ಮುಂಬೈ(ಏ.13): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಅತ್ಯಂತ ಕಠಿಣ ನಿರ್ಧಾರಕ್ಕೆ ಮಹಾರಾಷ್ಟ್ರ ನಿರ್ಧರಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊರೋನಾ ನಿಯಂತ್ರಣಕ್ಕೆ ತಜ್ಞರ ಸಲಹೆ ಆಧರಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ಹೊಸ ನಿಮಯಗಳು ಎಪ್ರಿಲ್ 14ರ ರಾತ್ರಿ 8 ಗಂಟೆಯಿಂದ ಮೇ.01 ಬೆಳಗ್ಗೆ 7 ಗಂಟೆ ವರೆಗೆ ಹೊಸ ನಿಯಮ ಜಾರಿಯಲ್ಲಿದೆ. ಇದು ಲಾಕ್‌ಡೌನ್ ಅಲ್ಲ ಎಂದು ಠಾಕ್ರೆ ಹೇಳಿದ್ದಾರೆ. ಆದರೆ ಲಾಕ್‌ಡೌನ್‌ನ ಬಹುತೇಕ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಸಭೆ ಮುಕ್ತಾಯ: ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನ ಕೊಟ್ಟ ಸಿಎಂ!.

ನಾಳೆ ರಾತ್ರಿಯಿಂದ ಮೇ.1ರ ವರೆಗೆ ಮಹಾರಾಷ್ಟ್ರದಲ್ಲಿ 144 ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ಠಾಕ್ರೆ ಹೇಳಿದ್ದಾರೆ.  ಎಲ್ಲಾ ದಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು,  ಶಾಲೆ-ಕಾಲೇಜು, ಕೋಚಿಂಗ್ ಸೆಂಟರ್, ತರಗತಿಗಳು, ಪುರುಷ ಹಾಗೂ ಮಹಿಳೆಯರ ಪಾರ್ಲರ್ ಶಾಪ್, ಸಲೂನ್ಸ್, ನಾಳೆಯಿಂದ ಬಂದ್ ಆಗಲಿದೆ. 

ಸಿನಿಮಾ ಥಿಯೇಟರ್, ಕಾರ್ಯಕ್ರಮ, ಅಮ್ಯೂಸ್‌ಮೆಂಟ್, ಜಿಮ್, ಕ್ರೀಡಾ ಸಂಕೀರ್ಣ, ಚಲನ ಚಿತ್ರೀಕರಣ, ಧಾರವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಅಗತ್ಯ ಸೇವೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಮುಚ್ಚಲಿದೆ.

ಅಗತ್ಯ ಸೇವೆಗಳಿಗೆ ಬಸ್ ಹಾಗೂ ರೈಲು ಸೇವೆಗಳು ಕಾರ್ಯನಿರ್ವಹಿಸಲಿದೆ.  ಪೆಟ್ರೋಲ್ ಪಂಪ್ , ನಿರ್ಮಾಣ ಕಾರ್ಯ ಮುಂದುರಿಯಲಿದೆ. ಆದರೆ ಹೊಟೆಲ್, ರೆಸ್ಟೋರೆಂಟ್ ಮುಚ್ಚಲಿದೆ. ಹೋಮ್ ಡೆಲಿವರಿ ಲಭ್ಯವಿದೆ.

ಬಡವರಿಗೆ, ಕೂಲಿ ಕಾರ್ಮಿಕರಿಗೆ ಮುಂದಿನ ಒಂದು ತಿಂಗಳ ವರೆಗೆ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿ ಉಚಿತವಾಗಿ ನೀಡಲಿದೆ.