Asianet Suvarna News Asianet Suvarna News

ಮೋದಿ ಪ್ರಧಾನಮಂತ್ರಿ ಪದಗ್ರಹಣಕ್ಕೆ ಕೌಂಟ್‌ಡೌನ್; ಮಂತ್ರಿಗಿರಿಗಾಗಿ ರಾಜ್ಯದ ನಾಲ್ವರು ಸೇರಿ 43 ಮಂದಿಗೆ ಕರೆ

ದೇಶದಲ್ಲಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪದಗ್ರಹಣ ಸ್ವೀಕಾರ ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಈವರೆಗೆ ಸಚಿವರಾಗಲು ರಾಜ್ಯದ 4 ಜನರು ಸೇರಿದಂತೆ 43 ಮಂದಿಗೆ ಕರೆ ಬಂದಿದೆ. 

Countdown to Narendra Modi Prime Minister Oath taking and 43 Members get Call for Minister Post sat
Author
First Published Jun 9, 2024, 12:41 PM IST | Last Updated Jun 9, 2024, 12:53 PM IST

ನವದೆಹಲಿ (ಜೂ.09): ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿದ ಎನ್‌ಡಿಎ ಮೈತ್ರಿಕೂಟದ ನೇತೃತ್ವದಲ್ಲಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪದಗ್ರಹಣ ಸ್ವೀಕಾರಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಇನ್ನು ಕ್ಯಾಬಿನೆಟ್ ಸಚಿವರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಬಗ್ಗೆ ಕುತೂಹಲ ಇರುವಾಗಲೇ ರಾಜ್ಯದ ನಾಲ್ವರು ಸೇರಿದಂತೆ 43 ಮಂದಿಗೆ ಕರೆ ಮಾಡಲಾಗಿದೆ. ಈ ಪೈಕಿ ಯಾರಿಗೆ ಮಂತ್ರಿಗಿರಿ ಭಾಗ್ಯ ಸಿಗಲಿದೆ ಎಂಬುದು ಸಂಜೆ ವೇಳೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಇಂದು ಸಂಜೆ ನಡೆಯಲಿರುವ ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಲದ ಪದಗ್ರಹಣ ಕಾರ್ಯಕ್ರಮವು 19 ಜ್ಯೇಷ್ಠ, 1946 ರ ಭಾನುವಾರದಂದು (09 ಜೂನ್, 2024) ನಡೆಯಲಿದೆ. ಸಂಜೆ 7:15 ಕ್ಕೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದಗ್ರಹಣ ಕಾರ್ಯಕ್ರಮ ಎಂದು ಪಾಸ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸೋ ಗಣ್ಯರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಪಾಸ್‌ನಲ್ಲಿ ಸೂಚಿಸಿದ ಗೇಟ್ ನಲ್ಲೆ ಗಣ್ಯರಿಗೆ ಪ್ರವೇಶ ನೀಡಲಾಗುತ್ತದೆ.

3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮೊದಲು ಗಾಂಧಿ, ಅಟಲ್ ಸ್ಮಾರಕಕ್ಕೆ ಮೋದಿ ನಮನ

