ನವದೆಹಲಿ[ಜ.26]: ಆ.5ರಂದು ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದಾಗಿನಿಂದಲೂ ಗೃಹ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರ ಭಾವಚಿತ್ರವೊಂದು ಟ್ವೀಟರ್‌ನಲ್ಲಿ ಶನಿವಾರ ಭಾರೀ ವೈರಲ್‌ ಆಗಿದೆ.

ಅಶ್ಲೀಲ ಚಿತ್ರ ವೀಕ್ಷಣೆಗೆ ಕಾಶ್ಮೀರಿಗಳಿಂದ ಇಂಟರ್ನೆಟ್‌ ಬಳಕೆ: ಸಾರಸ್ವತ್‌ ಎಡವಟ್ಟು!

ಕಾಶ್ಮೀರದಲ್ಲಿ 6 ತಿಂಗಳ ಬಳಿಕ 2ಜಿ ಇಂಟರ್‌ನೆಟ್‌ ಸೇವೆ ಲಭ್ಯವಾಗಿದ್ದು, ಒಮರ್‌ ಅಬ್ದುಲ್ಲಾ ಅವರ ಇತ್ತೀಚಿನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಉದ್ದನೆಯ ಗಡ್ಡ ಬಿಟ್ಟು ಟೋಪಿ ಧರಿಸಿರುವ ಒಮರ್‌ ಅಬ್ದಲ್ಲಾ ಗುರುತು ಸಿಗದಂತಾಗಿದ್ದಾರೆ. ಈ ಫೋಟೋ ನಿಜವಾಗಿಯೂ ಒಮರ್‌ ಅಬ್ದುಲ್ಲಾ ಅವರದ್ದಾ ಎಂದು ಜನರು ಅಚ್ಚರಿಪಟ್ಟಿದ್ದಾರೆ.

ಬಿಡುಗಡೆ ಬಳಿಕ ಫಾರೂಕ್, ಓಮರ್‌ ಭಾರತದಿಂದ ಔಟ್?

ಗುರುತಿಸಲು ಸಾಧ್ಯವಾಗ್ತಿಲ್ಲ ಅಂದ್ರ ದೀದಿ

ಇನ್ನು ಫೋಟೋ ವೈರಲ್ ಆದ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಒಂದನ್ಜನು ಮಾಡಿ 'ಇದು ಒಮರ್ ಅಬ್ದುಲ್ಲಾರ ಫೋಟೋ ಎಂದು ಗುರುತಿಸಲೂ ನನ್ನಿಂದ ಸಾಧ್ಯವಾಗಲಿಲ್ಲ. ಇದನ್ನು ನೋಡಿ ಬಹಳ ನೋವಾಗುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಹೀಗಾಗುತ್ತಿದೆ ಎಂಬುವುದು ದುರಾದೃಷ್ಟಕರ. ಇದಕ್ಕೆ ಯಾವಾಗ ಕೊನೆ?' ಎಂದು ಪ್ರಶ್ನಿಸಿದ್ದಾರೆ.