* 2024ರ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸ್ಪರ್ಧೆ* ಕನ್ಹಯ್ಯಕುಮಾರ್‌ ಮೇಲೆ ಬಿಹಾರ ಕಾಂಗ್ರೆಸ್‌ ಭರವಸೆ* ಬಿಹಾರ: ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿ ಖತಂ

ಪಟನಾ(ಅ.23): ಅಕ್ಟೋಬರ್‌ 30ರಂದು ನಡೆಯಲಿರುವ ಬೈಎಲೆಕ್ಷನ್‌ನಿಂದಾಗಿ(By Election) ಬಿಹಾರದಲ್ಲಿ ಕಾಂಗ್ರೆಸ್‌-ಆರ್‌ಜೆಡಿ(Congress-RJD) ಮೈತ್ರಿ ಮುರಿದುಬಿದ್ದಿದೆ. ಹೀಗಾಗಿ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ(Bihar) ನಲವತ್ತೂ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌(Congress) ನಿರ್ಧರಿಸಿದೆ.

ಕಾಂಗ್ರೆಸ್‌ ಭದ್ರಕೋಟೆಯಾದ ಕುಶೇಶ್ವರ ಕ್ಷೇತ್ರದ ಉಪಚುನಾವಣೆಯಲ್ಲಿ ಆರ್‌ಜೆಡಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಬೈಎಲೆಕ್ಷನ್‌ನಿಂದಾಗಿ ಮೈತ್ರಿ ಮುರಿದುಬಿದ್ದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಹಾರ(Bihar) ಕಾಂಗ್ರೆಸ್‌ ಉಸ್ತುವಾರಿ ಭಕ್ತಚರಣ್‌ ದಾಸ್‌, ‘ಆರ್‌ಜೆಡಿ ನಮ್ಮನ್ನು ಕಡೆಗಣಿಸುತ್ತಿದೆ. ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ(Loksabha Elections) 40 ಕ್ಷೇತ್ರಗಳಲ್ಲೂ ನಾವು ಸ್ಪರ್ಧಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾಗಿರುವ ಜೆಎನ್‌ಯು(JNU) ಮಾಜಿ ವಿದ್ಯಾರ್ಥಿ ಕನ್ಹಯ್ಯಕುಮಾರ್‌(kanhaiah Kumar) ಮೇಲೆ ಭಾರಿ ಭರವಸೆ ಇರಿಸಿದೆ ಎಂದೂ ಹೇಳಿದ್ದಾರೆ.

ಉಪಚುನಾವಣೆ ಸ್ಪರ್ಧೆ ಬಗ್ಗೆ ಮಾತನಡಿದ್ದ ಆರ್‌ಜೆಡಿ ನಾಯಕ ತೇಜಸ್ವಿಯಾದವ್‌, ಎರಡೂ ಪಕ್ಷಗಳು ಸೌಹಾರ್ಧಯುತವಾಗಿ ಸ್ಪರ್ಧಿಸುತ್ತಿವೆ ಎಂದು ಹೇಳಿದ್ದರು. ಈ ಬಗ್ಗೆ ತಿರುಗೇಟು ಕೊಟ್ಟಚರಣ್‌ದಾಸ್‌ ಚುನಾವಣೆಯಲ್ಲಿ ಸ್ಪರ್ಧಿಸುವದೇ ಗೆಲ್ಲುವುದಕ್ಕಾಗಿ, ಆಟ ಆಡುವುದಕ್ಕಲ್ಲ. ತೇಜಸ್ವಿ ಯಾದವ್‌ಗೆ ನಮ್ಮ ಬೆಂಬಲ ಬೇಕಿಲ್ಲದಿದ್ದರೆ ಹೇಳಿಬಿಡಲಿ, ವಿಧಾನಸಭೆಯಲ್ಲಿ ನಮ್ಮ 19 ಶಾಸಕರ ಬೆಂಬಲ ವಾಪಸ್‌ ಪಡೆಯುತ್ತೇವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಆರ್‌ಜೆಡಿ ಬೈಎಲೆಕ್ಷನ್‌ನ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಂತೆ ಮೈತ್ರಿ ಮುಗಿದ ಅಧ್ಯಾಯ ಎಂದಿದ್ದ ಚರಣ್‌ದಾಸ ಈಗ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಕನ್ಹಯ್ಯಕುಮಾರ್‌ ಮೇಲೆ ಭಾರಿ ಭರವಸೆ ಇರಿಸಿದೆ. ಕನ್ಹಯ್ಯ ಬಿಹಾರದ ಭವಿಷ್ಯದ ನಾಯಕ ಎಂದು ಬಣ್ಣಿಸಿದೆ.