ಮುಂಬೈ[ಮಾ.17]: ಇಡೀ ವಿಶ್ವವನ್ನೇ ಕಾಡುತ್ತಿರುವ ಸುಮಾರು 6 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಸದ್ಯ ಭಾರತದಲ್ಲಿ ತನ್ನ ಅಟ್ಟಹಾಸ ಆರಂಭಿಸಿದೆ. ಈವರೆಗೂ ಸುಮಾರು 125 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಜನರನ್ನು ಮತ್ತಷ್ಟು ಆತಂಕಿಕ್ಕೀಡು ಮಾಡಿದೆ. ಸದ್ಯ ಮುಂಬೈನಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 64 ವರ್ಷದ ವೃದ್ಧ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 3ಕ್ಕೇರಿದೆ.

"

ಹೌದು ಕಲಬುರಗಿಯಲ್ಲಿ ದುಬೈನಿಂದ ಬಂದಿದ್ದ 76 ವರ್ಷದ ವೃದ್ಧ ಕೊರೋನಾಗೆ ಬಲಿಯಾಗಿದ್ದು, ಇದರ ಬನ್ನಲ್ಲೇ ದೆಹಲಿಯಲ್ಲಿ ಮಹಿಳೆಯೊಬ್ಬರು ಈ ಮಾರಕ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದರು. ಆದರೀಗ ಮಹಾರಾಷ್ಟ್ರದಲ್ಲೂ ವೃದ್ಧನೊಬ್ಬ ಈ ಡೆಡ್ಲಿ ಕೊರೋನಾಗೆ ಬಲಿಯಾಗುವ ಮೂಲಕ ಭಾರದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. ಸದ್ಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿದ್ದು, ಜನ ಸಾಮಾನ್ಯರೂ ಕೂಡಾ ಇವುಗಳನ್ನು ಪಾಳಿಸಿ ಈ ಸೋಂಕು ನಿಯಂತ್ರಿಸುವಲ್ಲಿ ಸಹಕರಿಸಬೇಕಿದೆ.

ಕೊರೋನಾಗೆ ಜಗತ್ತೇ ತಲ್ಲಣ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂಬೈನಲ್ಲಿ ಮೃತಪಟ್ಟಿರುವ ವೃದ್ಧನ ಪತ್ನಿ ಹಾಗೂ ಮಗನಲ್ಲೂ ಕೊರೋನಾ ಸೋಂಕು ಕಾನಿಸಿಕೊಂಡಿದ್ದು, ಇವರನ್ನು ಐಸೋಲೇಷನ್‌ನಲ್ಲಿರಿಸಲಾಗಿದೆ.

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ

ಇನ್ನು ಕರ್ನಾಟಕದಲ್ಲೂ ಕೊರೋನಾ ಕಾಲಿಟ್ಟಿದ್ದು, ಸೋಂಕಿತರ ಸಂಖ್ಯೆ 10ಕ್ಕೆ ತಲುಪಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ವಾರ ಬಂದ್ ಘೋಷಿಸಿದ್ದು, ಮಾಲ್, ೖಟಿ ಬಿಟ ಕಂಪೆನಿಗಳೆಲ್ಲವೂ ಮುಚ್ಚಿವೆ. ಜನರೆಲ್ಲಾ ಮನೆಗಳಿಂದಲೇ ಕೆಲಸ ಆರಂಭಿಸಿದ್ದಾರೆ.