,ಮುಂಬೈ[ಮಾ.11]: ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮುಂಬೈನಲ್ಲಿ ಚೀನಾದ ಕಾನ್ಸುಲ್ ಜನರಲ್ ತಾಂಗ್ ಗುವೋಕಾಯ್ ಹಾಗೂ ಬೌದ್ಧ ಬಿಕ್ಷುಗಳ ಜೊತೆಗೂಡಿ ಕೊರೋನಾ ವೈರಸ್ ವಿರುದ್ಧ 'ಗೋ ಕೊರೋನಾ ಗೋ ಕೊರೋನಾ' ಎಂಬ ಘೋಷಣೆ ಕೂಗಿದ್ದಾರೆ. ಪ್ರಾರ್ಥನಾ ಸಭೆಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಚೀನಾದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ಮತ್ತಷ್ಟು ವ್ಯಾಪಿಸದಂತೆ ಕೋರಿ ಗೇಟ್‌ ವೇ ಆಫ್ ಇಂಡಿಯಾ ಬಳಿ ಈ ಪ್ರಾರ್ಥನಾ ಸಭೆ ಆಯೋಜಿಸಲಾಗಿತ್ತು.

ಸದ್ಯ ಜಗತ್ತನ್ನೇ ಕಂಗೆಡಿಸಿರುವ ಕೊರೋನಾ ವೈರಸ್ ಮೊದಲ ಬಾರಿ 2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡಿತ್ತು. ಸದ್ಯ ಇದು ಭಾರತ ಸೇರಿದಂತೆ 100ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಈ ಮಾರಕ ವೈರಸ್‌ಗೆ 3 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಇದು ಅರ್ಥ ವ್ಯವಸ್ಥೆಯ ಮೇಲು ಭಾರೀ ಪರಿಣಾಮ ಬೀರಿದೆ.

ಸದ್ಯ ಕೇಂದ್ರ ಸಚಿವರ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಟ್ರೋಲಿಗರ ಪಾಲಿಗೆ ಆಹಾರವಾಗಿದೆ.