ಕೊರೋನಾ ಭೀತಿ, ವುಹಾನ್ ನಗರ ಸಂಪೂರ್ಣ ಬಂದ್: ಚೀನಾದಿಂದ ಭಾರತೀಯರ ಏರ್‌ಲಿಫ್ಟ್!
ಚೀನಾದಿಂದ ಭಾರತೀಯರ ಏರ್‌ಲಿಫ್ಟ್| ಕೊರೋನಾವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ವುಹಾನ್ ನಗರ ಸಂಪೂರ್ಣ ಬಂದ್
ನವದೆಹಲಿ[ಜ.28]: ಮಾರಣಾಂತಿಕ ಕೊರೋನಾ ವೈರಸ್‌ನ ಕೇಂದ್ರ ಸ್ಥಳವಾಗಿರುವ ಚೀನಾದ ವುಹಾನ್ ನಗರದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ತೆರವುಗೊಳಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.
ಸೋಮವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಚೀನಾ ಅಧಿಕಾರಿಗೆ ಭಾರತೀಯರ ತೆರವು ಕಾರ್ಯಾಚರಣೆಗೆ ಕೋರಿಕೆ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏರ್ ಇಂಡಿಯಾದ ಬೋಯಿಂಗ್ 747 ವಿಮಾನವನ್ನು ತೆರವು ಕಾರ್ಯಾಚರಣೆಗೆ ನಿಯೋಜಿಸಲು ಸರ್ಕಾರ ನಿರ್ಧರಿಸಿದ್ದು, ವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಟಾಯ್ಲೆಟ್ಟಿಗೆ ಹೋಗೋಕೂ ಟೈಮಿಲ್ಲ, ಡೈಪರ್ ಹಾಕಿಕೊಂಡೆ ವೈದ್ಯರ ಕೆಲಸ!
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ವುಹಾನ್ ನಗರವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಹೀಗಾಗಿ ಅಲ್ಲಿ ನೆಲೆಸಿರುವ ಭಾರತೀಯರು ಅತಂತ್ರರಾಗಿದ್ದಾರೆ. ಇದೇ ವೇಳೆ ಅಮೆರಿಕ ಹಾಗೂ ಜಪಾನ್ ದೇಶಗಳು ವುಹಾನ್‌ನಿಂದ ತಮ್ಮ ನಾಗರಿಕರನ್ನು ತೆರವುಗೊಳಿಸಲು ಅಮೆರಿಕಕ್ಕೆ ವಿಶೇಷ ವಿಮಾನವನ್ನು ಕಳುಹಿಸಿಕೊಟ್ಟಿವೆ.
90,000 ಜನರಿಗೆ ಕೊರೋನಾ ವೈರಸ್?: ಶಾಕಿಂಗ್ ವಿಡಿಯೋ ಔಟ್