ನವದೆಹಲಿ(ಮೇ.25): ‘ಕೊರೋನಾ ವೈರಸ್‌ನಿಂದ ಉಂಟಾದ ಆದಾಯ ಕುಸಿತ, ಉದ್ಯೋಗ ನಷ್ಟಮತ್ತು ಖರ್ಚು ಮಾಡಲು ಜನರು ಹಿಂದೆ-ಮುಂದೆ ನೋಡುತ್ತಿರುವುದರಿಂದ ಈ ವರ್ಷದ ಅಕ್ಟೋಬರ್‌-ಡಿಸೆಂಬರ್‌ ವೇಳೆಗೆ ಮೂರನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯಲ್ಲಿ ಹಿಂಜರಿಕೆ ಉಂಟಾಗುವ ಸಾಧ್ಯತೆಯಿದೆ.’ ಹೀಗೆಂದು ಔದ್ಯೋಗಿಕ ದತ್ತಾಂಶಗಳ ವಿಶ್ಲೇಷಣಾ ಸಂಸ್ಥೆ ಡನ್‌ ಬ್ರಾಡ್‌ಸ್ಟ್ರೀಟ್‌ ಭವಿಷ್ಯ ನುಡಿದಿದೆ. ಆದರೆ, ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರು.ಗಳ ನಿರೀಕ್ಷೆಗೂ ಮೀರಿದ ಪ್ಯಾಕೇಜ್‌ ಸರಿಯಾಗಿ ಅನುಷ್ಠಾನವಾದರೆ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದೂ ಅಭಿಪ್ರಾಯಪಟ್ಟಿದೆ.

‘ಲಾಕ್‌ಡೌನ್‌ ತೆರವಿಗೆ ತೆಗೆದುಕೊಳ್ಳುವ ಸಮಯ, ಆರ್ಥಿಕ ಪ್ಯಾಕೇಜನ್ನು ಎಷ್ಟುದಕ್ಷವಾಗಿ ಅನುಷ್ಠಾನಗೊಳಿಸಲಾಗುತ್ತದೆ ಹಾಗೂ ಪ್ಯಾಕೇಜ್‌ನಲ್ಲಿನ ಘೋಷಣೆಗಳನ್ನು ಜಾರಿಗೊಳಿಸಲು ಎಷ್ಟುಸಮಯ ತೆಗೆದುಕೊಳ್ಳಲಾಗುತ್ತದೆ ಎಂಬ ಮೂರು ಅಂಶಗಳ ಮೇಲೆ ಈ ಪ್ಯಾಕೇಜ್‌ ದೇಶದ ಆರ್ಥಿಕತೆಯ ಮೇಲೆ ಎಷ್ಟುಪರಿಣಾಮ ಬೀರುತ್ತದೆ ಎಂಬುದು ನಿಂತಿದೆ. ಆರ್ಥಿಕ ಪ್ಯಾಕೇಜ್‌ನಿಂದಾಗಿ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳುವ ಸಾಧ್ಯತೆಗಳಿವೆ’ ಎಂದು ಡನ್‌ ಬ್ರಾಡ್‌ಸ್ಟ್ರೀಟ್‌ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಅರುಣ್‌ ಸಿಂಗ್‌ ಹೇಳಿದ್ದಾರೆ.

ದೇಶದ ರಾಜಕೀಯವನ್ನೇ ಬದಲಾಯಿಸುತ್ತಾ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆ!

ಆರ್ಥಿಕ ಪ್ಯಾಕೇಜ್‌ನಲ್ಲಿ ಜನರಿಗೆ ನೇರವಾಗಿ ನಗದು ನೀಡದೆ ಇರುವುದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಬೇಗ ಹೆಚ್ಚುವುದಿಲ್ಲ. ಜನರ ಆದಾಯ ಕುಸಿತವಾಗಿರುವುದು, ಉದ್ಯೋಗ ನಷ್ಟವಾಗಿರುವುದು ಹಾಗೂ ಜನರು ಖರ್ಚು ಮಾಡಲು ಹಿಂದೆ-ಮುಂದೆ ನೋಡುತ್ತಿರುವುದರಿಂದ ಕೊರೋನಾ ಹರಡುವುದು ನಿಂತಮೇಲೂ ಗ್ರಾಹಕ ವಸ್ತುಗಳಿಗೆ ಬೇಡಿಕೆ ಹೆಚ್ಚುವುದು ನಿಧಾನವಾಗಲಿದೆ. ಸಾಲ ಮತ್ತು ಸುಸ್ತಿಸಾಲದ ಪ್ರಮಾಣ ಹೆಚ್ಚುವುದರಿಂದ ಬ್ಯಾಂಕುಗಳ ಮೇಲೆ ಒತ್ತಡ ಅಧಿಕವಾಗಲಿದೆ ಎಂದು ತಿಳಿಸಿದ್ದಾರೆ.

ಕಾರಣ ಏನು?

ಆದಾಯ ಕುಸಿತ, ಉದ್ಯೋಗ ನಷ್ಟಮತ್ತು ಖರ್ಚು ಮಾಡಲು ಜನರು ಹಿಂದೆ-ಮುಂದೆ ನೋಡುತ್ತಿರುವುದರಿಂದ ಆರ್ಥಿಕ ಹಿಂಜರಿತ ಸಾಧ್ಯತೆ

ನಿಜಕ್ಕೂ 20 ಲಕ್ಷ ಕೋಟಿ ಇದೆಯಾ? ಮತ್ತ್ಯಾಕೆ ಬಿಜೆಪಿ ಸಂಸದರಿಗೆ ಅಸಮಾಧಾನ!

ಆಶಾವಾದ ಏನು?

ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರು.ಗಳ ಪ್ಯಾಕೇಜ್‌ ಸರಿಯಾಗಿ ಅನುಷ್ಠಾನವಾದರೆ ಆರ್ಥಿಕತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