Asianet Suvarna News Asianet Suvarna News

Patna ಮದುವೆ ತಯಾರಿಯಾಗಿ ಕೂದಲು ಕಸಿ ಮಾಡಿಕೊಂಡ, ಮರುದಿನವೇ ಸಾವು ಕಂಡ!

ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದ ಘಟನೆ

ಖಾಸಗಿ ಕ್ಲಿನಿಕ್ ನಲ್ಲಿ ಕೂದಲು ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ

ಮರುದಿನವೇ ಹೃದಯಾಘಾತದಿಂದಾಗಿ ನಿಧನ

constable of bihar military police BMP died of a cardiac arrest just a day after he underwent hair transplant san
Author
Bengaluru, First Published Mar 12, 2022, 7:47 PM IST | Last Updated Mar 12, 2022, 8:42 PM IST

ಪಾಟ್ನಾ, ಬಿಹಾರ (ಮಾ. 12): ಕೂದಲು ಕಸಿಗೆ (hair transplant) ಒಳಗಾಗಿದ್ದಂತ ವ್ಯಕ್ತಿಯೊಬ್ಬರು, ಇದರ ಔಷಧದ ಪರಿಣಾಮದಿಂದ ಕಸಿ ಮಾಡಿಕೊಂಡ ಒಂದೇ ದಿನದಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರದ (Bihar) ಪಾಟ್ನಾದಿಂದ (Patna) ವರದಿಯಾಗಿದೆ. ಬಿಹಾರ ಮಿಲಿಟರಿ ಪೊಲೀಸ್ (BMP) ಪೇದೆಯೊಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಕೂದಲು ಕಸಿಗೆ ಒಳಗಾಗಿದ್ದರು. ಇದಾದ ಒಂದೇ ದಿನದಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವು ಕಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮೇ 11 ರಂದು ಈ ವ್ಯಕ್ತಿಯ ಮದುವೆ ನಿಶ್ಚಯವಾಗಿತ್ತು.

ಬುಧವಾರ ಬೋರಿಂಗ್ ಕೆನಾಲ್ ರಸ್ತೆಯಲ್ಲಿರುವ (, Boring Canal Road) ‘ಎನ್‌ಹಾನ್ಸ್’ ಎಂಬ ಖಾಸಗಿ ಕ್ಲಿನಿಕ್ ನಲ್ಲಿ ಪೊಲೀಸ್ ಕಾನ್ಸ್ ಟೇಬಲ್ (constable) ಕೂದಲು ಕಸಿಗೆ ಒಳಗಾಗಿದ್ದರು. ಮರುದಿನ ಔಷಧಿಯ ಪ್ರತಿಕ್ರಿಯೆಯಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆಯ ನಂತರ ಖಾಸಗಿ ಕ್ಲಿನಿಕ್‌ನ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಪರಾರಿಯಾಗಿದ್ದಾರೆ. ನಳಂದ (Nalanda) ಜಿಲ್ಲೆಯ ರಾಜ್‌ಗೀರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ ಬಿಘಾ ಗ್ರಾಮದವರಾದ ಮನೋರಂಜನ್ ಪಾಸ್ವಾನ್ (Manoranjan Paswan), ಗಯಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೂದಲು ಕಸಿ ಮಾಡಿಸಿಕೊಳ್ಳುವ ಸಲುವಾಗಿ ಪಾಟ್ನಾಗೆ ಆಗಮಿಸಿದ್ದರು. ಕೂದಲು ಕಸಿಗೆ ಒಳಗಾದ ಬಳಿಕ ಮನೆಗೆ ಹಿಂತಿರುಗಿದ್ದ ಪಾಸ್ವಾನ್, ಚರ್ಮದ ತುರಿಕೆಯ ಅನುಭವ ಹೇಳಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪಾಸ್ವಾನ್ ಅವರ ಸ್ನೇಹಿತ ಕಮಲ್ ಕುಮಾರ್ ( Kamal Kuma ), ಮರುದಿನ ಸವರನ್ನು ಕ್ಲಿನಿಕ್ ಗೆ ಕರೆದೊಯ್ದಿದ್ದರು. ಆದರೆ, ಪಾಸ್ವಾನ್ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ನಂತರ ಕ್ಲಿನಿಕ್ ಸಿಬ್ಬಂದಿ ಪಾಸ್ವಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

