ನವದೆಹಲಿ(ಮೇ.15): ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಬಗ್ಗೆ ಬೆಚ್ಚಿ ಬೀಳಿಸುವ ವರದಿಯೊಂದನ್ನು ಯುನಿಸೆಫ್ ಪ್ರಕಟಿಸಿದ್ದು, ಮುಂದಿನ ಆರು ತಿಂಗಳ ಅವಧಿಯಲ್ಲಿ ವಿಶ್ವದಾದ್ಯಂತ 1.2 ಮಿಲಿಯನ್(1.2 ಕೋಟಿ) ಮಕ್ಕಳು ಕೋವಿಡ್ 19ಗೆ ಬಲಿಯಾಗಲಿದ್ದಾರೆ ಎಂದು ಅಂದಾಜಿಸಿದೆ.

ಯುನಿಸೆಫ್ ವರದಿಯ ಪ್ರಕಾರ ಮುಂದಿನ ಆರು ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 6 ಸಾವಿರ ಮಕ್ಕಳು ಕೊರೋನಾದಿಂದಾಗಿ ಮರಣ ಹೊಂದಲಿದ್ದಾರೆ. ಕೋವಿಡ್ 19 ವೈರಸ್ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ ಎಂದು ಎಚ್ಚರಿಸಿದೆ. ಇನ್ನು ಭಾರತದಲ್ಲಿ ಮೂರು ಲಕ್ಷ ಮಕ್ಕಳು ಕೊರೋನಾದಿಂದ ಕೊನೆಯುಸಿರೆಳೆಯಲಿದ್ದಾರೆ ಎಂದು ಯುನಿಸೆಫ್ ಅಂದಾಜಿಸಿದೆ. ದಕ್ಷಿಣ ಏಷ್ಯಾದಲ್ಲೇ ಪ್ರತಿದಿನ ಅಂದಾಜು 2,400 ಮಕ್ಕಳು ಸಾವಿಗೀಡಾಗಲಿದ್ದಾರೆ ಎನ್ನಲಾಗಿದೆ.

ಜಾನ್ಸ್ ಹಾಫ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಶೋಧಕರು ನಡೆಸಿದ ಸಂಶೋಧನೆಯ ಅನ್ವಯ ಈ ಮೇಲಿನ ಅಂಕಿ-ಅಂಶಗಳನ್ನು ಲೆಕ್ಕಾಹಾಕಲಾಗಿದೆ. ಇದರ ಅನ್ವಯ ಭಾರತದಲ್ಲಿ 3 ಲಕ್ಷ ಮಕ್ಕಳು ಕೊರೋನಾಗೆ ಬಲಿಯಾಗಲಿದ್ದಾರೆ, ಇನ್ನುಳಿದಂತೆ ಪಾಕಿಸ್ತಾನದಲ್ಲಿ 95,000, ಬಾಂಗ್ಲಾದೇಶದಲ್ಲಿ 28,000, ಆಪ್ಘಾನಿಸ್ತಾನದಲ್ಲಿ 13,000 ಹಾಗೂ ನೇಪಾಳದಲ್ಲಿ 4 ಸಾವಿರ ಮಕ್ಕಳು ಕೊರೋನಾಗೆ ಬಲಿಯಾಗಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಕೊರೊನಾ ಯುದ್ಧವೇ ಮೋದಿ ಮುಂದಿರುವ ಅಗ್ನಿಪರೀಕ್ಷೆ..!

ಮಕ್ಕಳ ಜನನ, ಮಕ್ಕಳ ಆರೋಗ್ಯ, ಪೌಷ್ಠಿಕಾಂಶ ಸೇವೆಗಳು ಆ ಕುಟುಂಬಕ್ಕೆ ಕೋವಿಡ್ 19 ಸಂದರ್ಭದಲ್ಲೂ ದೊರೆಯಲಿದೆ. ಆದಾಗಿಯೂ ಮುಂಬರುವ ದಿನಗಳಲ್ಲಿ ನಿರಂತರ ಮಕ್ಕಳ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಾಗ ಸಾವಿರಾರು ಮಕ್ಕಳು ಮರಣ ಹೊಂದಲಿದ್ದಾರೆ ಎಂದು ದಕ್ಷಿಣ ಏಷ್ಯಾ ಯುನಿಸೆಫ್ ಪ್ರಾದೇಶಿಕ ಆರೋಗ್ಯ ಸಲಹೆಗಾರ ಪೌಲ್ ರಟ್ಟರ್ಸ್ ಹೇಳಿದ್ದಾರೆ.