ನವದೆಹಲಿ(ಜು.14): ಸೋಮವಾರ ದೇಶಾದ್ಯಂತ 26289 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 901171ಕ್ಕೆ ತಲುಪಿದೆ. ಇದರೊಂದಿಗೆ ಕಳೆದ ಕೇವಲ 5 ದಿನಗಳಲ್ಲಿ ದೇಶದಲ್ಲಿ 1.13 ಲಕ್ಷ ಹೊಸ ಕೇಸು ದೃಢಪಟ್ಟಂತೆ ಆಗಿದೆ. ಇನ್ನು ಸೋಮವಾರ ದೇಶಾದ್ಯಂತ 521 ಜನರ ಸಾವನ್ನಪ್ಪುವುದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 23670ಕ್ಕೆ ತಲುಪಿದೆ. ಇದರ ನಡುವೆಯೇ ನಿನ್ನೆ 15914 ಜನರ ಗುಣಮುಖರಾಗುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 568543ಕ್ಕೆ ತಲುಪಿದೆ.

ಮಹಾ ನಂ.1:

ಮಹಾರಾಷ್ಟ್ರದಲ್ಲಿ ಸೋಮವಾರ ಮತ್ತೆ 6497 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,60,924ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ 193 ಮಂದಿ ಬಲಿಯಾಗಿದ್ದು, ಈವರೆಗೆ ಈ ಸೋಂಕಿಗೆ ಒಟ್ಟು 10,482 ಮಂದಿ ಸಾವನ್ನಪ್ಪಿದ್ದಾರೆ.

ಉಳಿದಂತೆ ತಮಿಳುನಾಡಿನಲ್ಲಿ 4328, ಕರ್ನಾಟಕದಲ್ಲಿ 2738, ಆಂಧ್ರಪ್ರದೇಶದಲ್ಲಿ 1935, ಉತ್ತರ ಪ್ರದೇಶದಲ್ಲಿ 1654, ಪಶ್ಚಿಮ ಬಂಗಾಳ 1435 ಹಾಗೂ ದೆಹಲಿಯಲ್ಲಿ 1246 ಸೋಮವಾರ ದಾಖಲಾದ ಗರಿಷ್ಠ ಪ್ರಮಾಣದ ಸೋಂಕು ಪ್ರಕರಣಗಳಾಗಿವೆ. ಮತ್ತೊಂದೆಡೆ ಕರ್ನಾಟಕದಲ್ಲಿ 73, ತಮಿಳುನಾಡಿನಲ್ಲಿ 66, ದೆಹಲಿಯಲ್ಲಿ 40, ಆಂಧ್ರಪ್ರದೇಶದಲ್ಲಿ 37 ಹಾಗೂ ಪಶ್ಚಿಮ ಬಂಗಾಳದಲ್ಲಿ 24 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ದೇಶಾದ್ಯಂತ ಸೋಮವಾರ ಈ ಸೋಂಕಿಗೆ ಒಟ್ಟು 520 ಮಂದಿ ಬಲಿಯಾದಂತಾಗಿದೆ.