Asianet Suvarna News Asianet Suvarna News

ನಮ್ಮ ಜಾಗದಲ್ಲಿ ನಾವು ಮನೆ ಕಟ್ಟೋದು ಸಹಜ: ಚೀನಾ ಉದ್ಧಟತನದ ಪ್ರತಿಕ್ರಿಯೆ!

ನಮ್ಮ ಜಾಗದಲ್ಲಿ ನಾವು ಮನೆ ಕಟ್ಟೋದು ಸಹಜ: ಚೀನಾ| ಅರುಣಾಚಲದಲ್ಲಿ ಹಳ್ಳಿ ನಿರ್ಮಾಣಕ್ಕೆ ಉದ್ಧಟತನದ ಪ್ರತಿಕ್ರಿಯೆ

Construction On Own Territory China On Arunachal Village Report pod
Author
Bangalore, First Published Jan 22, 2021, 12:04 PM IST

ಬೀಜಿಂಗ್(ಜ.22): ಹಿಮಾಲಯದ ತಪ್ಪಲಿನಲ್ಲಿರುವ ಅರುಣಾಚಲ ಪ್ರದೇಶದ ಉತ್ತರ ಭಾಗದಲ್ಲಿ ಭಾರತದ ಗಡಿಯನ್ನು ಆಕ್ರಮಿಸಿಕೊಂಡು 101 ಮನೆಗಳ ಹಳ್ಳಿ ನಿರ್ಮಾಣ ಮಾಡಿದ್ದ ಚೀನಾ ಅದಕ್ಕೀಗ ಉದ್ಧಟತನದ ಪ್ರತಿಕ್ರಿಯೆ ನೀಡಿದ್ದು, ‘ನಮ್ಮ ಜಾಗದಲ್ಲಿ ನಾವು ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳುವುದು ಸಹಜ’ ಎಂದು ಹೇಳಿದೆ.

ಭಾರತದ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ‘ಚೀನಾದಿಂದ ಅರುಣಾಚಲದಲ್ಲಿ ಹಳ್ಳಿ ನಿರ್ಮಾಣ’ ಎಂಬ ವರದಿಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯ, ‘ಜಂಗ್ನಾನ್‌ ಪ್ರದೇಶದ (ದಕ್ಷಿಣ ಟಿಬೆಟ್‌) ಕುರಿತು ಚೀನಾದ ನಿಲುವು ಸ್ಪಷ್ಟವಾಗಿದೆ. ನಾವು ಯಾವತ್ತೂ ಸೋಕಾಲ್ಡ್‌ ಅರುಣಾಚಲ ಪ್ರದೇಶಕ್ಕೆ ಮಾನ್ಯತೆ ನೀಡಿಲ್ಲ. ನಮ್ಮ ಗಡಿಯೊಳಗೆ ನಾವು ಕೈಗೊಳ್ಳುವ ನಿರ್ಮಾಣ ಚಟುವಟಿಕೆಗಳಿಗೆ ಯಾರೂ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ’ ಎಂದು ಹೇಳಿದೆ.

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಪರಿಗಣಿಸುತ್ತದೆ. ಆದರೆ, ಇದು ಭಾರತದ ಅವಿಭಾಜ್ಯ ಅಂಗವೆಂದು ಭಾರತ ಪ್ರತಿಪಾದಿಸುತ್ತದೆ. ಇತ್ತೀಚೆಗೆ ಅರುಣಾಚಲ ಪ್ರದೇಶದ ಗಡಿಯೊಳಗೆ 4.5 ಕಿ.ಮೀ. ದೂರದಲ್ಲಿ ಚೀನಾ ಹಳ್ಳಿಯೊಂದನ್ನು ನಿರ್ಮಾಣ ಮಾಡಿರುವುದಾಗಿ ಉಪಗ್ರಹ ಚಿತ್ರಗಳನ್ನು ಆಧರಿಸಿ ಎನ್‌ಡಿಟೀವಿ ವರದಿ ಮಾಡಿತ್ತು. ಈ ಬಗ್ಗೆ ಭಾರತ ಸರ್ಕಾರ ಸ್ಪಷ್ಟಪ್ರತಿಕ್ರಿಯೆ ನೀಡಿರಲಿಲ್ಲ. ಅದರ ಬೆನ್ನಲ್ಲೇ ಚೀನಾದ ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟನೆ ಹೊರಬಿದ್ದಿದೆ.

ಚೀನಾ ಹಳ್ಳಿ ನಿರ್ಮಾಣವಾದ ಪ್ರದೇಶವು 1959ರಿಂದಲೂ ಚೀನಾ ವಶದಲ್ಲೇ ಇದೆ.

Follow Us:
Download App:
  • android
  • ios