Asianet Suvarna News Asianet Suvarna News

ವಿಮಾನ ಪ್ರಯಾಣ ಅವಧಿ ತಗ್ಗಿಸಲು ಮೋದಿ ನಿರ್ಧಾರ!

ವಿಮಾನ ಪ್ರಯಾಣ ಅವಧಿ ತಗ್ತಿಸಲು ಮೋದಿ ನಿರ್ಧಾರ| 24*7 ವಿದ್ಯುತ್‌ ಪೂರೈಕೆಗೂ ಸೂಚನೆ

Coronavirus Crisis PM Modi reviews aviation power sectors performance
Author
Bangalore, First Published May 2, 2020, 11:22 AM IST

ನವದೆಹಲಿ(ಮೇ.02): ವಿಮಾನ ಪ್ರಯಾಣಿಕರಿಗೆ ಪ್ರಯಾಣದ ಅವಧಿ ಉಳಿತಾಯ ಮಾಡಲು ಹಾಗೂ ವಿಮಾನಯಾನ ಕಂಪನಿಗಳ ವೆಚ್ಚ ತಗ್ಗಿಸಲು ದೇಶದ ವಾಯುಸೀಮೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಿಲಿಟರಿ ವ್ಯವಹಾರಗಳ ಇಲಾಖೆಯ ನಿಕಟ ಸಹಕಾರದೊಂದಿಗೆ ಇದನ್ನು ನಡೆಸಲಾಗುತ್ತದೆ. ದೇಶದ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಮತ್ತಷ್ಟುಪರಿಣಾಮಕಾರಿ ಮಾಡಲು ಸಹಾಯಕವಾಗುವ ಕಾರ್ಯತಂತ್ರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಗ್ರವಾಗಿ ಚರ್ಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೆಚ್ಚು ಆದಾಯ ಗಳಿಸಿ, ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಕ್ಷಮತೆ ತರುವ ಉದ್ದೇಶದಿಂದಾಗಿ ಆರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವಕ್ಕೆ ಹಸ್ತಾಂತರಿಸಲು ಸೂಚಿಸಲಾಗಿದೆ. ಇದಕ್ಕಾಗಿ ಮೂರು ತಿಂಗಳಲ್ಲಿ ಟೆಂಡರ್‌ ಆರಂಭಿಸುವ ಸೂಚನೆ ನೀಡಲಾಗಿದೆ. ಶುಕ್ರವಾರ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಮತ್ತಿತರರು ಇದ್ದರು.

ವಿದ್ಯುತ್‌ ಪೂರೈಕೆ:

ಇದೇ ವೇಳೆ, ವಿದ್ಯುತ್‌ ವಲಯದ ಅಧಿಕಾರಿಗಳ ಜತೆ ಪ್ರಧಾನಿ ಸಭೆ ನಡೆಸಿದರು. ಎಲ್ಲ ಬಳಕೆದಾರರಿಗೂ ದಿನದ ಇಪ್ಪತ್ನಾಲ್ಕೂ ವಿದ್ಯುತ್‌ ತಾಸು ತಡೆ ರಹಿತ ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸಲಹೆ ಮಾಡಿದರು.

Follow Us:
Download App:
  • android
  • ios