ನವದೆಹಲಿ[ಮಾ.14]: ಭಾರತದಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ಎರಡಕ್ಕೇರಿದೆ. ಕೊರೋನಾ ವೈರಸ್ ಪೀಡಿತ 69 ವರ್ಷದ ಮಹಿಳೆಯೊಬ್ಬರು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಈ ಎಲ್ಲಾ ಆತಂಕದ ನಡುವೆಯೂ ಒಳ್ಳೆ ಸುದ್ದಿಯೊಂದು ಕೇಳಿ ಬಂದಿದೆ. ಆರೋಗ್ಯ ಇಲಾಖೆ ಅನ್ವಯ ದೆಹಲಿಯ ಸಫ್ದರ್ ಗಂಜ್ ಆಸ್ಪತ್ರೆಯಲ್ಲಿ ಭರ್ತಿಯಾಗಿದ್ದ 7 ಮಂದಿ ರೋಗಿಗಳು ಗುಣಮುಖರಾಗಿದ್ದಾರೆ. ಇಷ್ಟೇ ಅಲ್ಲದೇ, ಕೇರಳದಲ್ಲಿ ಈ ಮೊದಲೇ ಮೂವರು ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಈವರೆಗೆ ದೇಶದಲ್ಲಿ ವರದಿಯಾಗಿದ್ದ 82 ಕೊರೋನಾ ಸೋಂಕಿತ ಪ್ರಕರಣಗಳಲ್ಲಿ 10 ಮಂದಿ ಗುಣಮುಖರಾಗಿದ್ದಾರೆ. ಸದ್ಯ 70 ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಸಫ್ದರ್ ಗಂಜ್ ನಲ್ಲಿ ಗುಣಮುಖರಾಗಿದ್ದಾರೆ 7 ಮಂದಿ

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಆಯುಕ್ತ ಲವ್ ಅಗರ್ವಾಲ್ ಈ ಕುರಿತು ಪ್ರತಿಕ್ರಿಯಿಸುತ್ತಾ, ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶುಕ್ರವಾರದಂದು 82ಕ್ಕೇರಿದೆ. ಇವರಲ್ಲಿ ಕೇರಳದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದವರೂ ಇದ್ದಾರೆ. ಇದನ್ನು ಹೊರತುಪಡಿಸಿ ದೆಹಲಿಯ ಸಫ್ದರ್ ಗಂಜ್ ಆಸ್ಪತ್ರೆಯಿಂದ 7 ಮಂದಿ ರೋಗಿಗಳು ಗುಣಮುಖರಾಗಿದ್ದಾರೆ ಎಂದಿದ್ದಾರೆ. ಹೀಗಿದ್ದರೂ ಸಫ್ದರ್ ಗಂಜ್ ಆಸ್ಪತ್ರೆಯಿಂದ ಮನೆಗೆ ಮರಳಿದ ರೋಗಿಗಳನ್ನು ಯಾವಾಗ ಬಿಡುಗಡೆಗೊಳಿಸಿದ್ದು ಎಂಬ ಮಾಃಇತಿ ಮಾತ್ರ ನೀಡಿಲ್ಲ.

'ಮದ್ಯದಿಂದ ಕೊರೋನಾ ಹೋಗಲ್ಲ, ಚಿಕನ್ ತಿಂದ್ರೆ ಕೊರೋನಾ ಬರಲ್ಲ..'!

ಸೋಂಕಿತರನ್ನು ಸಂಪರ್ಕಿಸಿದವರ ಮೇಲೂ ನಿಗಾ

ಆರೋಗ್ಯ ಇಲಾಖೆ ಅನ್ವಯ ಧೃಡಪಡಿಸಿರುವ ಅನ್ವಯ 65 ಭಾರತೀಯ., 15 ಇಟಾಲಿಯನ್ ಹಾಗೂ ಓರ್ವ ಕೆನಡಾ ನಾಗರಿಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹೀಗಿರುವಾಗ ಇವರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಅವರ ಮೇಲೆ ನಿಗಾ ವಹಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಈವರೆಗೂ 4 ಸಾವಿರಕ್ಕೂ ಅಧಿಕ ಮಂದಿಯನ್ನು ಪತ್ತೆ ಹಚ್ಚಲಾಗಿದೆ.