ನವದೆಹಲಿ [ಮಾ.16] : ವಿಶ್ವಾದ್ಯಂತ ಬರೋಬ್ಬರಿ 6000 ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟಾಗಿದೆ. ಈಗಾಗಲೇ ಈ ವೈರಾಣು ಸೋಂಕಿಗೆ ಇಬ್ಬರು ಬಲಿಯಾಗಿದ್ದರೆ, 100 ಕ್ಕೂ ಅಧಿಕ ಮಂದಿ ಸೋಂಕುಪೀಡಿತರಾಗಿದ್ದಾರೆ.

"

ದೇಶಾದ್ಯಂತ ಬಂದ್ ವಾತಾವರಣ ಕಂಡುಬರುತ್ತಿದೆ. ಮನೆ  ಯಿಂದ ಹೊರಬರಲು, ಬಸ್ - ರೈಲು- ವಿಮಾನ ಏರಲೂ ಜನರು ಹೆದರುತ್ತಿದ್ದಾರೆ. ಆದರೆ ಒಂದು ವಿಷಯ ಗೊತ್ತಾ? ಭಾರತದಲ್ಲಿ ಕೊರೋನಾ ಇನ್ನೂ ಎರಡನೇ ಹಂತದಲ್ಲಿದೆ.

ಇದೇನಾದರೂ ಇನ್ನು ಎರಡು ಹಂತಗಳನ್ನು ದಾಟಿಬಿಟ್ಟರೆ, ಘೋರಾತಿಘೋರ ದುರಂತವಾಗಿಬಿಡುತ್ತದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಈ  ಅಪಾಯಕಾರಿ ಹಂತಕ್ಕೆ ಪ್ರವೇಶಿಸದಂತೆ ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ. ಕೊರೋನಾ ವೈರಸ್ ಭಾರತದಲ್ಲಿ ಈಗಾಗಲೇ ಮೊದಲ ಹಂತ ದಾಟಿ ಎರಡನೇ ಹಂತಕ್ಕೆ ಪ್ರವೇಶಿಸಿದೆ. ಇದೇನಾದರೂ 3 ಹಾಗೂ 4ನೇ  ಹಂತಕ್ಕೆ ಹೋಯಿತೆಂದರೆ, ಚೀನಾ ರೀತಿ ಭಾರತದಲ್ಲೂ ಸಹಸ್ರಾರು ಮಂದಿಯನ್ನು ಈ ಸೋಂಕು ಬಲಿ ಪಡೆದುಬಿಡುತ್ತದೆ ಎಂದು ಹೇಳಲಾಗುತ್ತಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಕೊರೋನಾ ವೈರಸ್ ವ್ಯಾಧಿಯು ೪ ಹಂತದಲ್ಲಿ ಹರಡುತ್ತದೆ. 1 ಹಾಗೂ 2 ನೇ ಹಂತದಲ್ಲಿರುವ ಭಾರತವು3 ಹಾಗೂ 4ನೇ ಹಂತವನ್ನು ಆಹ್ವಾನಿಸಿಕೊಳ್ಳುವುದನ್ನು  ತಪ್ಪಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. ಇದಕ್ಕಾಗಿ ಮುಂಜಾಗ್ರತಾ ಕ್ರಮ ಅನುಸರಿಸಲೇಬೇಕು.

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ: ಜನತೆಗೆ ಶ್ರೀರಾಮುಲು ವಿಶೇಷ ಮನವಿ

ಸರ್ಕಾರ ಕೂಡ ಈಗ ಇದೇ ಹಾದಿಯಲ್ಲಿದೆ. ಇನ್ನು 30 ದಿನದಲ್ಲಿ ೩ನೇ ಹಂತಕ್ಕೆ ಹೋಗುವುದನ್ನು ಭಾರತ ತಪ್ಪಿಸಿಕೊಳ್ಳಬೇಕು. ಕೊರೋನಾಪೀಡಿತ ದೇಶಗಳಿಂದ  ಭಾರತಕ್ಕೆ ಆಗಮಿಸಿ ದವರಲ್ಲಿ ಸೋಂಕು ಪತ್ತೆಯಾದರೆ ಅದು 1 ನೇ ಹಂತ. ಆ ರೀತಿ ಬಂದವರಿಗೆ ಸ್ಥಳೀಯರಿಗೆ ಸೋಂಕು ತಗುಲಿದರೆ 2 ನೇ ಹಂತ. ಈಗಾಗಲೇ ಇದು ಕಂಡುಬಂದಿದೆ. 3 ನೇ ಹಂತದಲ್ಲಿ ಸೋಂಕಿತ ವ್ಯಕ್ತಿಗಳಿಂದ ಇಡೀ ಸಮು ದಾಯಕ್ಕೆ ಸೋಂಕು ತಗುಲಿ, ಹೆಚ್ಚು ಪ್ರದೇಶಗಳಿಗೆ ಕೊರೋನಾ ಸೋಂಕು ಹಬ್ಬುತ್ತದೆ.  ಕೊರೋನಾ ಸೋಂಕು ಸಾಂಕ್ರಾಮಿಕ ಪಿಡುಗಿನ ಸ್ವರೂಪ ಪಡೆದರೆ ಅದು ಯಾವಾಗ ಅಂತ್ಯವಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಅದೇ ೪ನೇ ಹಂತ. ಈಗಾಗಲೇ ಚೀನಾ, ಇಟಲಿ ೪ನೇ ಹಂತದಲ್ಲಿವೆ. ಭಾರತ ಎಚ್ಚರ ತಪ್ಪಿದರೆ ಪರಿಸ್ಥಿತಿ ಕೈ ಮೀರಿ ಹೋಗಿಬಿಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

1 ಕೊರೋನಾ ಬಾಧಿತ ದೇಶಗಳಿಂದ ನಮ್ಮ ದೇಶಕ್ಕೆ ಬಂದವರಲ್ಲಿ ಕೊರೋನಾ ಸೋಂಕು ಪತ್ತೆಯಾಗುವುದು.
 
2 ಹಂತ ಒಂದು ಇಡೀ ಸಮುದಾಯಕ್ಕೆ ಕೊರೋನಾ ಅಂಟು ವುದು. ಇದರಿಂದ ಹೆಚ್ಚು  ಪ್ರದೇಶಗಳು ಬಾಧಿತವಾಗುವುದು

3 ಬೇರೆ ದೇಶಗಳಿಂದ ಬಂದಿರುವವರ ಮೂಲಕ ಸ್ಥಳೀಯ ಜನರಿಗೆ ಕೊರೋನಾ ಸೋಂಕು ತಗುಲುವುದು.
 
4 ಸೋಂಕು ಸಾಂಕ್ರಾಮಿಕ ಪಿಡುಗು ಆಗುತ್ತದೆ. ಇದರ ಅಂತ್ಯತಿಳಿ ಯದು. ಈ ಸ್ಥಿತಿ ಇಟಲಿ, ಚೀನಾದಲ್ಲಿ.