ಲಕ್ನೋ (ಮಾ. 03): ಒಂದೆಡೆ ಕರ್ತವ್ಯ, ಇನ್ನೊಂದೆಡೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ. ಉತ್ತರ ಪ್ರದೇಶ ಮಹಿಳಾ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಒಬ್ಬರು ಈ ಎರಡೂ ಕರ್ತವ್ಯವನ್ನು ಒಟ್ಟೊಟ್ಟಿಗೆ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.

ಕರ್ತವ್ಯ ನಿಷ್ಠೆ: ಅಪ್ಪ ಮೃತಪಟ್ಟರೂ ಬಜೆಟ್ ತಯಾರಿಸಿದ ಅಧಿಕಾರಿಗೆ ಸಲಾಂ

ಗೌತಮ ಬುದ್ಧ ನಗರಕ್ಕೆ 2 ದಿನಗಳ ಭೇಟಿಗೆಂದು ಬಂದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾರ್ಯಕ್ರಮದ ಭದ್ರತೆಗೆ ಪ್ರೀತಿ ರಾಣಿ (20) ಎನ್ನುವವರನ್ನು ನಿಯೋಜಿಸಲಾಗಿತ್ತು. ಆದರೆ ಅಂದೇ ಅವರ ಪತಿಗೆ ಪರೀಕ್ಷೆ ಇದ್ದ ಕಾರಣ ಮಗನನ್ನು ಮನೆಯಲ್ಲಿ ಬಿಡಲಾಗದೇ ಕಂಕುಳಕ್ಕೆ ಎತ್ತಿಕೊಂಡು ಬಂದು ಕರ್ತವ್ಯ ನಿರ್ವಹಿಸಿದ್ದಾರೆ. ದಾದ್ರಿ ಪೊಲೀಸ್‌ ಠಾಣೆಯ ಸಿಬ್ಬಂದಿಯಾಗಿರುವ ಪ್ರೀತಿ ಅವರ ವೃತ್ತಿಪರತೆ ಶ್ಲಾಘನೆಗೆ ಪಾತ್ರವಾಗಿದೆ.