ಇಟಾನಗರ[ಮಾ.09]: ಭಾರತಕ್ಕೆ ಬಂದ ವಿದೇಶಿಯರು ಮತ್ತು ವಿದೇಶಕ್ಕೆ ಹೋಗಿ ಬಂದ ಭಾರತೀಯರಿಂದಾಗಿ, ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ವಿದೇಶಿಯರ ಭೇಟಿ ಮೇಲೆ ಅರುಣಾಚಲ ಪ್ರದೇಶ ಸರ್ಕಾರ ನಿಷೇಧ ಹೇರಿದೆ

ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಬೇಕಾದಲ್ಲಿ ವಿದೇಶಿಯರು ‘ಸಂರಕ್ಷಿತ ಪ್ರದೇಶ ಸಮ್ಮತಿ’ ಪತ್ರ ಪಡೆಯುವುದು ಕಡ್ಡಾಯ.

ಇದೀಗ ಕೊರೋನಾ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ವಿದೇಶಿಯರಿಗೆ ಇಂಥ ಪತ್ರ ವಿತರಿಸದಂತೆ ರಾಜ್ಯ ಸರ್ಕಾರ ಸೂಚಿಸಿದೆ. ಇತ್ತೀಚೆಗೆ ಸಿಕ್ಕಿಂ ರಾಜ್ಯ ಸರ್ಕಾರ ಕೂಡಾ ಇಂಥದ್ದೇ ಆದೇಶ ಹೊರಡಿಸಿತ್ತು.