ಮುಂಬೈ (ಏ.02): ಮಹಾರಾಷ್ಟ್ರ ರಾಜಧಾನಿ, ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೋನಾ ಮಹಾಮಾರಿ ಆರ್ಭಟ ತೀವ್ರವಾಗಿದ್ದು, ಗುರುವಾರ ಒಂದೇ ದಿನ 24 ತಾಸುಗಳ ಅವಧಿಯಲ್ಲಿ ದಾಖಲೆಯ ಬರೋಬ್ಬರಿ 8,646 ಕೊರೋನಾ ಪ್ರಕರಣಗಳು ದೃಢವಾಗಿವೆ. ಈ ನಡುವೆ, ಮಹಾರಾಷ್ಟ್ರದಲ್ಲಿ 43183 ಪ್ರಕರಣಗಳು ಹಾಗೂ 249 ಸಾವು ದಾಖಲಾಗಿದೆ.

ಹೀಗಾಗಿ ಮುಂಬೈ ಹಾಗೂ ಮಹಾರಾಷ್ಟ್ರದ ಇತರೆಡೆ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್‌ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೊರೋನಾ ಕಾಟ: ಬೆಂಗ್ಳೂರಿನ ಆಸ್ಪತ್ರೆಗಳಲ್ಲಿ ಕೊರೋನಾ ಬೆಡ್‌ ಭರ್ತಿ..!

ಇದು ಕೊರೋನಾ ವೈರಸ್‌ ಬಿಕ್ಕಟ್ಟು ಆರಂಭವಾದ ನಂತರದಲ್ಲಿ ದಾಖಲೆಯಾದ ಸಾರ್ವಕಾಲಿಕ ಗರಿಷ್ಠ ಸಂಖ್ಯೆಯಾಗಿದೆ. ಇದೇ ವೇಳೆ ನಗರದಲ್ಲಿ ಗುರುವಾರ 18 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಮುಂಬೈನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4.14 ಲಕ್ಷಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 11,690ಕ್ಕೆ ಹೆಚ್ಚಿದೆ.