Asianet Suvarna News Asianet Suvarna News

ಬಸ್‌ ಸ್ಟ್ಯಾಂಡ್‌ನಲ್ಲಿ ಕೊರೋನಾ ಸೋಂಕಿತನ ಶವ, ತನಿಖೆಗೆ ಸಿಎಂ ಆದೇಶ!

ಬಸ್‌ ಸ್ಟ್ಯಾಂಡ್‌ನಲ್ಲಿ ಅನಾಥವಾಗಿ ಬಿದ್ದಿತ್ತು ಕೊರೋನಾ ಸೋಂಕಿತನ ಶವ| ಆಸ್ಪತ್ರೆ ಅಧಿಕಾರಿಗಳ ಮಾತು ಒಂದಾದರೆ, ಕುಟುಂಬ ಸದಸ್ಯರು ಹೇಳುತ್ತಿರುವುದೇ ಮತ್ತೊಂದು| ಸೂಕ್ತ ತನಿಖೆಗೆ ಆದೇಸಿಸಿದ ಮುಖ್ಯಮಂತ್ರಿ

Coronavirus patient body found at ahmedabad bus stand CM vijay rupani orders Probe
Author
Bangalore, First Published May 17, 2020, 3:29 PM IST

ಅಮದಾಬಾದ್(ಮೇ.17): ಈ ಸಂಬಂಧ ಪ್ರತಿಕ್ರಿಯಿಸಿರುವ ಮೃತ ವ್ಯಕ್ತಿಯ ಮಗ 'ಮೇ 10 ರಂದು 67 ವರ್ಷದ ತಂದೆಯನ್ನು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಎರಡು ದಿನಗಳ ಬಳಿಕ ಬಂದಿದ್ದ ವರದಿಯಲ್ಲಿ ಆವರಿಗೆ ಕೊರೋನಾ ಸೋಂಕಿರುವುದು ದೃಢವಾಗಿತ್ತು. ಆದರೆ ಮೇ 15 ರಂದು ಪೊಲೀಸ್ ಠಾಣೆಯಿಂದ ಕರೆಯೊಂದು ಬಂದಿದ್ದು, ನಿಮ್ಮ ತಂದೆಯ ಮೃತದೇಹ ದನಿಲಿಮ್ದ ಬಸ್‌ ಸ್ಟ್ಯಾಂಡ್ ಬಳಿ ಪತ್ತೆಯಾಗಿದೆ ಎಂದು ಮಾಹಿತಿ ನಿಡಿದ್ದಾರೆ ಎಂದಿದ್ದಾನೆ.

ಇನ್ನು ಘಟನೆ ಬೆನ್ನಲ್ಲೇ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಸ್ಪೆಷಲ್ ಡ್ಯೂಟಿಯಲ್ಲಿರುವ ಡಾ. ಎಂ. ಎಂ ಪ್ರಭಾಕರ್ ಪ್ರತಿಕ್ರಿಯಿಸಿದ್ದು, 'ಈ ವ್ಯಕ್ತಿಯಲ್ಲಿ ಕಡಿಮೆ ಕೊರೋನಾ ಲಕ್ಷಣಗಳಿದ್ದವು. ಈ ನಿಟ್ಟಿನಲ್ಲಿ ಹೊಸ ಗೈಡ್‌ಲೈನ್‌ ಅನ್ವಯ ಈತನಿಗೆ ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ತಿಳಿಸಿ ಮೇ 14 ಡಿಸ್ಚಾರ್ಜ್ ಮಾಡಲಾಗಿತ್ತು. ಅಲ್ಲದೇ ಅವರು ತುಂಬಾ ಚೆನ್ನಾಗಿದ್ದರು. ಆಸ್ಪತ್ರೆಯಿಂದ ಅವರನ್ನು ವಾನದಲ್ಲಿ ಕರೆದೊಯ್ಯಲಾಗಿತ್ತು. ಆದರೆ ಅವರ ಮನೆ ಬಳಿ ರಸ್ತೆ ಚೆನ್ನಾಗಿರದ ಕಾರಣ ಹತ್ತಿರದ ಬಸ್‌ ಸ್ಟ್ಯಾಂಡ್ ಬಳಿ ಬಿಡಲಾಗಿತ್ತು' ಎಂದಿದ್ದಾರೆ. ಆದರೆ ಈ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ತಿಳಿಸಲಾಗಿತ್ತಾ? ಇಲ್ಲವಾ? ಎಂಬ ಮಾಹಿತಿ ಲಭ್ಯವಿಲ್ಲ ಎಂದಿದ್ದಾರೆ.

ಇನ್ನು ಅಂತ್ಯ ಕ್ರಿಯೆ ಕುರಿತು ಮಾಹಿತಿ ನೀಡಿದ ಮೃತ ವ್ಯಕ್ತಿಯ ಮಗ 'ನನ್ನ ತಂದೆ ಕೊರೋನಾ ಪೀಡಿತರಾಗಿದ್ದರೂ ಅವರ ಮೃತ ದೇಹವನ್ನು ಪ್ಲಾಸ್ಟಿಕ್‌ನ್ಲಿ ಸುತ್ತಿ ಕೊಂಡೊಯ್ಯುವಂತೆ ತಿಳಿಸಿದರು. ಹೀಗಾಗಿ ಕುಟುಂಬ ಸದಸ್ಯರು ಸೇರಿ ಅಂತಿಮ ಕ್ರಿಯೆ ನಡೆಸಿದ್ದೇವೆ' ಎಂದಿದ್ದಾರೆ.

ಸದ್ಯ ಈ ಘಟನೆ ಸಂಬಂಧ ಭಾರೀ ಆಕ್ರಶ ವ್ಯಕ್ತವಾಗಿದೆ. ಮೃತ ವ್ಯಕ್ತಿಯ ಫೋಟೋ ಎಲ್ಲೆಡೆ ವೈರಲ್ ಆಗಿದದೆ. ಹೀಗಿರುವಾಗ ಗುಜರಾತ್ ಸಿಎಂ ವಿಜಯ್ ರೂಪಾನಿ ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಆಗೂ ಇಪ್ಪತ್ನಾಲ್ಕು ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಘಟನೆ ಬೆನ್ನಲ್ಲೇ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ರೂಪಾನಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇಂತಹ ನಡೆ ಸರಿಯಲ್ಲ ಎಂದೂ ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios