ಕಾಂಗ್ರೆಸ್ಸಿಗರಿಗೆ ಸರಳ ಟೆಕ್ನಾಲಾಜಿಯ ಬಗ್ಗೆಯೂ ಗೊತ್ತಿಲ್ಲವೇ? ಸದನದ ಮೈಕ್ ಆಟೋಮೇಟಿಕ್: ರಾಜ್ಯಸಭಾಧ್ಯಕ್ಷ

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದವರು ಮಾತನಾಡುವಾಗ ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾಧ್ಯಕ್ಷರು ಮೈಕ್ ಆಫ್ ಮಾಡಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನ್‌ಕರ್ ತಿರುಗೇಟು ನೀಡಿದ್ದಾರೆ. 

Congressmen dont even know about simple technology, House mic works automatic Rajya Sabha chairman jagdeep Dhankar akb

ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದವರು ಮಾತನಾಡುವಾಗ ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾಧ್ಯಕ್ಷರು ಮೈಕ್ ಆಫ್ ಮಾಡಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನ್‌ಕರ್ ತಿರುಗೇಟು ನೀಡಿದ್ದಾರೆ. 

ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಮೈಕ್ ಆಫ್ ಮಾಡಿದರು ಎಂಬ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಧನಕರ್, 'ಮೈಕ್ ಬಂದ್ ಕರ್‌ದಿಯಾ' ಅಂದ್ರೆ ನಿಮ್ಮ ಮಾತಿನ ಅರ್ಥವೇನು?  ಇದು ಆಟೋಮೇಟಿಕ್, ನೀವು ಸರಳವಾದ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ, ಮೈಕ್ ಸ್ಚಿಚ್‌ ಆಫ್ ಮಾಡುವುದಕ್ಕೆ ಯಾರಿಗೂ ಹಕ್ಕಿಲ್ಲ, ಮಿಸ್ಟರ್ ಖರ್ಗೆಯವರೇ ಇದು ನಿಮಗೆ ಕೂಡ ತಿಳಿದಿದೆ ಇದು ಯಾಂತ್ರಿಕವಾಗಿ ನಿಯಂತ್ರಿಸಲ್ಪಡುತ್ತದೆ ಎಂದು ವಿಪಕ್ಷಗಳಿಗೆ ರಾಜ್ಯಸಭಾಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ಧನಕರ್ ತಿರುಗೇಟು ನೀಡಿದರು. 

ಅಗ್ನಿವೀರರು ಯೂಸ್ ಅಂಡ್‌ ಥ್ರೋ ಕಾರ್ಮಿಕರು: ಒಬ್ಬ ಯೋಧನಿಗೆ ಪಿಂಚಣಿ, ಇನ್ನೊಬ್ಬನಿಗೆ ಇಲ್ಲ: ರಾಹುಲ್‌

ಸಂಸದರ ಮೈಕ್ ನಿಯಂತ್ರಣ ನನ್ನ ಕೈಲಿಲ್ಲ: ಸ್ಪೀಕರ್ ಓಂ ಬಿರ್ಲಾ

ಹಾಗೆಯೇ ಲೋಕಸಭೆಯ ಸಭಾಧ್ಯಕ್ಷರ ಬಳಿ ಸದಸ್ಯರ ಮೈಕ್ ನಿಯಂತ್ರಿಸುವ ಯಾವುದೇ ಸ್ವಿಚ್ ಇಲ್ಲ ಎಂದು ಸಭಾಧ್ಯಕ್ಷ ಓಂ ಬಿರ್ಲಾ ಕೂಡ ಮೈಕ್ ಆಫ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮಾತನಾಡುವಾಗ ತಮ್ಮ ಮೈಕನ್ನು ಆಫ್‌ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ ವಾರ ಆರೋಪಿಸಿದ್ದರು. ಸೋಮವಾರವೂ ಇದೇ ಆರೋಪ ಮಾಡಿದರು.

ಇದಕ್ಕೆ ಉತ್ತರಿಸಿದ ಓಂ ಬಿರ್ಲಾ, ನಾವು ಕೇವಲ ರೂಲಿಂಗ್‌ ಹಾಗೂ ನಿರ್ದೇಶನಗಳನ್ನು ನೀಡುತ್ತೇವೆ. ಯಾರಿಗೆ ಮಾತನಾಡಲು ಅನುಮತಿ ಇರುತ್ತದೋ ಅವರ ಮೈಕ್‌ ಆನ್‌ ಮಾಡುವಂತೆ ನಾವು ಸೂಚಿಸಿರುತ್ತೇವೆ. ಕುಳಿತವರ ಮೈಕ್‌ ಆಗ ಆಫ್‌ ಆಗಿರುತ್ತವೆ. ಆದರೆ ಪೀಠದ ಬಳಿ ಮೈಕ್‌ ಆಫ್ ಮಾಡುವ ರಿಮೋಟ್‌ ಕಂಟ್ರೋಲ್‌ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಪಕ್ಷ ನಾಯಕ ಸ್ಥಾನಕ್ಕೇ ರಾಹುಲ್‌ ಗಾಂಧಿ ಅಪಮಾನ: ಕೇಂದ್ರ ಸರ್ಕಾರ

Latest Videos
Follow Us:
Download App:
  • android
  • ios