ಪ್ರಯಾಗ್‌ರಾಜ್‌ (ನ.01): ಕೇವಲ ಮದುವೆಯ ಸಲುವಾಗಿ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪರಸ್ಪರ ಬೇರೆ ಧರ್ಮಕ್ಕೆ ಸೇರಿದ ಪ್ರಿಯಾಂಶಿ ಅಲಿಯಾಸ್‌ ಸಮ್ರೀನ್‌ ಹಾಗೂ ಆಕೆಯ ಪತಿಯು, ‘ನಮ್ಮ ವೈವಾಹಿಕ ಜೀವನದಲ್ಲಿ ವಧುವಿನ ತಂದೆ ಮಧ್ಯಪ್ರವೇಶಿಸುತ್ತಿದ್ದಾರೆ. ಹೀಗೆ ಮಾಡದಂತೆ ಅವರಿಗೆ ಸೂಚಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಅರ್ಜಿಯನ್ನು ವಜಾ ಮಾಡಿ ಈ ಮೇಲಿನಂತೆ ತೀರ್ಪು ಪ್ರಕಟಿಸಿದೆ.

‘ಅರ್ಜಿದಾರಳಾದ ಪ್ರಿಯಾಂಶಿ ಅಲಿಯಾಸ್‌ ಸಮ್ರೀನ್‌, 2020ರ ಜೂನ್‌ 29ರಂದು ಮತಾಂತರಗೊಂಡು, ಜುಲೈ 31ರಂದು ಮದುವೆಯಾಗಿದ್ದಳು. ಇದರಿಂದಾಗಿ ಇದು ಕೇವಲ ಮದುವೆಗಾಗಿ ನಡೆದ ಧಾರ್ಮಿಕ ಮತಾಂತರ ಎಂದು ಸಾಬೀತಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘2014ರಲ್ಲಿ ನೂರ್‌ ಜಹಾನ್‌ ಬೇಗಂ ಪ್ರಕರಣದಲ್ಲಿ ಇದೇ ಹೈಕೋರ್ಟು, ‘ಮದುವೆಗೋಸ್ಕರ ಧಾರ್ಮಿಕ ಮತಾಂ