ನವದೆಹಲಿ(ಏ. 27) ಕೊರೋನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ದೆಹಲಿ ಸರ್ಕಾರದ ಮೇಲೆ  ನ್ಯಾಯಾಲಯ ಚಾಟಿ ಬೀಸಿದೆ.  ನಿಮ್ಮ ಮೇಲೆ ಇಟ್ಟ ವಿಶ್ವಾಸವೇ ಅಲುಗಾಡಿಹೋಗಿದೆ ಎಂದಿದೆ.

ನಿಮ್ಮ ಬಳಿ ಈ ಪರಿಸ್ಥಿತಿ ನಿಭಾಯಿಸಲು ಅಸಾಧ್ಯ ಎಂದರೆ ಹೇಳಿ ಕೇಂದ್ರ ಸರ್ಕಾರಕ್ಕೆ ಅಧಿಕಾರವಹಿಸಿಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.  ಕಚೇರಿಯಲ್ಲಿ ಕುಳಿತು ಸೂಚನೆ ಹೊರಡಿಸುತ್ತಿದ್ದರೆ ಕೊರೋನಾ ಪರಿಸ್ಥಿತಿ ಸುಧಾರಣೆ ಆಗಲ್ಲ ಎಂದು ತಿಳಿಸಿದೆ.

ಕರ್ನಾಟಕ ಸರ್ಕಾರ ಲೆಕ್ಕ ಮುಚ್ಚಿಡುತ್ತಿದೆಯಾ?

ಆಕ್ಸಿಜನ್ ಮತ್ತು ತುರ್ತು ವಸ್ತುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಜನರ ಹಿತಾಸಕ್ತಿಯನ್ನು ಕೇಳುವವರು ಯಾರು ಇಲ್ಲವಾಗಿದೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಸರ್ಕಾರಕ್ಕೆ ಪ್ರಶ್ನೆ  ಮಾಡಿದೆ.

ಒಂದು ಕಡೆ ಆಮ್ಲಜನಕ ಲಭ್ಯತೆ ಇಲ್ಲ ಎಂದು ಹೇಳುತ್ತೀರಿ. ಇನ್ನೊಂದು ಕಡೆ ಕಾಳಸಂತೆಯಲ್ಲಿ ಮಾರಾಟ ಮಾಡುವ ವರದಿಗಳು ಬರುತ್ತಿವೆ. ಹಾಗಾದರೆ ಸರ್ಕಾರ  ಇಂಥವರ ವಿರುದ್ಧ ಯಾವ ಕ್ರಮ  ತೆಗೆದುಕೊಂಡಿದೆ ಎಂದು  ಪ್ರಶ್ನೆ ಮಾಡಿದೆ.