ಸಿಂಗಾಪೂರ್(ಫೆ.15): ಕೊರೋನಾ ವೈರಸ್ ಭೀತಿ ಇಡೀ ಜಗತ್ತನ್ನು ಕಾಡುತ್ತಿದ್ದು, ಸಿಂಗಾಪೂರ್ ಕೂಡ ಇದಕ್ಕೆ ಹೊರತಾಗಿಲ್ಲ. ಕೊರೋನಾ ವೈರಸ್ ದಾಳಿಯ ಭೀತಿ ತೀವ್ರ ಕಟ್ಟೆಚ್ಚರ ಘೋಷಿಸಿದೆ.

ಸಿಂಗಾಪೂರದ’ದಲ್ಲಿ ಇದುವರೆಗೂ ಕೊರೋನಾ ವೈರಸ್’ನ 28 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅಲ್ಲಿನ ಸರ್ಕಾರ ಪ್ರಜೆಗಳ ಮೇಲೆ ತೀವ್ರ ನಿಗಾ ಇರಿಸಿದೆ.

ಅದರಂತೆ ಮದುವೆಗೂ ಮುಂಚೆ ಚೀನಾಗೆ ಭೇಟಿ ನೀಡಿದ್ದ ನವ ಜೋಡಿಯೊಂದರ ಮದುವೆಗೆ ಸಂಬಂಧಿಕರು ಹಾಗೂ ಗೆಳೆಯರು ಬರಲು ನಿರಾಕರಿಸಿದ್ದಕ್ಕೆ, ನವಜೋಡಿ ಲೈವ್ ಸ್ಟ್ರೀಮ್ ಮೂಲಕ ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ.

ಈ ಜೋಡಿಯ ಮದುವೆ ಇದೇ ಫೆ.2ರಂದು ಸಿಂಗಾಪೂರ್’ನ ಹೋಟೆಲ್’ನಲ್ಲಿ ನಡೆಯಬೇಕಿತ್ತು. ಆದರೆ ಮದುವೆಗೂ ಮುನ್ನ ಚೀನಾದ ಹುನಾನ್ ಪ್ರಾಂತ್ಯಕ್ಕೆ ಈ ಜೋಡಿ ಭೇಟಿ ನೀಡಿತ್ತು.

ಜ.30ರಂದು  ಸಿಂಗಾಪೂರಕ್ಕೆ ವಾಪಸ್ಸಾದ ಈ ಜೋಡಿಯನ್ನು ವೈದ್ಯರು ಪರಿಶೀಲನೆ ನಡೆಸಿದ್ದರು. ಈ ವೇಳೆ ಇಬ್ಬರಲ್ಲೂ ಕೊರೋನಾ ವೈರಾಣು ಪತ್ತೆಯಾಗದಿದ್ದರೂ, 14 ದಿನಗಳ ವೈದ್ಯಕೀಯ ತಪಾಸಣೆಗೆ ಇಬ್ಬರನ್ನೂ ಗುರಿ ಮಾಡಲಾಯಿತು.

ಬಹಿರಂಗವಾಗಿ ಕಾಣಿಸಿಕೊಂಡ ಕೊರೋನಾ ಶಂಕಿತನನ್ನು ಗುಂಡಿಟ್ಟು ಹತ್ಯೆಗೈದರು!

ಈ ಹಿನ್ನೆಲೆಯಲ್ಲಿ ಈ ಜೋಡಿಯ ಮದುವೆಗೆ ಬರಲು ಸಂಬಂಧಿಕರು ಹಾಗೂ ಗೆಳೆಯರು ನಿರಾಕರಿಸಿದರು. ಹೀಗಾಗಿ ಇಬ್ಬರೂ ಹೋಟೆಲ್ ರೂಂವೊಂದರಲ್ಲಿ ಕುಳಿತು ಲೈವ್ ಸ್ಟ್ರೀಮ್ ಮಾಡಿ ಮದುವೆ ಮಾಡಿಕೊಂಡಿದ್ದಾರೆ.

ಲೈವ್ ಸ್ಟ್ರೀಮ್ ಮೂಲಕವೇ ಈ ಜೋಡಿಯ ಸಂಬಂಧಿಕರು ಹಾಗೂ ಗೆಳೆಯರು ಇವರ ಮದುವೆಗೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.