ಕಾಂಗ್ರೆಸ್ ಯೂಟ್ಯೂಬ್ ಚಾನೆಲ್ ಡಿಲೀಟ್: ತಾಂತ್ರಿಕ ತೊಂದರೆ ಅಥವಾ ಕುತಂತ್ರದ ಬಗ್ಗೆ ತನಿಖೆ..!
ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿದೆ. ಈ ಬಗ್ಗೆ ಪಕ್ಷದ ಸಾಮಾಜಿಕ ಮಾಧ್ಯಮ ಮಾಹಿತಿ ನೀಡಿದೆ.
ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿದೆ. ಈ ಬಗ್ಗೆ ಬುಧವಾರ ಸ್ವತ: ಕಾಂಗ್ರೆಸ್ ಮಾಹಿತಿ ನೀಡಿದೆ. ತನ್ನ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿದೆ. ಹಾಗೂ ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಇದು ತಾಂತ್ರಿಕ ಸಮಸ್ಯೆಯಿಂದ ಉಂಟಾಗಿದೆಯೋ ಅಥವಾ ಇದರ ಹಿಂದೆ ಯಾವುದಾದರೂ ಕುತಂತ್ರವಿದೆಯೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕೈ ಪಕ್ಷ ಮಾಹಿತಿ ನೀಡಿದೆ. ಇಂದು ಸೋನಿಯಾ ಗಾಂಧಿ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳುತ್ತಿದ್ದು, ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸಹ ಹೋಗುತ್ತಿದ್ದಾರೆ ಎಂಬ ವರದಿಗಳಿದ್ದವು. ಅದೇ ದಿನ, ಪಕ್ಷದ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿರುವ ಮಾಹಿತಿ ಬಂದಿದೆ.
"ನಮ್ಮ ಯೂಟ್ಯೂಬ್ ಚಾನೆಲ್ - 'ಇಂಡಿಯನ್ ನ್ಯಾಷನಲ್ ಕಾಂಗ್ರೆಸ್' ಅನ್ನು ಡಿಲೀಟ್ ಮಾಡಲಾಗಿದೆ. ನಾವು ಅದನ್ನು ಸರಿಪಡಿಸುತ್ತಿದ್ದೇವೆ ಮತ್ತು Google/YouTube ತಂಡಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪಕ್ಷವು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ. "ಇದಕ್ಕೆ ಕಾರಣವೇನು ಎಂದು ನಾವು ತನಿಖೆ ನಡೆಸುತ್ತಿದ್ದೇವೆ - ತಾಂತ್ರಿಕ ದೋಷ ಅಥವಾ ಕುತಂತ್ರವೋ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಹಿಂತಿರುಗುವ ಭರವಸೆ ಇದೆ. ಟೀಮ್ ಐಎನ್‌ಸಿ ಸೋಷಿಯಲ್ ಮೀಡಿಯಾ” ಎಂದು ಕಾಂಗ್ರೆಸ್ ಪಕ್ಷ ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿದೆ.
ಆರೋಗ್ಯ ತಪಾಸಣೆಗಾಗಿ ಲಂಡನ್‌ಗೆ ತೆರಳಲಿರುವ ಸೋನಿಯಾ ಗಾಂಧಿ: ರಾಹುಲ್, ಪ್ರಿಯಾಂಕಾ ಸಾಥ್
ಸದ್ಯದಲ್ಲೇ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ, ಚುನಾವಣಾ ದಿನಾಂಕ ನಿಗದಿಯಾಗಲಿದೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಲ್ಲದೆ, ಸೆಪ್ಟೆಂಬರ್ 7 ರಂದು ಕಾಂಗ್ರೆಸ್‌ನ ಭಾರತ್‌ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ಆರಂಭವಾಗಲಿದ್ದು, ಈ ಯಾತ್ರೆ ಆರಂಭವಾಗುವ ಕೆಲ ದಿನಗಳ ಮುನ್ನ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿರುವುದು ಪಕ್ಷಕ್ಕೆ ಹಿನ್ನೆಡೆಯಾಗಬಹುದು. ಕಾಂಗ್ರೆಸ್ ಜೋಡೋ ಯಾತ್ರೆ ಬಗ್ಗೆ ಯೂಟ್ಯೂಬ್‌ನಲ್ಲಿ ಹೆಚ್ಚು ವಿಡಿಯೋಗಳನ್ನು ಹಾಗೂ ಲೈವ್ ವಿಡಿಯೋ ಅಪ್ಲೋಡ್ ಮಾಡುವ ಹುಮ್ಮಸ್ಸಿನಲ್ಲಿದ್ದ ಪಕ್ಷಕ್ಕೆ ಇದು ಮುಜುಗರವೂ ಆಗಬಹುದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಬಗ್ಗೆ ಹಲವು ದಿನಗಳಿಂದ ಹೇಳುತ್ತಿದ್ದಾರೆ ಹಾಗೂ ಪಕ್ಷದ ವತಿಯಿಂದಲೂ ಈ ಯಾತ್ರೆಗೆ ಸಾಕಷ್ಟು ತಯಾರಿ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ದೇಶದ 3,500 ಕಿ.ಮೀಗಳ ಪಾದಯಾತ್ರೆ 148 ದಿನಗಳ ಕಾಲ ನಡೆಯಲಿದೆ.
ಕಾಂಗ್ರೆಸ್ ಮುಂದಿನ ಅಧ್ಯಕ್ಷರಾಗ್ತಾರಾ ಅಶೋಕ್ ಗೆಹ್ಲೋಟ್..? ಕೈ ಪಕ್ಷದಲ್ಲಿ ಗುಸುಗುಸು..!