ಬಿಜೆಪಿ ಹೈಕಮಾಂಡ್‌ನಿಂದ ಈವರೆಗೆ ಕರೆ ಮಾಡಲಾದ ಪಟ್ಟಿ:
1. ಅಮಿತ್ ಶಾ
2. ಮನ್ಸುಖ್ ಮಾಂಡವಿಯಾ
3. ಅಶ್ವಿನಿ ವೈಷ್ಣವ್
4. ನಿರ್ಮಲಾ ಸೀತಾರಾಮನ್ (ಕರ್ನಾಟಕ)
5. ಪಿಯೂಷ್ ಗೋಯಲ್
6. ಜಿತೇಂದ್ರ ಸಿಂಗ್
7. ಶಿವರಾಜ್ ಸಿಂಗ್ ಚೌವ್ಹಾಣ್
8. ಹರ್ದೀಪ್ ಸಿಂಗ್ ಪುರಿ
9. ಹೆಚ್.ಡಿ. ಕುಮಾರಸ್ವಾಮಿ (ಕರ್ನಾಟಕ) 
10. ಚಿರಾಗ್ ಪಾಸ್ವಾನ್
11. ನಿತಿನ್ ಗಡ್ಕರಿ
12. ರಾಜನಾಥ್ ಸಿಂಗ್
13. ಜ್ಯೋತಿರಾದಿತ್ಯ ಸಿಂಧಿಯಾ
14. ಕಿರಣ್ ರಿಜಿಜು
15. ಗಿರಿರಾಜ್ ಸಿಂಗ್
16. ಜಯಂತ್ ಚೌಧರಿ
17. ಅಣ್ಣಾಮಲೈ
18. ಎಂ.ಎಲ್. ಖಟ್ಟರ್
19. ಸುರೇಶ್ ಗೋಪಿ (ಕೇರಳದ ಒಬ್ಬರೇ ಬಿಜೆಪಿ ಸಂಸದ)
20. ಜಿತನ್ ರಾಮ್ ಮಾಂಝಿ
21. ರಾಮನಾಥ್ ಠಾಕೂರ್ (ಮಾಸ್)
22. ಜಿ. ಕಿಶನ್ ರೆಡ್ಡಿ
23. ಬಂಡಿ ಸಂಜಯ್
24. ಅರ್ಜುನ್ ರಾಮ್ ಮೇಘವಾಲ್
25. ಪ್ರಹ್ಲಾದ್ ಜೋಶಿ (ಕರ್ನಾಟಕ)
26. ಎ.ಜೆ.ಎಸ್‌.ಯು ಸಂಸದ ಚಂದ್ರಶೇಖರ್ ಚೌಧರಿ
27. ಡಾ. ಚಂದ್ರಶೇಖರ್ ಪೆಮ್ಮಸಾನಿ
28. ರಾಮ್ ಮೋಹನ್ ನಾಯ್ಡು ಕಿಂಜರಾಪು
29. ರವನೀತ್ ಸಿಂಗ್ ಬಿಟ್ಟು
30. ಜಿತಿನ್ ಪ್ರಸಾದ್
31. ಪಂಕಜ್ ಚೌಧರಿ
32. ಬಿಎಲ್ ವರ್ಮಾ
33. ಲಾಲನ್ ಸಿಂಗ್
34. ಸೋನೊವಾಲ್
35. ಅನುಪ್ರಿಯಾ ಪಟೇಲ್
36. ಪ್ರತಾಪ್ ರಾವ್ ಜಾಧವ್
37. ಅನ್ನಪೂರ್ಣ ದೇವಿ
38. ರಕ್ಷಾ ಖಡ್ಸೆ
39. ಶೋಭಾ ಕರಂದ್ಲಾಜೆ (ಕರ್ನಾಟಕ)
40. ಕಮಲ್ಜೀತ್ ಸೆಹ್ರಾವತ್
41. ರಾವ್ ಇಂದರ್ಜೀತ್ ಸಿಂಗ್
42. ರಾಮ್ ದಾಸ್ ಅಠವಳೆ
43. ಹರ್ಷ್ ಮಲ್ಹೋತ್ರಾ

ಮೋದಿ ಪ್ರಮಾಣ ವಚನಕ್ಕೆ ಎಚ್‌ಡಿಕೆ ಕುಟುಂಬ ದಿಲ್ಲಿಗೆ: ಬಿಜೆಪಿಯಿಂದ ಕರೆ?

ಒಟ್ಟು 46 ಮಂದಿಗೆ ಸಚಿವ ಸ್ಥಾನ: ಇನ್ನು ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಮಂತ್ರಿ ಆಗಿ ಪದಗ್ರಹಣ ಸ್ವೀಕಾರದ ನಂತರ ಮೋದಿ ಕ್ಯಾಬಿನೆಟ್‌ಗೆ 46 ಮಂದಿ ಸೇರಲಿದ್ದಾರೆ. ಈವರೆಗೆ ರಾಜ್ಯದ 4 ಜನರು ಸೇರಿದಂತೆ ಒಟ್ಟು 43 ಮಂದಿಗೆ ಸಚಿವರಾಗಿ ಪದಗ್ರಹಣ ಸ್ವೀಕಾರಕ್ಕೆ ಕರೆ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಕರ್ನಾಟಕದಿಂದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರು ಕೂಡ ಸಚಿವ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಆದರೆ, ಯಾರಿಗೆ ಮಂತ್ರಿಗಿರಿ ದೊರೆಯಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

Latest Videos
Follow Us:
Download App:
  • android
  • ios