ಲಸಿಕೆ ಪಡೆಯಲು ಇನ್ನು ಒಟಿಪಿ ಕಡ್ಡಾಯ| ಕೋವಿನ್‌ನಲ್ಲಿ ನೋಂದಣಿ ಬಳಿಕ ಇನ್ನು ಒಟಿಪಿ ರವಾನೆ| ಈ ಒಟಿಪಿ ಹೇಳಿದರೆ ಕೋವಿನ್‌ನಲ್ಲಿ ನಮೂದಿಸಿ ಲಸಿಕೆ ನೀಡಿಕೆ| ದತ್ತಾಂಶ ಸುರಕ್ಷತೆ, ನೈಜ ಫಲಾನುಭವಿಗೆ ಲಸಿಕೆಗೆ ಈ ಕ್ರಮ

ನವದೆಹಲಿ(ಮೇ.08): ಕೋವಿನ್‌ ವೆಬ್‌ಸೈಟ್‌ನಲ್ಲಿ ಡೇಟಾ ಸುರಕ್ಷತೆಯ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ 4 ಅಂಕಿಗಳ ಸೆಕ್ಯೂರಿಟಿ ಕೋಡ್‌ ಅನ್ನು ಪರಿಚಿಯಿಸಿದೆ. ಈ ನಿಯಮ ಶನಿವಾರದಿಂದಲೇ ಜಾರಿಗೆ ಬರಲಿದೆ.

ಇದರ ಅನ್ವಯ, ಕೋವಿನ್‌ ಪೋರ್ಟ್‌ನಲ್ಲಿ ಲಸಿಕೆ ಪಡೆಯಲು ಇಚ್ಛಿಸುವವರು ಯಶಸ್ವಿಯಾಗಿ ನೋಂದಣಿ ಆದ ಬಳಿಕ, ಅವರ ಮೊಬೈಲ್‌ಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ. ಫಲಾನುಭವಿಗಳು ಲಸಿಕೆ ಪಡೆದುಕೊಳ್ಳುವುದಕ್ಕೂ ಮುನ್ನ ತಪಾಸಣಾ ಸಿಬ್ಬಂದಿ ಅಥವಾ ಲಸಿಕೆ ಹಾಕುವ ಆರೋಗ್ಯ ಸಿಬ್ಬಂದಿಗೆ ಒಟಿಪಿ ಸಂಖ್ಯೆ ಒದಗಿಸಬೇಕು. ಈ ವೇಳೆ ‘ಸಕ್ಸಸ್‌’ ಫಲಿತಾಂಶ ಬಂದ ಕೂಡಲೇ ಲಸಿಕೆ ನೀಡಲಾಗುತ್ತದೆ. ಈ ಅಂಕಿಯನ್ನು ಕೋವಿನ್‌ ಪೋರ್ಟ್‌ಲ್‌ನಲ್ಲೂ ನಮೂದಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

"

ಸ್ವೀಕೃತಿ ಪತ್ರದಲ್ಲಿಯೂ ಈ ಸಂಖ್ಯೆಯನ್ನು ಮುದ್ರಣ ಮಾಡಲಾಗಿರುತ್ತದೆ.

ಒಟಿಪಿ ಏಕೆ?:

ಕೆಲವು ವ್ಯಕ್ತಿಗಳು ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಅಪಾಯಂಟ್ಮೆಂಟ್‌ ಪಡೆದುಕೊಂಡು ನಿಗದಿತ ದಿನದಂದು ಲಸಿಕೆ ಪಡೆಯಲು ತೆರಳದೇ ಇದ್ದರೂ, ‘ನೀವು ಲಸಿಕೆಯನ್ನು ಪಡೆದುಕೊಂಡಿದ್ದೀರಿ’ ಎಂಬ ತಪ್ಪು ಸಂದೇಶಗಳು ಮೊಬೈಲ್‌ಗೆ ಬರುತ್ತಿದ್ದವು. ಹೀಗಾಗಿ ಅದೇ ನೈಜ ಫಲಾನುಭವಿ ಲಸಿಕೆ ಪಡೆಯಬೇಕೆಂಬ ಉದ್ದೇಶದಿಂದ ಒಟಿಪಿಯನ್ನು ನಮೂದಿಸುವ ಕ್ರಮವನ್ನು ಪರಿಚಯಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona