆಯಿತು. 8.57 ಲಕ್ಷಕ್ಕೂ ಹೆಚ್ಚು ಮತದಾರರಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಮತದಾರರು 174 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಮತ ಚಲಾಯಿಸಿದ್ದಾರೆ.

ಛತ್ತೀಸ್‌ಗಢ, ತೆಲಂಗಾಣದಲ್ಲಿ ಕಾಂಗ್ರೆಸ್‌ ಬಹುಪರಾಕ್‌, ಮಿಜೋರಾಂ ಅತಂತ್ರ!

Latest Videos
Follow Us:
Download App:
  • android
  • ios