ಪೊಲೀಸರ ಪ್ರಕಾರ, ಪಾಸ್ವಾನ್ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್, ಕಾರ್ಡಿಯಾಕ್ ಸರ್ಜನ್, ಇಂಟರ್ನಲ್ ಮೆಡಿಸಿನ್ ಮತ್ತು ಐಸಿಯು ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಒಂದು ಗಂಟೆಯ ನಂತರ ಪಾಸ್ವಾನ್ ಸಾವು ಕಂಡಿದ್ದಾರೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ವೇಳೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

“ಕೂದಲು ಕಸಿ ಚಿಕಿತ್ಸೆಯಿಂದ ಉಂಟಾದ ತೊಂದರೆಗಳಿಂದಾಗಿ ಅವರು ಸಾವು ಕಂಡಿದ್ದಾರೆ. ಇದು ಕೂದಲು ಕಸಿ ಸಮಯದಲ್ಲಿ ನೀಡಲಾಗುವ ಔಷಧಿಗಳ ಪ್ರತಿಕ್ರಿಯೆಗೆ ಕಾರಣವಾಗುವ ಅಸಮರ್ಪಕ ಚಿಕಿತ್ಸೆಯ ಒಂದು ಪ್ರಕರಣವಾಗಿದೆ," ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

By Election ನಾಲ್ಕು ರಾಜ್ಯಗಳ ಲೋಕಸಭಾ, ವಿಧಾನಸಭಾ ಉಪಚುನಾವಣೆ ದಿನಾಂಕ ಘೋಷಿಸಿದ ಆಯೋಗ!
“ನಾವು ಅವರ ಒಳಾಂಗಗಳನ್ನು ಸಂರಕ್ಷಿಸಿದ್ದೇವೆ. ಒಳಾಂಗಗಳ ವರದಿಗಳು ಅವರ ಸಾವಿಗೆ ನಿಖರವಾದ ಕಾರಣವನ್ನು ನೀಡುತ್ತವೆ" ಎಂದು ಪಾಟಲೀಪುತ್ರ ಕಾಲೋನಿ ಪೊಲೀಸ್ ಠಾಣೆಯ ಎಸ್‌ಕೆ ಸಾಹಿ ( SK Sahi, SHO of Patliputra ) ಹೇಳಿದ್ದಾರೆ. ಚಿಕಿತ್ಸಾಲಯವು ಬೋರಿಂಗ್ ರಸ್ತೆಯಲ್ಲಿ ಇರುವುದರಿಂದ, ನಾವು ಅದನ್ನು ಎಸ್‌ಕೆ ಪುರಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದೇವೆ ಎಂದು ಅವರು ಹೇಳಿದರು.

Border Talks ಲಡಾಖ್ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಲು ಭಾರತ ಚೀನಾ ಒಪ್ಪಿಗೆ!
“ಮೃತರ ಕುಟುಂಬ ಸದಸ್ಯರು ಲಿಖಿತ ದೂರು ನೀಡಿದ್ದಾರೆ ಮತ್ತು ನಾವು ಈ ಪ್ರಕರಣವನ್ನು ತನಿಖೆ ಮಾಡಲಿದ್ದೇವೆ' ಎಂದು ಎಸ್ ಕೆ ಪುರಿ ಪೊಲೀಸ್ ಠಾಣೆಯ ಎಸ್ಎಚ್ಓ ಸತೀಶ್ ಸಿಂಗ್ ( Satish Singh, SHO of SK Puri police station ) ಹೇಳಿದ್ದಾರೆ.  ಮೂಲಗಳ ಪ್ರಕಾರ, ಕ್ಲಿನಿಕ್‌ನ ವೈದ್ಯಕೀಯ ಸಿಬ್ಬಂದಿ ಪಾಸ್ವಾನ್‌ನಿಂದ ಪ್ರಿಸ್ಕ್ರಿಪ್ಷನ್‌ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios