ಎರಡು ವರ್ಷದ ಹಿಂದೆ ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ತಮಿಳುನಾಡಿನ ಅಜ್ಜಿಯೊಬ್ಬರ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಷ್ಟೇ ಅಲ್ಲ ಈ ಅಜ್ಜಿಗೆ ನೆರವಾಗುವುದಾಗಿ ಹೇಳಿದ್ದರು. ಇದೀಗ ಇದೇ ಅಜ್ಜಿಗೆ ಆನಂದ್ ಮಹೀಂದ್ರ ಮನೆ ನಿರ್ಮಸಿಕೊಡುತ್ತಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ತಮಿಳುನಾಡು(ಎ.03): ಎರಡು ವರ್ಷದ ಹಿಂದೆ ತಮಿಳುನಾಡಿನ ಕಮಲಥಾಲ್ ಅನ್ನೋ ಅಜ್ಜಿ ವಿಡಿಯೋ ವೈರಲ್ ಆಗಿತ್ತು. ಕಾರಣ ಈ ಅಜ್ಜಿ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಬಡವರ ಹಸಿವು ನೀಗಿಸುತ್ತಿದ್ದರು. ಬೆಳಗಿನ ಜಾವ ಇಡ್ಡಿ ತಯಾರಿಸಿ ಕೇವಲ 1 ರೂಪಾಯಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಈ ವಿಡಿಯೋವನ್ನು ಆನಂದ್ ಮಹೀಂದ್ರ ಟ್ವಿಟರ್ ಮೂಲಕ ಹಂಚಿಕೊಂಡಿದ್ದರು. ಇದೇ ವೇಳೆ ಅಜ್ಜಿಗೆ ನೆರವಾಗೋದಾಗಿ ಹೇಳಿದ್ದರು. ಇದೀಗ ಅಜ್ಜಿಗೆ ಆನಂದ್ ಮಹೀಂದ್ರ ಮನೆ ಕಟ್ಟಿಕೊಡುತ್ತಿದ್ದಾರೆ.

Scroll to load tweet…

ಮಾತಿಗೆ ತಪ್ಪದ ಮಹೀಂದ್ರಾ: ನಟರಾಜನ್‌, ಶಾರ್ದೂಲ್‌ಗೆ ತಲುಪಿದ ಥಾರ್‌ ಜೀಪ್‌!

37 ವರ್ಷದಿಂದ ಕಷ್ಟಪಟ್ಟು ಇಡ್ಲಿ ಮಾರಾಟ ಮಾಡುತ್ತಿದ್ದ ಅಜ್ಜಿ ಕುರಿತ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರ, ಅಜ್ಜಿಯ ಬ್ಯುಸಿನೆಸ್‌ನಲ್ಲಿ ಬಂಡವಾಳ ಹೂಡವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ಅಜ್ಜಿಗೆ ಸುಲಭವಾಗಿ ಇಡ್ಲಿ ಮಾಡಲು ಎಲ್‌ಪಿಜಿ ಗ್ಯಾಸ್ ಹಾಗೂ ಸ್ಟೌವ್ ನೀಡುವುದಾಗಿ ಹೇಳಿದ್ದರು. ಅದರಂತೆ ಇದೀಗ ಆನಂದ್ ಮಹೀಂದ್ರ ನಡೆದುಕೊಂಡಿದ್ದಾರೆ.

Scroll to load tweet…

ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋ ಟ್ವೀಟ್ ಮಾಡಿ ಟೆಸ್ಲಾಗೆ ಚಾಲೆಂಜ್ ಹಾಕಿದ ಮಹೀಂದ್ರ!.

ಅಜ್ಜಿ ಇಡ್ಲಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಿಲು ಆನಂದ್ ಮಹೀಂದ್ರ ಬಂಡವಾಳ ಹೂಡಲು ಸಿದ್ದರಾಗಿದ್ದರು. ಆದರೆ ಅಜ್ಜಿಗೆ ಇರಲು ಒಂದು ಮನೆ ಬೇಕು. ಅದೇ ಅತ್ಯವಶ್ಯಕ ಎಂದಿದ್ದರು. ಹೀಗಾಗಿ ಆನಂದ್ ಮಹೀಂದ್ರ ಅಜ್ಜಿಗೆ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಅಜ್ಜಿಗೆ ಸ್ಥಳ ರಿಜಿಸ್ಟ್ರೇಶನ್ ಮಾಡಿಸಿಕೊಡಲಾಗಿದೆ. ಇದೀಗ ಮನೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಈ ಕುರಿತು ಆನಂದ್ ಮಹೀಂದ್ರ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

Scroll to load tweet…
Scroll to load tweet…
Scroll to load tweet…