ಕೋಲ್ಕತಾ(ಏ.13): ತುಂಟ ಹುಡುಗರು ಮತ್ತೆ ಹಿಂಸಾಚಾರ ಮಾಡಿದರೆ ಮತ್ತಷ್ಟುಕೂಚ್‌ ಬೆಹಾರ್‌ನಂಥ ಹತ್ಯೆಗಳು ಪುನರಾವರ್ತನೆಯಾಗಲಿವೆ ಎಂಬ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್‌ ಘೋಷ್‌ರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ, ಕೂಚ್‌ ಬೆಹಾರ್‌ನಲ್ಲಿ ನಾಲ್ವರಿಗೆ ಅಷ್ಟೇ ಅಲ್ಲದೆ 8 ಮಂದಿಗೆ ಗುಂಡು ಹೊಡೆದು ಉರುಳಿಸಬೇಕಿತ್ತು ಎಂದು ಬಿಜೆಪಿಯ ರಾಹುಲ್‌ ಸಿನ್ಹಾ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ರಾರ‍ಯಲಿಯೊಂದರಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ರಾಹುಲ್‌ ಸಿನ್ಹಾ, ‘ಮಮತಾ ಬ್ಯಾನರ್ಜಿ ಅವರು ಜನರು ಮತದಾನ ಮಾಡದಂತೆ ಅಡ್ಡಿಪಡಿಸುತ್ತಿರುವ ಗೂಂಡಾಗಳ ನಾಯಕಿ. ಕೂಚ್‌ ಬೆಹಾರ್‌ನ ಶೀತಲ್‌ಕುಚಿಯಲ್ಲಿ ಹಿಂಸಾಚಾರ ನಡೆಸಿದವರಿಗೆ ಸಿಆರ್‌ಪಿಎಫ್‌ ಸರಿಯಾದ ಉತ್ತರವನ್ನೇ ನೀಡಿದೆ. ಮುಂದಿನ ದಿನಗಳಲ್ಲೂ ಸಿಆರ್‌ಪಿಎಫ್‌ ಇಂಥ ಕಠಿಣ ಉತ್ತರವನ್ನೇ ನೀಡಲಿದೆ’ ಎಂದಿದ್ದಾರೆ.

ಆದರೆ ಕೂಚ್‌ ಬೆಹಾರ್‌ನಲ್ಲಿ ನಾಲ್ವರ ಬದಲಿಗೆ 8 ಮಂದಿಗೆ ಗುಂಡು ಹೊಡೆಯಬೇಕಿತ್ತು ಎಂದಿದ್ದಾರೆ.