ನವದೆಹಲಿ(ಏ.28): ದೇಶದಲ್ಲಿ ಕೊರೋನಾ ವೈರಸ್‌ ಪ್ರಕಣಗಳು 30 ಸಾವಿರದ ಗಡಿಗೆ ಸಮೀಪಿಸಿವೆ. ಭಾನುವಾರ 1671 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 29122ಕ್ಕೆ ಆಗಿದೆ. 57 ಮಂದಿ ಸಾವಿಗೀಡಾಗಿದ್ದು, ಈವರೆಗಿನ ಮೃತರ ಸಂಖ್ಯೆ 930ಕ್ಕೆ ಏರಿಕೆ ಆಗಿದೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 522 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 8,590ಕ್ಕೆ ಏರಿಕೆ ಆಗಿದೆ.

22% ರೋಗಿಗಳು ಗುಣಮುಖ

ನವದೆಹಲಿ: ಕೊರೋನಾ ವೈರಸ್‌ ಮಹಾಮಾರಿ ವ್ಯಾಪಿಸುತ್ತಿರುವ ಹೊತ್ತಿನಲ್ಲೇ ಸಮಾಧಾನಕರ ಸಂಗತಿಯೆಂದರೆ, ಸೋಂಕು ತಗುಲಿದವರ ಪೈಕಿ ಶೇ.22.17ರಷ್ಟುರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು ಎಂದು 6,184 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್‌ ತಿಳಿಸಿದ್ದಾರೆ.

ಹಾಟ್‌ಸ್ಪಾಟ್‌ ಅಲ್ಲದ ಕಡೆ ಲಾಕ್‌ಡೌನ್‌ ಸಡಿಲ, ಮೋದಿ ಸುಳಿವು!

ದಾವಣಗೆರೆ ಸೇರಿ 16 ಜಿಲ್ಲೆಗಳಲ್ಲಿ 28 ದಿನದಿಂದ ಹೊಸ ಕೇಸು ಇಲ್ಲ

ಕರ್ನಾಟಕದ ದಾವಣಗೆರೆ ಸೇರಿದಂತೆ ದೇಶದ 16 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಒಂದೇ ಒಂದು ಹೊಸ ಪ್ರಕರಣಗಳು ದಾಖಲಾಗಿಲ್ಲ. ಅದೇ ರೀತಿ 25 ರಾಜ್ಯಗಳ 85 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಒಂದೇ ಒಂದು ಹೊಸ ಪ್ರಕರಣ ದಾಖಲಾಗಿಲ್ಲ ಎಂದು ಲವ್‌ ಅಗರ್ವಾಲ್‌ ತಿಳಿಸಿದ್ದಾರೆ.

ಗಂಗೆ ಶುದ್ಧವಾದ ಬೆನ್ನಲ್ಲೇ ನದಿಯಲ್ಲಿ ಡಾಲ್ಫಿನ್‌ ಪ್ರತ್ಯಕ್ಷ!, ವಿಡಿಯೋ ವೈರಲ್

ಗುಣಮುಖರಾದವರಿಂದ ಸೋಂಕು ಹರಡಲ್ಲ

ಕೊರೋನಾ ವೈರಸ್‌ನಿಂದ ಗುಣಮುರಾಗಿರುವ ವ್ಯಕ್ತಿಗಳ ಬಗ್ಗೆ ಭಯ ಪಡಬೇಕಾದ ಅಗತ್ಯವಿಲ್ಲ. ಸೋಂಕಿನಿಂದ ಚೇತರಿಸಿಕೊಂಡವರಿಂದ ಬೇರೆಯವರಿಗೆ ವೈರಸ್‌ ಹರಡುವ ಅಪಾಯ ಇಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.