Asianet Suvarna News Asianet Suvarna News

ಮುಂಬೈ ವದಂತಿ ಅವಾಂತರ: ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್‌!

ಮುಂಬೈ ವದಂತಿ ಅವಾಂತರ: ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್‌!| ಮುಂಬೈನಲ್ಲಿ ವಲಸೆ ಕಾರ್ಮಿಕರ ದಂಗೆ ಪ್ರಕರಣ

Coronavirus lockdown Incluing journalist two are booked over Bandra migrants gathering
Author
Bangalore, First Published Apr 16, 2020, 8:14 AM IST

ಮುಂಬೈ(ಏ.16): ತವರಿಗೆ ತೆರಳಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ ಸಾವಿರಾರು ವಲಸಿಗ ಕಾರ್ಮಿಕರು ಮಂಗಳವಾರ ಮುಂಬೈನಲ್ಲಿ ಬೀದಿಗಿಳಿದ ಪ್ರಕರಣಕ್ಕೆ ವದಂತಿ ಅವಾಂತರವೇ ಕಾರಣ ಎಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಮೂರು ಎಫ್‌ಐಆರ್‌ ದಾಖಲಿಸಿ, ಖಾಸಗಿ ಸುದ್ದಿವಾಹಿನಿಯ ಓರ್ವ ಪತ್ರಕರ್ತನನ್ನು ವಶಕ್ಕೆ ಪಡೆದಿದ್ದು, ಮತ್ತು ಪ್ರಚೋದನಾಕಾರಿ ಟ್ವೀಟ್‌ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ವಶಕ್ಕೆ ಪಡೆಯಲ್ಪಟ್ಟಒಸ್ಮಾನಾಬಾದ್‌ ಮೂಲದ ಪತ್ರಕರ್ತ 2 ದಿನಗಳ ಹಿಂದೆ, ವಲಸಿಗರ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕರೆದೊಯ್ಯಲು ಶೀಘ್ರವೇ ರೈಲು ಸಂಚಾರ ಆರಂಭಿಸಲಾಗುತ್ತದೆ ಎಂದು ಸುದ್ದಿ ಮಾಡಿದ್ದ. ಇದನ್ನು ನಂಬಿಯೇ ಮಂಗಳವಾರ ಸಾವಿರಾರು ಜನ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ್ದರು.

ಲಾಕ್‌ಡೌನ್‌ ಎಫೆಕ್ಟ್: ಮುಂಬೈ, ಸೂರತ್‌ನಲ್ಲಿ ವಲಸಿಗರ ‘ದಂಗೆ’!

ಇನ್ನು ಲಾಕ್‌ಡೌನ್‌ನಿಂದ ಕೂಲಿ ಕೆಲಸವಿಲ್ಲದೆ ನಿರ್ಗತಿಕರಾದ ಕೆಲಸಗಾರರು ಅವರವರ ರಾಜ್ಯಗಳಿಗೆ ಮರಳಲು ಏ.18ರ ಒಳಗಾಗಿ ರೈಲು ಸೇವೆ ಆರಂಭಿಸದಿದ್ದರೆ, ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಟ್ವೀಟ್‌ ಮಾಡಿದ್ದ ವಿನಯ್‌ ದುಬೆ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios